SpaDeX : ಇಸ್ರೊ ಉಪಗ್ರಹಗಳ ಡಾಕಿಂಗ್ ಯಶಸ್ವಿ
SpaDeX: "ಬಾಹ್ಯಾಕಾಶ ನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ" ಎಂದು ಇಸ್ರೋ ತನ್ನ ಎಕ್ಸ್ (ಹಿಂದೆ ಟ್ವಿಟರ್) ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.;
ಬಾಹ್ಯಾಕಾಶ ಡಾಕಿಂಗ್ ಪ್ರಯೋಗದ (ಸ್ಪೇಡೆಕ್ಸ್) ಭಾಗವಾಗಿ ಉಪಗ್ರಹಗಳ ಡಾಕಿಂಗ್ ಅನ್ನು ಗುರುವಾರ (ಜನವರಿ 16) ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.ಯುಎಸ್ಎ, ರಷ್ಯಾ ಮತ್ತು ಚೀನಾದ ನಂತರ ಯಶಸ್ವಿಯಾಗಿ ಬಾಹ್ಯಾಕಾಶ ಡಾಕಿಂಗ್ (SpaDeX ) ಸಾಧಿಸಿದ ನಾಲ್ಕನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ.
"ಬಾಹ್ಯಾಕಾಶ ನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ" ಎಂದು ಇಸ್ರೋ ತನ್ನ ಎಕ್ಸ್ (ಹಿಂದೆ ಟ್ವಿಟರ್) ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
"ಸ್ಪೇಡೆಕ್ಸ್ ಡಾಕಿಂಗ್ ಪ್ರಕ್ರಿಯೆ ನೋಡೋಣ... 15 ಮೀಟರ್‌ನಿಂದ 3 ಮೀಟರ್ ಹೋಲ್ಡ್ ಪಾಯಿಂಟ್ ವರೆಗೆ ಡಾಕ್ಸ್ ಪೂರ್ಣಗೊಂಡಿದೆ. ಡಾಕಿಂಗ್ ಅನ್ನು ನಿಖರವಾಗಿ ಪ್ರಾರಂಭಿಸಲಾಗಿದ್ದು, ಯಶಸ್ವಿಯಾಗಿ ನೆರವೇರಿದೆ. ಉಪಗ್ರಹ ಜೋಡಣೆಗೊಂಡು ಬೇರ್ಪಡುವ ಪ್ರಕ್ರಿಯೆ ಸುಗಮವಾಗಿ ನಡೆದಿದೆ,. ಸ್ಥಿರತೆ ಕಾಯ್ದುಕೊಳ್ಳಲಾಯಿತು. ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4ನೇ ದೇಶ ಭಾರತವಾಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು. ಭಾರತಕ್ಕೆ ಅಭಿನಂದನೆಗಳು" ಎಂದು ಇಸ್ರೊ ಬರೆದುಕೊಂಡಿದೆ.
ಕಳೆದ ಗುರುವಾರ, ಇಸ್ರೋ ಹೇಳಿಕೆ ಬಿಡುಗಡೆ ಮಾಡಿ, ಸ್ಪೇಡೆಕ್ಸ್ ಸಮಯದಲ್ಲಿ ಉಪಗ್ರಹಗಳ ನಡುವಿನ ಚಲನೆ ತಡೆಯಲಾಗಿದೆ. ಬಾಹ್ಯಾಕಾಶ ನೌಕೆಯನ್ನು ಪರಸ್ಪರ ಹತ್ತಿರವಾಗಲು ನಿಧಾನಗತಿಯ ಡ್ರಿಫ್ಟ್ ಮಾಡಲಾಗುತ್ತಿದೆ ಎಂದು ಹೇಳಿತ್ತು.
"ಡ್ರಿಫ್ಟ್ ಅನ್ನು ತಡೆಹಿಡಿಯಲಾಗಿದೆ ಮತ್ತು ಬಾಹ್ಯಾಕಾಶ ನೌಕೆಗಳು ಪರಸ್ಪರ ಹತ್ತಿರವಾಗಲು ನಿಧಾನಗತಿಯ ನಡೆ ಮಾಡಲಾಗುತ್ತಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೋ ಹಿಂದೆ ಜನವರಿ 7 ಮತ್ತು ನಂತರ ಜನವರಿ 9 ರಂದು ಸ್ಪೇಡೆಕ್ಸ್ ಪ್ರಕ್ರಿಯೆ ಮುಂದೂಡಿಕೆ ಮಾಡಿತ್ತು.
ಏನಿದು ಸ್ಪೇಡೆಕ್ಸ್
SpaDeX ಎರಡು ಸಣ್ಣ ಉಪಗ್ರಹಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನವನ್ನು ಪರೀಕ್ಷಿಸುವ ಯೋಜನೆ ಇದು. ಬಾಹ್ಯಾಕಾಶ ನಿಲ್ದಾಣಗಳನ್ನು ನಿರ್ಮಿಸುವುದು ಮತ್ತು ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳಂತಹ ಭವಿಷ್ಯದ ಯೋಜನೆಗಳಿಗೆ ಇದು ಅತ್ಯಗತ್ಯ., ಉಪಗ್ರಹವನ್ನು ಇನ್ನೊಂದಕ್ಕೆ ಡಾಕ್ ಮಾಡಲು ಎಚ್ಚರಿಕೆಯಿಂದ ನಿರ್ದೇಶನ ನೀಡುವ ಪ್ರಕ್ರಿಯೆ ಇದಾಗಿದೆ. ಡಾಕಿಂಗ್ ಮಾಡಿದ ನಂತರ, ಉಪಗ್ರಹಗಳು ತಮ್ಮ ಪ್ರತ್ಯೇಕ ಕಾರ್ಯಾಚರಣೆ ಮುಂದುವರಿಸಲು ಬೇರ್ಪಡುವ ಮೊದಲು ವಿದ್ಯುತ್ ಶಕ್ತಿಯನ್ನು ಹಂಚಿಕೊಳ್ಳುತ್ತವೆ.