Maha Elections | ಇಂಡಿ ಒಕ್ಕೂಟದ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿ ಬೆಂಬಲಿಸಲು ಸಿದ್ಧ: ಉದ್ಧವ್‌ ಠಾಕ್ರೆ

Update: 2024-10-08 12:07 GMT

ಮಹಾಯುತಿ  ಘಟಬಂಧನದ ಪಕ್ಷಗಳಾದ ಬಿಜೆಪಿ ಮತ್ತು ಏಕನಾಥ ಶಿಂಧೆ-ಶಿವಸೇನಾದಿಂದ ಮಹಾರಾಷ್ಟ್ರವನ್ನು ಮುಕ್ತಿಗೊಳಿಸಲು  ಇಂಡಿ ಒಕ್ಕೂಟದ  ಕಾಂಗ್ರೆಸ್ ಅಥವಾ ಎನ್‌ಸಿಪಿ (ಎಸ್‌ಪಿ) ಘೋಷಿಸುವ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಶಿವಸೇನಾ (ಉದ್ಧವ್‌ ಬಾಳಾ ಸಾಹೇಬ್‌ ಠಾಕ್ರೆ- ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಂಗಳವಾರ ಘೋಷಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಅವರು, ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮಹಾರಾಷ್ಟ್ರ ಸರ್ಕಾರವು ಜಾಹೀರಾತುಗಳ ಮೂಲಕ ರಾಜ್ಯದಲ್ಲಿ ನಕಲಿ ನಿರೂಪಣೆಗಳನ್ನು ಅರಂಭಿಸಿ ಜನರ ಹಾದಿ ತಪ್ಪಿಸುತ್ತಿದೆ  ಎಂದು ಆರೋಪಿಸಿದರು.

ಮಹಾಯುತಿ ಸರ್ಕಾರದ ಪ್ರಮುಖ ಲಡ್ಕಿ ಬಹಿನ್ ಯೋಜನೆಯಡಿಯಲ್ಲಿ ರಾಜ್ಯದ ಅರ್ಹ ಮಹಿಳೆಯರಿಗೆ 1,500 ರೂ ನೀಡಲಾಗುತ್ತದೆ. ಆದರೆ,  ಸರ್ಕಾರವು ಜನರು ತಮ್ಮ ಸ್ವಂತ ಹಣವನ್ನು (ಯೋಜನೆಯ ಮೂಲಕ) ನೀಡುವ ಮೂಲಕ "ಮಹಾರಾಷ್ಟ್ರ ಧರ್ಮ" ಕ್ಕೆ ದ್ರೋಹ ಮಾಡಲು ಪ್ರಯತ್ನಿಸುತ್ತಿದೆ ಎಂದು  ಆರೋಪಿಸಿದರು. 

ಮಹಾರಾಷ್ಟ್ರವನ್ನು ಉಳಿಸಲು ಕಾಂಗ್ರೆಸ್ ಅಥವಾ ಎನ್‌ಸಿಪಿ (ಎಸ್‌ಪಿ) ಘೋಷಿಸಿದ ಯಾವುದೇ ಸಿಎಂ ಮುಖವನ್ನು ನಾನು ಬೆಂಬಲಿಸುತ್ತೇನೆ ಎಂದು ಠಾಕ್ರೆ ಸ್ಪಷ್ಟವಾಗಿ ಹೇಳಿದ್ದಾರೆ. ಆಗಸ್ಟ್‌ನಲ್ಲಿ, ಯಾರು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಾರೆ ಹಾಗೂ ಅದರ ಮೇಲೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವುದಿಕ್ಕಿಂತ ಮೊದಲೇ  ಮಹಾರಾಷ್ಟ್ರ ವಿಕಾಸ ಅಘಾಡಿ ( MVA ) ಮಿತ್ರಪಕ್ಷ ಒಕ್ಕೂಟದ  ಮುಖ್ಯಮಂತ್ರಿ  ಮುಖವನ್ನು ನಿರ್ಧರಿಸಲು ಠಾಕ್ರೆ ಒತ್ತಾಯಿಸಿದರಲ್ಲದೆ ಕಾಂಗ್ರೆಸ್ ಮತ್ತು NCP (SP) ಘೋಷಿಸಿದ ಯಾವುದೇ ಅಭ್ಯರ್ಥಿಯನ್ನು ತಾವೂ  ಬೆಂಬಲಿಸುವುದಾಗಿ ಪ್ರತಿಪಾದಿಸಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದೆ.

Similar News