ತಂದೆ ರಾಜಕೀಯ ನಿವೃತ್ತಿಗೆ ಕೆಟಿಆರ್ ಕಾರಣ: ಸುರೇಖಾ
ಇತ್ತೀಚೆಗೆ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದ ಸಚಿವೆ ಸುರೇಖಾ, ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.;
ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್(ಕೆಸಿಆರ್) ಅವರು ಸಾರ್ವಜನಿಕ ಜೀವನದಿಂದ ʻನಾಪತ್ತೆʼ ಯಾಗಲು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಕೆ.ಟಿ. ರಾಮರಾವ್ ಕಾರಣ ಎಂದು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ದೂರಿದ್ದಾರೆ.
ನಟರಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನ ಕುರಿತ ಹೇಳಿಕೆಯಿಂದ ಸೃಷ್ಟಿಯಾದ ವಿವಾದ ತಣ್ಣಗಾಗುವ ಮುನ್ನವೇ ಈ ಹೇಳಿಕೆ ಬಂದಿದೆ. ಕೆಸಿಆರ್ ಅವರ ಕ್ಷೇತ್ರವಾದ ಗಜ್ವೆಲ್‌ನಲ್ಲಿ ಈ ಹೇಳಿಕೆ ನೀಡಿದ್ದು, ʻಕಾಣೆಯಾದ ವ್ಯಕ್ತಿʼ ದೂರು ದಾಖಲಿಸುವಂತೆ ಪಕ್ಷದ ಸದಸ್ಯರಿಗೆ ಒತ್ತಾಯಿಸಿದ್ದಾರೆ.
ಪತ್ನಿಯ ಹುಟ್ಟುಹಬ್ಬ: ಕೆಸಿಆರ್ ತಮ್ಮ ಪತ್ನಿ ಶೋಭಾ ಅವರ ಹುಟ್ಟುಹಬ್ಬ ಆಚರಣೆಯ ಫೋಟೋಗಳನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಸುರೇಖಾ ಅವರ ಆರೋಪ ಬಂದಿದೆ.
ನಾಗಚೈತನ್ಯ ಮತ್ತು ಸಮಂತಾ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ನಟ ನಾಗಾರ್ಜುನ ಅಕ್ಕಿನೇನಿ ಅವರು ಸುರೇಖಾ ಅವರಿಗೆ ಮಾನನಷ್ಟ ನೋಟಿಸ್ ನೀಡಿದ್ದಾರೆ. ಕೆಟಿಆರ್ ಅವರು ಆರ್ಥಿಕ ಪರಿಹಾರ ಕೋರಿ ನೋಟಿಸ್ ಹಾಗೂ ಬೇಷರತ್ ಕ್ಷಮೆಯಾಚಿಸುವಂತೆ ಕೇಳಿದ್ದಾರೆ. ಚಿರಂ ಜೀವಿ, ಜೂನಿಯರ್ ಎನ್ ಟಿಆರ್ ಸೇರಿದಂತೆ ಹಲವು ಹಿರಿಯ ನಟರು ಕೂಡ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ವ್ಯಾಪಕ ಟೀಕೆಗಳ ನಂತರ ಸುರೇಖಾ ಅವರು ಕ್ಷಮೆ ಕೋರಿದ್ದರು. ʻನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಅಥವಾ ಮನನೊಂದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ,ʼ ಎಂದು ಹೇಳಿದ್ದರು.