UNION BUDGET 2024: ಎಂಎಸ್‌ಎಂಇಗಳಿಗೆ ಸಾಲ ನೀಡಲು ಕ್ರೆಡಿಟ್ ಗ್ಯಾರಂಟಿ ಯೋಜನೆ
ಸಾರ್ವಜನಿಕ ವಲಯದ ಬ್ಯಾಂಕುಗಳು ಎಂಎಸ್‌ಎಂಇಗಳ ಸಾಲ ಮೌಲ್ಯಮಾಪನಕ್ಕಾಗಿ ಆಂತರಿಕ ಸಾಮರ್ಥ್ಯವನ್ನು ನಿರ್ಮಿಸಲು ಸಚಿವೆ ಸೂಚಿಸಿದರು.;
ಮೇಲಾಧಾರ ಅಥವಾ ಮೂರನೆಯವರ ಖಾತ್ರಿ ಇಲ್ಲದೆ ಅವಧಿ ಸಾಲ ನೀಡುವಿಕೆಯನ್ನು ಸುಲಭಗೊಳಿಸಲು ಎಂಎಸ್‌ಎಂಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಹೇಳಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಎಂಎಸ್‌ಎಂಇಗಳ ಸಾಲ ಮೌಲ್ಯಮಾಪನಕ್ಕಾಗಿ ಆಂತರಿಕ ಸಾಮರ್ಥ್ಯವನ್ನು ನಿರ್ಮಿಸಲು ಹೇಳಿದರು.
ವಲಯವನ್ನು ಉತ್ತೇಜಿಸುವ ಕ್ರಮಗಳ ಭಾಗವಾಗಿ, ಸರ್ಕಾರವು ಎಂಎಸ್‌ಎಂಇ ಖರೀದಿದಾರರ ಟ್ರೆಡ್(TRED) ವೇದಿಕೆಯಲ್ಲಿ ಕಡ್ಡಾಯ ವಹಿವಾಟು ಮಿತಿಯನ್ನು 500 ಕೋಟಿ ರೂ.ನಿಂದ 250 ಕೋಟಿ ರೂ.ಗೆ ಕಡಿಮೆ ಮಾಡುತ್ತದೆ. ಟಿಆರ್‌ಡಿಎಸ್ ಎಂಎಸ್‌ಎಂಇಗಳಿಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಸಹಾಯ ಮಾಡಲು ಆನ್‌ಲೈನ್ ವೇದಿಕೆಯಾಗಿದೆ.
ಎಂಎಸ್‌ಎಂಇ ಕ್ಲಸ್ಟರ್‌ಗಳಿಗೆ ಸೇವೆ ಸಲ್ಲಿಸಲು ಸಿಡ್‌ಬಿ(SIDBI) 24 ಹೊಸ ಶಾಖೆಗಳನ್ನು ತೆರೆಯುತ್ತದೆ. ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ನೀಡಲಾಗುತ್ತಿದೆ ಎಂದು ಸಚಿವೆ ಹೇಳಿದ್ದಾರೆ.
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ ಜನ್ಮನ್)ದ ಅಡಿಯಲ್ಲಿ ಸರ್ಕಾರವು ಸ್ಯಾಚುರೇಶನ್ ಅಭಿಯಾನವನ್ನು ಪ್ರಾರಂಭಿಸುತ್ತದೆ.