ಹೈದರಾಬಾದ್‌ನಲ್ಲಿ ಆಘಾತಕಾರಿ ಘಟನೆ: ಕಾರಿನೊಳಗೆ ಉಸಿರುಗಟ್ಟಿ ಇಬ್ಬರು ಮಕ್ಕಳ ದಾರುಣ ಸಾವು

ಮಕ್ಕಳು ತಮ್ಮ ಮನೆಯ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಪ್ರವೇಶಿದ್ದು, ಮನೆ ಮಂದಿ ಅವರು ಆಟವಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ಮಕ್ಕಳು ಆಡುತ್ತಲೇ ಕಾಲಿನ ಡೋರ್ ಲಾಕ್​ ಆಗಿದ್ದು, ಅವರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ.;

Update: 2025-04-15 08:29 GMT

ಪ್ರಾತಿನಿಧಿಕ ಚಿತ್ರ.

ಮಕ್ಕಳಿರುವ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಕೆಲವೊಮ್ಮೆ ಸಣ್ಣ ನಿರ್ಲಕ್ಷ್ಯವು ದೊಡ್ಡ ದುರಂತಕ್ಕೆ ಕಾರಣವಾಗಬಹುದು. ತೆಲಂಗಾಣದ ಹೈದರಾಬಾದ್‌ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಐದು ವರ್ಷದ ತನ್ಮಯಶ್ರೀ ಹಾಗೂ ನಾಲ್ಕು ವರ್ಷದ ಅಭಿನಯಶ್ರೀ ಮೃತಪಟ್ಟವರು. ಅವರು ತಮ್ಮ ಅಜ್ಜನ ಮನೆಗೆ ಮದುವೆ ಕಾರ್ಯಕ್ರಮಕ್ಕೆಂದು ಪೋಷಕರ ಜತೆಗೆ ಹೋಗಿದ್ದರು. ಈ ನಡುವ ದುರ್ಘಟನೆ ಸಂಭವಿಸಿದೆ.

ಹೈದರಾಬಾದ್‌ನ ಒಂದು ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೋಷಕರ ಅರಿವೇ ಇಲ್ಲದೆ ಇಬ್ಬರು ಮೃತಪಡುವಂತಾಗಿದೆ. ಮಕ್ಕಳು ತಮ್ಮ ಮನೆಯ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಪ್ರವೇಶಿದ್ದು, ಮನೆ ಮಂದಿ ಅವರು ಆಟವಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದರು. ಆದರೆ ಮಕ್ಕಳು ಆಡುತ್ತಲೇ ಕಾಲಿನ ಡೋರ್ ಲಾಕ್​ ಆಗಿದ್ದು, ಅವರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಕಾರಿನೊಳಗಿನ ಗಾಳಿಯ ಕೊರತೆಯಿಂದಾಗಿ ಮಕ್ಕಳಿಬ್ಬರೂ ಉಸಿರುಗಟ್ಟಿ ಒದ್ದಾಡಿ ಮೃತಪಟ್ಟಿದ್ದಾರೆ.

ಮನೆಯವರೆಲ್ಲರೂ ಮಕ್ಕಳು ಹೊರಗಡೆ ಆಟವಾಡುತ್ತಿರಬಹುದೆಂದು ಭಾವಿಸಿದ್ದರು. ಕೆಲವು ಸಮಯದ ನಂತರ, ಮಕ್ಕಳು ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬದವರು ಆತಂಕಗೊಂಡು ಹುಡುಕಾಟ ಆರಂಭಿಸಿದರು. ಹಲವು ಕಡೆ ಹುಡುಕಿದ ನಂತರ, ಕೊನೆಗೆ ಕಾರಿನೊಳಗೆ ಮಕ್ಕಳು ಬಿದ್ದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಕೊಂಡೊಯ್ದರೂ ಆ ಮೊದಲೇ ಮಕ್ಕಳಿಬ್ಬರೂ ಜೀವ ಕಳೆದುಕೊಂಡಿದ್ದರು.

ಎಚ್ಚರ ವಹಿಸಿ

  • ಈ ದುರಂತವು ಮಕ್ಕಳಿರುವ ಕುಟುಂಬಗಳಿಗೆ ಒಂದು ಎಚ್ಚರಿಕೆಯ ಘಟನೆಯಾಗಿದೆ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸಣ್ಣ ವಿಷಯಗಳನ್ನೂ ನಿರ್ಲಕ್ಷಿಸಬಾರದು.
  • ಕಾರಿನಂತಹ ಸ್ಥಳಗಳು ಮಕ್ಕಳಿಗೆ ಆಕರ್ಷಕವಾಗಿ ಕಾಣಬಹುದು, ಆದರೆ ಅವು ಅಪಾಯಕಾರಿಯೂ ಆಗಿರಬಹುದು. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಇಂತಹ ದುರಂತಗಳನ್ನು ತಡೆಗಟ್ಟಬಹುದು:
  • ಕಾರಿನ ಬಾಗಿಲುಗಳನ್ನು ಯಾವಾಗಲೂ ಲಾಕ್ ಮಾಡಿರಬೇಕು. ಮಕ್ಕಳು ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು.
  • ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಮಕ್ಕಳು ಎಲ್ಲಿ, ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನವಿರಬೇಕು.  
Tags:    

Similar News