ಸಂಭಲ್ ಹಿಂಸಾಚಾರ: ಯೋಗಿ ಆದಿತ್ಯನಾಥ್ ಅವರ ರಾಜಕೀಯ ಧ್ರುವೀಕರಣದ ಯೋಜನೆಯೇ?
ಮೊಘಲರ ಕಾಲದಲ್ಲಿ ನಿರ್ಮಿಸಲಾದ ಮಸೀದಿಯನ್ನು ನೆಲಸಮಗೊಂಡ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂಬುದನ್ನು ಸಂಶೋಧಿಸುವುದು ಈ ಸಮೀಕ್ಷೆಯ ಉದ್ದೇಶ. ಕೋರ್ಟ್‌ಗೆ ಇದೇ ಕಾರಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು;
ಉತ್ತರ ಪ್ರದೇಶ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯು ಕೋಮು ದಳ್ಳುರಿಗೆ ಕಾರಣವಾಗಿ ನಾಲ್ಕು ಜನರ ಜೀವ ಬಲಿ ತೆಗೆದುಕೊಂಡಿದೆ. ಘಟನೆಯ ಸುತ್ತಲಿನ ರಾಜಕೀಯ ಉದ್ದೇಶಗಳು ಮತ್ತು ಆಡಳಿತಾತ್ಮಕ ಕ್ರಮಗಳ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಸೃಷ್ಟಿಯಾಗಿದೆ. ನೀಲು ವ್ಯಾಸ್ ಆಯೋಜಿಸಿದ್ದ ʼದ ಫೆಡರಲ್‌ನ ʼಕ್ಯಾಪಿಟಲ್ ಬೀಟ್; ಸಂಚಿಕೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಯಿತು. ಪ್ರಮುಖವಾಗಿ ಇದು ಯೋಗಿ ಆದಿತ್ಯನಾಥ್ ಅವರ ಧ್ರುವೀಕರಣ ರಾಜಕೀಯದ ಭಾಗವೇ ಕೋನದಲ್ಲಿ ಚರ್ಚಿಸಲಾಯಿತು .
ಏನಿದು ಘಟನೆ?
ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿದ ಬಳಿಕ ಅದರ ಪ್ರಕ್ರಿಯೆ ಆರಂಭಗೊಂಡಿತು. ಭಾನುವಾರ ಅಧಿಕಾರಿಗಳು ಸಮೀಕ್ಷೆ ನಡೆಸಲು ಆರಂಭಿಸಿದಾಗ ಅಶಾಂತಿ ಪ್ರಾರಂಭವಾಯಿತು. ಮೊಘಲರ ಕಾಲದಲ್ಲಿ ನಿರ್ಮಿಸಲಾದ ಮಸೀದಿಯನ್ನು ನೆಲಸಮಗೊಂಡ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂಬುದನ್ನು ಸಂಶೋಧಿಸುವುದು ಈ ಸಮೀಕ್ಷೆಯ ಉದ್ದೇಶ. ಕೋರ್ಟ್‌ಗೆ ಇದೇ ಕಾರಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಸಮೀಕ್ಷೆಗೆ ಆದೇಶಿಸಿತು. ನವೆಂಬರ್ 19ರಂದು ಹಿಂದಿನ ಸಮೀಕ್ಷೆಯ ಹೊರತಾಗಿಯೂ, ಎರಡನೇ ಸಮೀಕ್ಷೆ ನಡೆಸಲಾಯಿತು. ಇದು ಉದ್ವಿಗ್ನತೆ ಹೆಚ್ಚಿಸಿತು. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಕಲ್ಲು ತೂರಾಟ, ವಾಹನಕ್ಕೆ ಬೆಂಕಿ ಹಚ್ಚುವುದನ್ನು ಮಾಡಿದರು. ಅದಕ್ಕೆ ಪೊಲೀಸರು ಪ್ರತೀಕಾರ ತೀರಿಸಿಕೊಂಡರು.
