ತೆಲಂಗಾಣ ಸುರಂಗ ಕುಸಿತ: ಮಣ್ಣಿನ ಅವಶೇಷಗಳಲ್ಲಿ 5 ಮೃತದೇಹಗಳು ಪತ್ತೆ
ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎನ್ಜಿಆರ್ಐ) ನಿಯೋಜಿಸಿದ ಗ್ರೌಂಡ್ ಪೆನೆಟ್ರೇಷನ್ ರಾಡಾರ್ (ಜಿಪಿಆರ್) ಸಹಾಯದಿಂದ ಶವಗಳನ್ನು ಪತ್ತೆಹಚ್ಚಲಾಗಿದೆ ಎಂದು ಸ್ಥಳದಲ್ಲಿನ ಮೂಲಗಳು ದ ಫೆಡರಲ್ಗೆ ತಿಳಿಸಿವೆ.;
ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಸುರಂಗ ಯೋಜನೆಯ ಕಾಮಗಾರಿ ವೇಳೆ ಕುಸಿತ ಸಂಭವಿಸಿದ ಪ್ರದೇಶದಲ್ಲಿ ಐದು ಕಾರ್ಮಿಕರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಸುರಂಗದ ಒಂದು ಭಾಗ ಕುಸಿದ ಆರು ದಿನಗಳ ನಂತರ ದೇಹಗಳು ಪತ್ತೆಯಾಗಿವೆ. ಸುರಂಗದೊಳಗಿನ ಮಣ್ಣಿನಲ್ಲಿ ಐದು ಶವಗಳು ಹೂತುಹೋಗಿವೆ ಎಂದು ಅಧಿಕಾರಿಯೊಬ್ಬರು ಶನಿವಾರ (ಮಾರ್ಚ್ 1) ತಿಳಿಸಿದ್ದಾರೆ. ಒಳಗೆ ಸಿಲುಕೊಂಡಿರುವ ಮೂವರು ಕಾರ್ಮಿಕರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
"ಐದು ಶವಗಳು ಪತ್ತೆಯಾಗಿವೆ. ಮಣ್ಣಿನಿಂದ ಶವಗಳನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆಎಂದು ನಾಗರ್ ಕರ್ನೂಲ್ ನ ಹೆಚ್ಚುವರಿ ಕಲೆಕ್ಟರ್ ಬಿ ದೇವಸಹಾಯಂ 'ದ ಫೆಡರಲ್ ತೆಲಂಗಾಣ'ಕ್ಕೆ ತಿಳಿಸಿದ್ದಾರೆ.
'ದ ಫೆಡರಲ್' ತಂಡವು ಅವಘಡ ನಡೆದ ಸ್ಥಳದಿಂದ ವರದಿ ಮಾಡುತ್ತಿದ್ದು, ಅವಘಡದ ಕುರಿತು ವರದಿಗಳನ್ನು ನೀಡುತ್ತಿದೆ.
ರಾಷ್ಟ್ರೀಯ ಭೂಭೌತಿಕ ಸಂಶೋಧನಾ ಸಂಸ್ಥೆ (ಎನ್ಜಿಆರ್ಐ) ನಿಯೋಜಿಸಿದ ಗ್ರೌಂಡ್ ಪೆನೆಟ್ರೇಷನ್ ರಾಡಾರ್ (ಜಿಪಿಆರ್) ಸಹಾಯದಿಂದ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. "ರಾಡಾರ್ ಸುರಂಗದ ಪ್ರದೇಶವನ್ನು ಸ್ಕ್ಯಾನ್ ಮಾಡಿದೆ. ಮೃತದೇಹಗಳನ್ನು ಸುರಂಗದಿಂದ ಹೊರತೆಗೆದಾಗ ಮಾತ್ರ ಗುರುತಿಸಲು ಸಾಧ್ಯ ಎಂದು ಮೂಲಗಳು ತಿಳಿಸಿವೆ.
ಎಂಟು ಮಂದಿಯಲ್ಲಿ ಇಬ್ಬರು ಎಂಜಿನಿಯರ್ಗಳು, ಇಬ್ಬರು ನಿರ್ವಾಹಕರು ಮತ್ತು ಉಳಿದ ನಾಲ್ವರು ಜಾರ್ಖಂಡ್ ಮೂಲದ ಕಾರ್ಮಿಕರಾಗಿದ್ದಾರೆ. ಇಬ್ಬರು ಎಂಜಿನಿಯರ್ಗಳು ಮತ್ತು ನಾಲ್ವರು ಕಾರ್ಮಿಕರು ಎಸ್ಎಲ್ಬಿಸಿ ಸುರಂಗ ಯೋಜನೆಯ ಗುತ್ತಿಗೆ ಪಡೆದಿರುವ ಸಂಸ್ಥೆ ಜೈಪ್ರಕಾಶ್ ಅಸೋಸಿಯೇಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣಾ ನದಿಯ ದೊಡ್ಡ ಶ್ರೀಶೈಲಂ ಅಣೆಕಟ್ಟು ಸಂಕೀರ್ಣದ ಭಾಗವಾಗಿರುವ ಶ್ರೀಶೈಲಂ ಎಡದಂಡೆ ಜಲವಿದ್ಯುತ್ ಯೋಜನೆಯ ಭೂಗತ ವಿದ್ಯುತ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ರಕ್ಷಣಾ ಕಾರ್ಯ ಮುಂದುವರಿಕೆ
ಸೇನೆ, ನೌಕಾಪಡೆ, ಎನ್ಡಿಆರ್ಎಫ್ ತಂಡಗಳು ಸೇರಿದಂತೆ ಅನೇಕ ರಕ್ಷಣಾ ತಂಡಗಳು ಆರು ದಿನಗಳಿಂದ ಎಂಟು ಜನರನ್ನು ರಕ್ಷಿಸಲು ಅವಿರತವಾಗಿ ಶ್ರಮಿಸುತ್ತಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳು ಮತ್ತು ಸುರಂಗಗಳ ತಜ್ಞರನ್ನೂ ಬಳಸಿಕೊಳ್ಳಲಾಗುತ್ತದೆ. ವರದಿಗಳ ಪ್ರಕಾರ, ಸುರಂಗ ಕೆಲಸದಲ್ಲಿ ತೊಡಗಿರುವ ಕೆಲವು ಕಾರ್ಮಿಕರು ಭಯದಿಂದ ಸ್ಥಳವನ್ನು ತೊರೆಯಲು ಪ್ರಾರಂಭಿಸಿದ್ದಾರೆ.
ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯಲ್ಲಿ ಕನಿಷ್ಠ 800 ಜನರು ಕೆಲಸ ಮಾಡುತ್ತಿದ್ದಾರೆ, ಅವರಲ್ಲಿ 300 ಜನರು ಸ್ಥಳೀಯರಾಗಿದ್ದರೆ, ಉಳಿದವರು ಜಾರ್ಖಂಡ್, ಒಡಿಶಾ ಮತ್ತು ಯುಪಿಯಂತಹ ರಾಜ್ಯಗಳಿಂದ ಬಂದವರು.
ಮೂಲಗಳ ಪ್ರಕಾರ, ಸುರಂಗ ಕೆಲಸದಲ್ಲಿ ತೊಡಗಿರುವ ಕೆಲವು ಕಾರ್ಮಿಕರು ಭಯದಿಂದ ಸ್ಥಳವನ್ನು ತೊರೆಯಲು ಪ್ರಾರಂಭಿಸಿದ್ದಾರೆ.