ವಕ್ಫ್​ ವಿಚಾರದಲ್ಲಿ ಮುಸ್ಲಿಮರ ಪರವಾಗಿ ನಿಲ್ಲಿ, ಚರ್ಚ್​ಗಳಿಗೆ ಕ್ರಿಶ್ಚಿಯನ್ ಸಂಸದರ ಮನವಿ

ಟಿಎಂಸಿಯ ಸಂಸದೀಯ ಪಕ್ಷದ ನಾಯಕ ಡೆರೆಕ್ ಒ'ಬ್ರಿಯಾನ್, ಕಾಂಗ್ರೆಸ್ ಸಂಸದರಾದ ಹಿಬಿ ಈಡನ್, ಡೀನ್ ಕುರಿಯಾಕೋಸ್, ಆಂಟೋ ಆಂಟನಿ ಮತ್ತು ಸಿಪಿಐ (ಎಂ) ಸಂಸದ ಜಾನ್ ಬ್ರಿಟ್ಟಾಸ್ ಸಭೆಯಲ್ಲಿ ಭಾಗವಹಿಸಿದ್ದರು.

Update: 2024-12-08 04:10 GMT

ಸಂವಿಧಾನದಲ್ಲಿ ಪ್ರತಿಪಾದಿಸಿರುವ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರುವಂಥ ವಕ್ಫ್ ಮಸೂದೆಯ ವಿಚಾರದಲ್ಲಿ ಮುಸ್ಲಿಮರ ಪರವಾಗಿ ನಿಲ್ಲಬೇಕು ಎಂದು ಕ್ರಿಶ್ಚಿಯನ್ ಸಮುದಾಯದ ಸಂಸದರು ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ)ಯನ್ನು ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ತಾತ್ವಿಕ ನಿಲುವು ತೆಗೆದುಕೊಳ್ಳಬೇಕು ಎಂದು ಡಿಸೆಂಬರ್​ 3ರಂದು ನವ ದೆಹಲಿಯಲ್ಲಿ ನಡೆದ ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಭಾರತದ ಕ್ಯಾಥೊಲಿಕರ ಅತ್ಯುನ್ನತ ಸಂಸ್ಥೆಯಾದ ಸಿಬಿಸಿಐ ಡಿಸೆಂಬರ್ 3 ರಂದು ಎಲ್ಲಾ ಕ್ರಿಶ್ಚಿಯನ್ ಸಂಸದರ ಸಭೆಯನ್ನು ಕರೆದಿತ್ತು. ಸಭೆಯಲ್ಲಿ ಸುಮಾರು 20 ಸಂಸದರು ಭಾಗವಹಿಸಿದ್ದರು. ಅವರಲ್ಲಿ ಹೆಚ್ಚಿನವರು ವಿರೋಧ ಪಕ್ಷಗಳಿಂದ ಆಯ್ಕೆಯಾದವರಾಗಿದ್ದಾರೆ.

ಟಿಎಂಸಿಯ ಸಂಸದೀಯ ಪಕ್ಷದ ನಾಯಕ ಡೆರೆಕ್ ಒ'ಬ್ರಿಯಾನ್, ಕಾಂಗ್ರೆಸ್ ಸಂಸದರಾದ ಹಿಬಿ ಈಡನ್, ಡೀನ್ ಕುರಿಯಾಕೋಸ್, ಆಂಟೋ ಆಂಟನಿ ಮತ್ತು ಸಿಪಿಐ (ಎಂ) ಸಂಸದ ಜಾನ್ ಬ್ರಿಟ್ಟಾಸ್ ಸಭೆಯಲ್ಲಿ ಭಾಗವಹಿಸಿದ್ದರು.

ಸಿಬಿಸಿಐ ಅಧ್ಯಕ್ಷ ಆರ್ಚ್ ಬಿಷಪ್ ಆಂಡ್ರ್ಯೂಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದು ದಶಕಗಳಲ್ಲಿ ನಡೆದ ಮೊದಲ ಸಭೆಯಾಗಿದೆ.

ಸಮುದಾಯ ಮತ್ತು ಅದರ ಹಕ್ಕುಗಳನ್ನು ರಕ್ಷಿಸುವಲ್ಲಿ ಕ್ರಿಶ್ಚಿಯನ್ ಸಂಸದರ ಪಾತ್ರ, ಕ್ರಿಶ್ಚಿಯನ್ನರ ವಿರುದ್ಧ ಹೆಚ್ಚುತ್ತಿರುವ ದಾಳಿಗಳು ಮತ್ತು ಬೆದರಿಕೆಗಳು ಮತ್ತು ಕ್ರಿಶ್ಚಿಯನ್ ಸಂಸ್ಥೆಗಳನ್ನು ಗುರಿಯಾಗಿಸಲು ಎಫ್​​ಸಿಆರ್​ಎ ದುರುಪಯೋಗ ಸಭೆಯ ಕಾರ್ಯಸೂಚಿಗಳಾಗಿದ್ದವು.