ಮೃತರಲ್ಲಿ ನಾಲ್ವರು ಯುವಕರು ಸೇರಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬುರ್ ಮತ್ತು ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಬೆಳವಣಿಗೆಗಳು ಕಹಿ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾದವು. ಬಿಜೆಪಿ ಸರ್ಕಾರ ತನ್ನ ಹಿಂದುತ್ವ ಕಾರ್ಯಸೂಚಿ ಬಲಪಡಿಸಲು ಗಲಭೆಗಳನ್ನು ರೂಪಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ನ್ಯಾಯಾಂಗ ಮತ್ತು ಕಾನೂನು ಜಾರಿ
ಚರ್ಚೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತೆ ಶೈರಾ ನೈಮ್ ಮಾತನಾಡಿ, ನ್ಯಾಯಾಂಗ ಪ್ರಕ್ರಿಯೆಯಿಂದ ಉಂಟಾಗುವ ಸಮಸ್ಯೆಯನ್ನು ಎತ್ತಿ ತೋರಿಸಿದರು. ಪ್ರಮುಖವಾಗಿ ಪೂಜಾ ಸ್ಥಳಗಳ ಕಾಯ್ದೆ1991ರ ಸ್ಪಷ್ಟ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆಗಸ್ಟ್ 15, 1947ರಂದು ಇದ್ದ ಸ್ಥಿತಿಯಲ್ಲಿಯೇ ಧಾರ್ಮಿಕ ಸ್ಥಳವನ್ನು ಕಾಪಾಡಬೇಕು ಹಾಗೂ ಅದರ ಸ್ವರೂಪವನ್ನು ಕಾಯ್ದೆ ನಿಷೇಧಿಸುತ್ತದೆ. " ಸಮೀಕ್ಷೆಗೆ ಆದೇಶಿಸಿದ ನ್ಯಾಯಾಂಗದ ತ್ವರಿತ ಕ್ರಮವು ಚರ್ಚೆಗೆ ಕಾರಣವಾಗುತ್ತದೆ. ಇದು ನ್ಯಾಯಾಂಗ ಪ್ರಕ್ರಿಯೆಯ ನಿಷ್ಪಕ್ಷಪಾತದ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ" ಎಂದು ಅವರು ಟೀಕಿಸಿದರು.
ಸುಪ್ರೀಂ ಕೋರ್ಟ್ ತನ್ನ ಅಯೋಧ್ಯೆ ತೀರ್ಪಿನಲ್ಲಿ, ಪೂಜಾ ಸ್ಥಳಗಳ ಕಾಯ್ದೆಯ ಮಹತ್ವವನ್ನು ಒತ್ತಿಹೇಳಿದೆ. "ಇತಿಹಾಸ ಮತ್ತು ಅದರ ತಪ್ಪುಗಳನ್ನು ವರ್ತಮಾನ ಮತ್ತು ಭವಿಷ್ಯವನ್ನು ದಮನಿಸಲು ಬಳಸಲಾಗುವುದಿಲ್ಲ" ಎಂದು ಹೇಳಿದೆ. ಆದಾಗ್ಯೂ ʼಜ್ಞಾನವಾಪಿ ಮಸೀದಿʼ ಪ್ರಕರಣದಂತಹ ಇದೇ ರೀತಿಯ ಅರ್ಜಿಗಳನ್ನು ಪರಿಗಣಿಸಲಾಗುತ್ತಿದೆ. ಇದು ಜಾತ್ಯತೀತ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ರಾಜಕೀಯ ಪರಿಣಾಮಗಳು
ರಾಜಕೀಯ ವಿಶ್ಲೇಷಕ ಪುನೀತ್ ನಿಕೋಲಸ್ ಯಾದವ್ ಈ ಅಶಾಂತಿಯನ್ನು ಮತದಾರರನ್ನು ಧ್ರುವೀಕರಿಸುವ ಗುರಿ ಎಂದಿದ್ದಾರೆ. ಹಿಂದುತ್ವ ರಾಜಕೀಯ ಎಂದು ಹೇಳಿದ್ದಾರೆ. "ರಾಜಕೀಯ ಲಾಭಕ್ಕಾಗಿ ಐತಿಹಾಸಿಕ ಕುಂದುಕೊರತೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ಯೋಗಿ ಆದಿತ್ಯನಾಥ್ ಅವರ ನಾಚಿಕೆಗೇಡಿನ ರಾಜಕೀಯವು ಹೆಚ್ಚು ಬಹಿರಂಗವಾಗಿದ್ದರೂ ಅದು ಬಿಜೆಪಿಯ ವಿಶಾಲ ಕಾರ್ಯಸೂಚಿಗೆ ಪೂರಕವಾಗಿದೆ" ಎಂದು ಅವರು ಹೇಳಿದರು.
