ಹಳಿ ಮೇಲೆ ಕುಳಿತು ಪಬ್‌ಜಿ ಆಡುತ್ತಿದ್ದ ಮೂರು ಮಕ್ಕಳು ರೈಲು ಹರಿದು ಸಾವು
ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನರ್ಕಟಿಯಾಗಂಜ್-ಮುಜಾಫರ್ಪುರ ರೈಲು ವಿಭಾಗದ ಮಾನಸಾ ತೋಲಾದ ರಾಯಲ್ ಶಾಲೆಯ ಬಳಿ ಈ ಆಘಾತಕಾರಿ ಘಟನೆ ಸಂಭವಿಸಿದೆ.;
ಮೊಬೈಲ್ ಗೇಮ್ ಮಕ್ಕಳಿಗೆ ಅತ್ಯಂತ ಅಪಾಯಕಾರಿಯಾಗುತ್ತಿದೆ ಎಂಬುದಕ್ಕೆ ನಾನಾ ಸಾಕ್ಷಿಗಳು ದೊರೆಯುತ್ತಿವೆ. ಅಂತೆಯೇ ಹಳಿಯ ಮೇಲೆ ಕುಳಿತು ಪಬ್‌ಜಿ ಆಡುತ್ತಿದ್ದ ಮಕ್ಕಳ ಮೇಲೆ ರೈಲು ಹರಿದು ಅವರು ಮೃತಪಟ್ಟ ಘಟನೆ ನಡೆದಿದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನರ್ಕಟಿಯಾಗಂಜ್-ಮುಜಾಫರ್ಪುರ ರೈಲು ವಿಭಾಗದ ಮಾನಸಾ ತೋಲಾದ ರಾಯಲ್ ಶಾಲೆಯ ಬಳಿ ಈ ಆಘಾತಕಾರಿ ಘಟನೆ ಸಂಭವಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಕ್ಕಳು ಇಯರ್‌ಫೊನ್‌ಗಳನ್ನು ಧರಿಸಿಕೊಂಡು ಆಟವಾಡುತ್ತಿದ್ದರು. ಹೀಗಾಗಿ ರೈಲು ಬಂದಿದ್ದೇ ಅವರಿಗೆ ಗೊತ್ತಾಗಿರಲಿಲ್ಲ. ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅಪಘಾತಕ್ಕೆ ಕಾರಣವಾದ ನಿಖರ ಕಾರಣ ಪತ್ತೆ ಹಚ್ಚಿಲ್ಲ.
ಮೃತ ಮಕ್ಕಳನ್ನು ರೈಲ್ವೆ ಗುಮ್ತಿ ನಿವಾಸಿ ಫುರ್ಕಾನ್ ಆಲಂ, ಸಮೀರ್ ಆಲಂ, ಹಬೀಬುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕತ್ತಲು ಕವಿದಿತ್ತು, ಈ ವೇಳೆ ರೈಲು ಬಂದು ಅವರ ಮೇಲೆ ಹರಿದಿದೆ.
ಅಪಘಾತದ ಸಂದರ್ಭಗಳನ್ನು ತನಿಖೆ ಮಾಡಲು ಸ್ಥಳೀಯ ಆಡಳಿತ ಮತ್ತು ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
"ಅಪಘಾತದ ನಿಜವಾದ ಕಾರಣ ಕಂಡುಹಿಡಿಯಲು ನಾವು ಸಂತ್ರಸ್ತರ ಕುಟುಂಬ ಸದಸ್ಯರಿಂದ ಹೇಳಿಕೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ರೈಲ್ವೆ ಹಳಿಯ ಮೇಲೆ ಕುಳಿತು ಮೊಬೈಲ್ ಫೋನ್‌ಗಳಲ್ಲಿ ಗೇಮ್ ಆ ಗೇಮ್ ಆಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತನಿಖಾಧಿಕಾರಿ ವಿವೇಕ್ ದೀಪ್ ತಿಳಿಸಿದ್ದಾರೆ.