ಕೆಲಸ ಕಳೆದುಕೊಳ್ಳುವ ಆತಂಕ; ನರ್ಸರಿ ಮಗುವನ್ನು ಕೊಂದ ಶಾಲಾ ಸಿಬ್ಬಂದಿ

ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಮಗುವನ್ನು ಆರೋಪಿ ಶೌಚಾಲಯಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ದೂರಿನ ಪ್ರಕಾರ ಶಾಲಾ ಸಿಬ್ಬಂದಿ ಮಗುವಿನ ಮೇಲೆ ಪದೇ ಪದೇ ಹಲ್ಲೆ ನಡೆಸಿ, ಮಗುವಿನ ಮೇಲೆ ಕಾಲಿನಿಂದ ತುಳಿದಿದ್ದಾರೆ.

Update: 2025-12-01 06:45 GMT

ಸಾಂದರ್ಭಿಕ ಚಿತ್ರ

Click the Play button to listen to article

ತಾಯಿ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ  ಮಗುವನ್ನು ಮನಬಂದಂತೆ ಥಳಿಸಿ, ತುಳಿದು ಕೊಲೆ ಮಾಡಿರುವ ಮನಕಲಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಗುವಿಗೆ ಶಾಲಾ ಸಿಬ್ಬಂದಿ ಥಳಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿ ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಮಗುವನ್ನು ಆರೋಪಿ ಶೌಚಾಲಯಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ದೂರಿನ ಪ್ರಕಾರ ಶಾಲಾ ಸಿಬ್ಬಂದಿ ಮಗುವಿನ ಮೇಲೆ ಪದೇ ಪದೇ ಹಲ್ಲೆ ನಡೆಸಿ, ಮಗುವಿನ ಮೇಲೆ ಕಾಲಿನಿಂದ ತುಳಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದೆ. ನೆಲಕ್ಕೆ ತಳ್ಳಿ ತಲೆಗೆ ಹೊಡೆದು, ಕತ್ತು ಹಿಸುಕಿ ಕೊಂದಿದ್ದು ಆರೋಪಿಯನ್ನು ಲಕ್ಷ್ಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಮೇಲೆ ದ್ವೇಷ ಏಕೆ ? 

ನರ್ಸರಿಯಲ್ಲಿ ಕಲಿಯುತ್ತಿದ್ದ ಮಗುವಿನ ತಾಯಿ ಅದೇ ಶಾಲಿಯಲ್ಲಿ ವಾಹನ ಕ್ಲೀನರ್‌ ಆಗಿ ಕೆಲಸ ಮಾಡುತ್ತಿದ್ದರು. ಮಗುವಿನ ತಾಯಿ ಮಕ್ಕಳನ್ನು ಬಿಡಲು ಹೋದಾಗ ಈ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಮಗುವಿನ ತಾಯಿ ತನ್ನ ಕೆಲಸವನ್ನು ಕಸಿದುಕೊಳ್ಳಬಹುದು ಎಂಬ ಭಯದಿಂದ ಆರೋಪಿ ಲಕ್ಷ್ಮಿ, ಮಗುವನ್ನು ಕೊಲೆ ಮಾಡಿರಬಹುದು. ಶಾಲೆಯ ಇತರ ಪೋಷಕರು ಸಿಬ್ಬಂದಿ ಮೇಲೆ ಇಲ್ಲಿಯವರೆಗೂ ಮಕ್ಕಳ ಮೇಲೆ ಹಲ್ಲೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ. ಇದು ವಿಶೇಷವಾದ ಪ್ರಕರಣದ ರೀತಿ ಕಾಣುತ್ತಿದೆ. ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಈ ಘಟನೆಯನ್ನು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

Tags:    

Similar News