ಇಂತಹ ಘಟನೆಗಳನ್ನು ನಿರ್ಣಾಯಕವಾಗಿ ಎದುರಿಸಲು ವಿರೋಧ ಪಕ್ಷಗಳು, ಅದರಲ್ಲೂ ಕಾಂಗ್ರೆಸ್ ವಿಫಲವಾಗಿದೆ ಎಂದು ಯಾದವ್ ಹೇಳಿದರು. "ಪ್ರತಿಪಕ್ಷಗಳ ಮೌನವು ಆಡಳಿತ ಪಕ್ಷಕ್ಕೆ ಧೈರ್ಯ ತುಂಬುತ್ತದೆ. ವಿರೋಧ ಪಕ್ಷದ ನಾಯಕರು ಮಾತನಾಡಲು ವಿಫಲವಾದಾಗ, ಮುಸ್ಲಿಂ ಸಮುದಾಯಕ್ಕೆ ಅನ್ಯ ಮಾರ್ಗವೇ ಇರುವುದಿಲ್ಲ" ಎಂದು ಅವರು ಹೇಳಿದರು, ಬಲವಾದ ಪ್ರತಿರೋಧ ಇಲ್ಲದಿರುವುದೇ ಇಂಥ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಅವರು ಹೇಳಿದರು.
ಮೂಲೆಗುಂಪಾಗಿರುವ ಸಮುದಾಯ
ಸಾಮಾಜಿಕ ಕಾರ್ಯಕರ್ತ ರಾಜಾ ಹೈದರ್ ಅವರು ಮುಸ್ಲಿಂ ಸಮುದಾಯದ ಎದುರಿಸುತ್ತಿರುವ ಪರಕೀಯ ಭಾವನೆ ಬಗ್ಗೆ ಬೆಳಕು ಚೆಲ್ಲಿದರು. ಇವುಗಳನ್ನು ವ್ಯವಸ್ಥಿತವಾಗಿ ಮಾಡಾಗುತ್ತಿದೆ. ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ನಂಬಿಕೆಯ ಕುಸಿಯಲು ಕಾರಣವಾಗುತ್ತದೆ ಎಂದು ಅವರು ಹೇಳಿದರು. "ನ್ಯಾಯಾಂಗ, ಪೊಲೀಸ್ ಮತ್ತು ರಾಜಕೀಯ ವಿರೋಧ ಪಕ್ಷಗಳು ಸೇರಿದಂತೆ ಪ್ರತಿಯೊಂದು ಸಂಸ್ಥೆಯೂ ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲು ವಿಫಲವಾದಾಗ ಅವರು ಭರವಸೆ ಕಳೆದುಕೊಳ್ಳುತ್ತಾರೆ" ಎಂದು ನುಡಿದರು.
ಸಮುದಾಯದೊಳಗೆ ಆತ್ಮಾವಲೋಕನ ಮತ್ತು ಶಾಂತಿಯುತ ಪ್ರತಿರೋಧದ ಅಗತ್ಯವಿದೆ ಎಂದು ಹೈದರ್ ಹೇಳಿದರು. ಮುಸ್ಲಿಂ ನಾಯಕರು ತಮ್ಮ ಸಮುದಾಯವನ್ನು ಅಹಿಂಸಾತ್ಮಕ ಪ್ರತಿಭಟನೆಯ ಕಡೆಗೆ ಕೊಂಡೊಯ್ಯಬೇಕು. ಶಿಕ್ಷಣ ಮತ್ತು ಸಾಮಾಜಿಕ ಒಗ್ಗಟ್ಟಿನಂತಹ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಬೇಕು. ಹಾಗಾಗದಿದ್ದರೆ ಪ್ರಚೋದನೆ ಮತ್ತು ಪ್ರತೀಕಾರ ಮುಂದುವರಿಯುತ್ತದೆ ಎಂದು ಹೇಳಿದರು.