ಶಿಕ್ಷಣ ಸಂಸ್ಥೆಯ ಉಳಿವು

ಸಮುದಾಯದ ನಾಯಕರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಸಕಾರಾತ್ಮಕ ಅಂಶಗಳನ್ನು ಎತ್ತಿ ತೋರಿಸಬೇಕು. ನಕಾರಾತ್ಮಕ ಸುದ್ದಿಗಳಿಗೆ ಮಾತ್ರ ಪ್ರತಿಕ್ರಿಯಿಸಬಾರದು. ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿನ ನಾಲ್ಕು ವಿದ್ಯಾರ್ಥಿಗಳಲ್ಲಿ ಮೂವರು ವಿಭಿನ್ನ ಸಮುದಾಯಗಳಿಗೆ ಸೇರಿದವರು. ಇಂಥ ಸಂಗತಿಗಳನ್ನು ಸರ್ಕಾರ ಮತ್ತು ಸಾರ್ವಜನಿಕರಿಗೆ ತಿಳಿಸಬೇಕು ಎಂಬ ಸಲಹೆ ವ್ಯಕ್ತಗೊಂಡಿತು.

ಕ್ರಿಶ್ಚಿಯನ್ ಸಮುದಾಯದ ಜನಪ್ರತಿನಿಧಿಗಳು "ಸಂವಿಧಾನ ರಕ್ಷಿಸದವರನ್ನು ವಿರೋಧಿಸುವ " ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು. ಈಗ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಪರಿಗಣನೆಯಲ್ಲಿರುವ ವಕ್ಫ್ (ತಿದ್ದುಪಡಿ) ಮಸೂದೆಯ ಕೆಲವು ತಿದ್ದುಪಡಿಗಳಿಗೆ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸಭೆಯಲ್ಲಿ ಸಂಸದರೊಬ್ಬರು ದೃಢಪಡಿಸಿದ್ದಾರೆ.

ಲೋಕಸಭೆ ಮತ್ತು 10 ರಾಜ್ಯ ವಿಧಾನಸಭೆಗಳಲ್ಲಿ ಆಂಗ್ಲೋ ಇಂಡಿಯನ್ನರಿಗೆ (ಎಲ್ಲಾ ಕ್ರಿಶ್ಚಿಯನ್ನರು) ಸ್ಥಾನಗಳನ್ನು ರದ್ದುಗೊಳಿಸುವ ವಿಷಯ ಚರ್ಚಗೆ ಬಂತು. ಇತ್ತೀಚಿನ ವರ್ಷಗಳಲ್ಲಿ ಕೆಲವು ಕ್ರಿಶ್ಚಿಯನ್ ಸಂಘಟನೆಗಳಿಗೆ ಮಾರಕವಾಗಿರುವ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್​ಸಿಆರ್​ಎ ) ಪರವಾನಗಿಗಳನ್ನು ಸಹ ಪ್ರಸ್ತಾಪಿಸಲಾಯಿತು ಎಂದು ಕೇರಳದ ಮತ್ತೊಬ್ಬ ಸಂಸದ ಪಿಟಿಐಗೆ ತಿಳಿಸಿದ್ದಾರೆ.

"ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. 2014ರಿಂದ ಸರ್ಕಾರದೊಂದಿಗಿನ ಸಂಬಂಧವನ್ನು ಚರ್ಚ್ ನಾಯಕತ್ವ ನಿರ್ವಹಿಸಿದ ರೀತಿಯನ್ನು ಸಂಸದರು ತೀವ್ರವಾಗಿ ಟೀಕಿಸಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಕುರಿಯನ್ ಬರುವ ಹೊತ್ತಿಗೆ ಹೆಚ್ಚಿನ ವಿರೋಧ ಪಕ್ಷದ ಸಂಸದರು ಮಾತನಾಡಿದ್ದರು ಎಂದು ಮೂಲಗಳು ತಿಳಿಸಿವೆ. ಇನ್ನಿಬ್ಬರು ಬಿಜೆಪಿ ಸಂಸದರು, ಗೈರು ಹಾಜರಾಗಿದ್ದರು.

ಬಿಜೆಪಿಯ ಸುರೇಶ್ ಗೋಪಿ ಗೆದ್ದ ತ್ರಿಶೂರ್ ಲೋಕಸಭಾ ಚುನಾವಣಾ ಫಲಿತಾಂಶದ ವಿಷಯವನ್ನು ಕನಿಷ್ಠ ಇಬ್ಬರು ಸಂಸದರು ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ.

Tags:    

Similar News