ಹೊಟ್ಟೆ ನೋವಿಗೆ ಗೋಮೂತ್ರ ರಾಮಬಾಣ : ಐಐಟಿ ಮದ್ರಾಸ್‌ ನಿರ್ದೇಶಕರ ಭಾಷಣದ ವಿಡಿಯೊ ವೈರಲ್‌

ಕೆಲವರು ಕಾಮಕೋಟಿ ಅವರ ಹೇಳಿಕೆಯನ್ನು ಸಾವಯವ ರೈತರಾಗಿರುವ ಅವರ ವೈಯಕ್ತಿಕ ಹೇಳಿಕೆ ಎಂದು ಹೇಳಿದರೆ ಇನ್ನೂ ಹಲವರು ವೈಜ್ಞಾನಿಕ ಪಾಠ ಮಾಡಬೇಕಾದವು ಮೌಢ್ಯ ತುಂಬುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.;

Update: 2025-01-19 11:35 GMT
ವೈರಲ್‌ ಆಗಿರುವ ಕಾಮಕೋಟಿ ಅವರು ಭಾಷಣದ ಚಿತ್ರ.

ಐಐಟಿ ಮದ್ರಾಸ್ ನಿರ್ದೇಶಕ ವಿ ಕಾಮಕೋಟಿ ಅವರು ಗೋಮೂತ್ರದ ಔಷಧೀಯ ಮೌಲ್ಯವನ್ನು ಹೊಗಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೋಮೂತ್ರ ಕುಡಿದರೆ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುವುದು ಎಂದು ಅವರು ಹೇಳಿರುವುದು ನಾನಾ ರೀತಿಯ ಪ್ರಶ್ನೆಗಳಿಗೆ ಕಾರಣವಾಗಿದೆ. 

ಅವರ ಹೇಳಿಕೆಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಇದನ್ನು ಸಾವಯವ ರೈತರಾಗಿರುವ ಅವರ ವೈಯಕ್ತಿಕ ಹೇಳಿಕೆ ಎಂದು ಸಮರ್ಥಿಸಿಕೊಂಡರೆ, ಇನ್ನೂ ಹಲವರು ವೈಜ್ಞಾನಿಕ ಪಾಠ ಮಾಡಬೇಕಾದವರು ಮೌಢ್ಯ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ವಿಡಿಯೊ ದೃಶ್ಯಗಳಲ್ಲಿ ವಿ ಕಾಮಕೋಟಿ ಅವರು, ಗೋಮೂತ್ರವು ಬ್ಯಾಕ್ಟೀರಿಯಾ ನಿರೋಧಕ , ಶಿಲೀಂಧ್ರ ನಿರೋಧಕ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕರ  ಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಅದು ಉದರ ಬಾಧೆಗೆ ಪರಿಹಾರ ಎಂಬುದಾಗಿಯೂ ನುಡಿದಿದ್ದಾರೆ.  ತೀವ್ರ ಜ್ವರ ಬಂದಿದ್ದ ಸನ್ಯಾಸಿಯೊಬ್ಬರು ಗೋಮೂತ್ರ ಸೇವಿಸಿದ ಘಟನೆಯನ್ನುಅವರು ವಿಡಿಯೊದಲ್ಲಿ ವಿವರಿಸಿದ್ದಾರೆ. ಮಾಟು ಪೊಂಗಲ್ (ಜನವರಿ 15, 2025) ದಿನದಂದು ಅವರು ಗೋ ಸಂರಕ್ಷಣಾ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ನಡೆಸಿದ ಭಾಷಣದಲ್ಲಿ ಅವರು ಈ ಭಾಷಣ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಮುಖಂಡ ಕಾರ್ತಿ ಪಿ.ಚಿದಂಬರಂ ಈ ಹೇಳಿಕೆಯನ್ನು ಖಂಡಿಸಿದ್ದು, "ಐಐಟಿ ನಿರ್ದೇಶಕರು ಹುಸಿ ವಿಜ್ಞಾನವನ್ನು ಹರಡುತ್ತಿರುವುದು ಅಸಮಂಜಸ" ಎಂದು ಹೇಳಿದ್ದಾರೆ. . ಕಾಮಕೋಟಿ ಅವರು ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಅಲ್ಲಿ ಸಂಸ್ಥೆಯ ಮೂಲಗಳು ದೃಢಪಡಿಸಿವೆ.  ಕಾಮಕೋಟಿ ಅವರು 'ಸಾವಯವ ರೈತ', ಗೋಶಾಲೆ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ವಿಶಾಲ ವ್ಯಾಪ್ತಿ ಹೊಂದಿದೆ ಎಂಬುದು ಮೂಲಗಳ ದೃಢೀಕರಣವಾಗಿದೆ. 

Tags:    

Similar News