ಪುನರಾವರ್ತಿತ ಗಲಭೆ
ಸಂಭಾಲ್ ಹಿಂಸಾಚಾರವು ಹೊಸ ಘಟನೆಯೇನೂ ಅಲ್ಲ. ಉತ್ತರ ಪ್ರದೇಶದಲ್ಲಿ ಪುನರಾವರ್ತಿತ ಮಾದರಿಯಾಗಿದೆ. ಸಿಎಎ- ಎನ್ಆರ್‌ಸಿ ಪ್ರತಿಭಟನೆಗಳಿಂದ ಹಿಡಿದು ಜ್ಞಾನವಾಪಿ ಮಸೀದಿ ವಿವಾದದವರೆಗೆ ಧಾರ್ಮಿಕ ಸ್ಥಳಗಳ ವಿವಾದಗಳಿಂದ ಪ್ರಚೋದಿಸಲ್ಪಟ್ಟ ಕೋಮು ಅಶಾಂತಿಗೆ ರಾಜ್ಯವು ಪದೇ ಪದೇ ಸಾಕ್ಷಿಯಾಗಿದೆ. ಆಡಳಿತದ ಸಮಸ್ಯೆಗಳ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ತನ್ನ ಹಿಂದೂ ಮತ ನೆಲೆಯನ್ನು ಹೆಚ್ಚಿಸಲು ಇಂತಹ ಘಟನೆಗಳನ್ನು ಬಳಸುತ್ತಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ "ಸಬ್ಕಾ ಸಾಥ್, ಸಬ್ಕಾ ವಿಕಾಸ್" ಘೋಷಣೆಯು ಉತ್ತರ ಪ್ರದೇಶ ಸರ್ಕಾರದ ನೀತಿಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಇದು ವಿಭಜನೆಗಳನ್ನು ಹೆಚ್ಚಿಸುತ್ತದೆ ಎಂದು ಟೀಕಾಕಾರರು ಹೇಳುತ್ತಾರೆ, ವಿರೋಧ ಪಕ್ಷಗಳ ಮೌನ ಪ್ರತಿಕ್ರಿಯೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಸ್ಲಿಂ ಸಮುದಾಯವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕೋಮು ಧ್ರುವೀಕರಣದ ಪರಿಣಾಮಗಳು
ಸಂಭಾಲ್ ಹಿಂಸಾಚಾರವು ಭಾರತದ ಪ್ರಜಾಪ್ರಭುತ್ವದಲ್ಲಿ ಉಂಟಾಗಿರುವ ಆಳ ಬಿಕ್ಕಟ್ಟಿನ ಸಮಸ್ಯೆಯಾಗಿದೆ. ಉತ್ತರಪ್ರದೇಶದಲ್ಲಿ ನ್ಯಾಯಾಂಗ ಪ್ರಕ್ರಿಯೆಗಳು ಕಾನೂನು ಜಾರಿಯ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತದೆ. ರಾಜಾ ಹೈದರ್ ಸೂಕ್ತವಾಗಿ ಹೇಳಿದಂತೆ, "ಈ ಪ್ರಚೋದನೆಗಳನ್ನು ಪರಿಹರಿಸಲು ಕಾನೂನು, ರಾಜಕೀಯ ಮತ್ತು ಸಾಮಾಜಿಕ ಸಾಮೂಹಿಕ ಪ್ರಯತ್ನವಿಲ್ಲದಿದ್ದರೆ ಇದು ಮುಂದುವರಿಯುತ್ತದೆ, ಇಲ್ಲದಿದ್ದರೆ, ಪರಿಣಾಮಗಳು ಸಂಭಾಲ್‌ಗಿಂತಲೂ ಆಚೆ ವಿಸ್ತರಿಸಲಿದೆ.