ಸಂಭಲ್‌ ಹಿಂಸಾಚಾರ; ಇಂಟರ್ನೆಟ್‌ ಸೇವೆ ಸ್ಥಗಿತ; ಶಾಲಾ, ಕಾಲೇಜುಗಳಿಗೆ ರಜೆ

ಮೊಘಲ್ ಯುಗದ ಮಸೀದಿಯ ಸಮೀಕ್ಷೆಯ ವಿರುದ್ಧ ಜನರು ಪ್ರತಿಭಟನೆಗೆ ಇಳಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತ ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆಯಿತು.;

Update: 2024-11-25 07:03 GMT

ಸಂಭಲ್‌ನಲ್ಲಿ ಮಸೀದಿ ಸಮೀಕ್ಷೆ ವೇಳೆ ಉಂಟಾಗಿದ್ದ ಹಿಂಸಾಚಾರದಲ್ಲಿ ಮೂವರು ಪ್ರತಿಭಟನಾಕಾರರು ಮೃತಪಟ್ಟ ಘಟನೆ ನಡೆದ ಬಳಿಕ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿದೆ. ಸಂಭಾಲ್ ತಹಸೀಲ್‌ನಲ್ಲಿ ಇಂಟರ್ನೆಟ್ ಸೇವೆಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಜಿಲ್ಲಾಡಳಿತವು ನವೆಂಬರ್ 25 ರಂದು 12 ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ.

ಮೊಘಲ್ ಯುಗದ ಮಸೀದಿಯ ಸಮೀಕ್ಷೆಯ ವಿರುದ್ಧ ಜನರು ಪ್ರತಿಭಟನೆಗೆ ಇಳಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತ ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆಯಿತು.

ಘರ್ಷಣೆಯ ನಂತರ ಸಂಭಲ್ ಆಡಳಿತವು ಕಲ್ಲುಗಳು, ಸೋಡಾ ಬಾಟಲಿಗಳು ಅಥವಾ ಛಾವಣಿಯ ಮೇಲೆ ಯಾವುದೇ ಸುಡುವ ಅಥವಾ ಸ್ಫೋಟಕ ವಸ್ತುಗಳನ್ನು ಜನರು ಖರೀದಿಸುವುದನ್ನು ಅಥವಾ ಸಂಗ್ರಹಿಸುವುದನ್ನು ನಿಷೇಧಿಸಿದೆ. ನಿಷೇಧಿತ ವಸ್ತುಗಳನ್ನು ಸಂಗ್ರಹಿಸುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಭಾಲ್‌ನ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಯಾವುದೇ ಕಟ್ಟಡ ನಿರ್ಮಾಣ ಸಾಮಗ್ರಿಗಳು ರಸ್ತೆಗಳಲ್ಲಿ ಬಿದ್ದಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಆದೇಶ ನೀಡಲಾಗಿದೆ.

ಜಿಲ್ಲಾಡಳಿತವು ನಿಷೇಧಾಜ್ಞೆಗಳನ್ನು ವಿಧಿಸಿದೆ ಮತ್ತು ನವೆಂಬರ್ 30 ರವರೆಗೆ ಹೊರಗಿನವರ ಪ್ರವೇಶವನ್ನು ನಿಷೇಧಿಸಿದೆ. "ಸಕ್ಷಮ ಅಧಿಕಾರಿಯ ಅನುಮತಿಯಿಲ್ಲದೆ ಯಾವುದೇ ಹೊರಗಿನವರು, ಇತರ ಸಾಮಾಜಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಪ್ರತಿನಿಧಿಗಳು ಜಿಲ್ಲಾ ಗಡಿಯನ್ನು ಪ್ರವೇಶಿಸುವಂತಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯೋಜಿತ ಪಿತೂರಿ: ಕಾಂಗ್ರೆಸ್

ಮುಗ್ಧರನ್ನು ಕೊಲ್ಲಲು ಯೋಗಿ ಆದಿತ್ಯನಾಥ್ ಆಡಳಿತವು ನೇರ ಹೊಣೆ. ಬಿಜೆಪಿ-ಆರ್‌ಎಸ್‌ಎಸ್‌ ಶಾಂತಿ ಮತ್ತು ಸಾಮರಸ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.

ಸಂಭಾಲ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನೇರ ಗುಂಡಿನ ದಾಳಿ ಮಾಡಿರುವುದು ವಿಡಿಯೊಗಳು ಹರಿದಾಡುತ್ತಿವೆ. ಆದಿತ್ಯನಾಥ್ ಮತ್ತು ಬಿಜೆಪಿ- ಮಾಡಿರುವ ʼʼಯೋಜಿತ ಪಿತೂರಿ" ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಕೋಮು ಸೌಹಾರ್ದತೆ ಧಕ್ಕೆ

ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, ಆದಿತ್ಯನಾಥ್ ಅವರ ಆಡಳಿತವು ಮತ್ತೊಮ್ಮೆ ಕೋಮು ಸೌಹಾರ್ದತೆಯ ಬಗ್ಗೆ ನಿರ್ಲಕ್ಷ್ಯ ತೋರಿಸಿದೆ. "ಈ ಇಡೀ ವಿಷಯದಲ್ಲಿ, ಸಮೀಕ್ಷೆ ಮುಂದುವರಿಯುವುದು ಅಥವಾ ಅದನ್ನು ನಿಲ್ಲಿಸುವುದು ಬಿಜೆಪಿಗೆ ಇಷ್ಟವಿರಲಿಲ್ಲ; ಸಾಮರಸ್ಯ ನಾಶಪಡಿಸುವುದು ಅದರ ಏಕೈಕ ಉದ್ದೇಶ" ಎಂದು ಅವರು ಆರೋಪಿಸಿದರು.

"ಸಮೀಕ್ಷೆ ತಂಡದೊಂದಿಗೆ ಬಂದ ಗಲಭೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಉಪಚುನಾವಣೆಯ ನಂತರ, ಯೋಗಿ ಸರ್ಕಾರವು ಹಿಂಸಾಚಾರ ಮತ್ತು ದ್ವೇಷದ ರಾಜಕೀಯ ಮತ್ತಷ್ಟು ತೀವ್ರಗೊಳಿಸಿದೆ ಎಂದು ಇದು ಸ್ಪಷ್ಟಪಡಿಸುತ್ತದೆ" ಎಂದು ಅವರು ಹೇಳಿದರು.

ತೊಂದರೆ ಹೇಗೆ ಭುಗಿಲೆದ್ದಿತು

ಸಂಭಾಲ್‌ನಲ್ಲಿ ಮೊಘಲ್ ಕಾಲದ ಮಸೀದಿಯ ಸಮೀಕ್ಷೆ ಮಾಡಲು ನ್ಯಾಯಾಲಯದ ಆದೇಶ ವಿರೋಧಿಸಿದ ಪ್ರತಿಭಟನಾಕಾರರು ಭಾನುವಾರ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 20 ಭದ್ರತಾ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಜನಸಮೂಹವನ್ನು ಚದುರಿಸಲು ಅಶ್ರುವಾಯು ಮತ್ತು ಲಾಠಿಗಳನ್ನು ಬಳಸಿದ್ದರು ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ಹೇಳಿದ್ದಾರೆ.

ಶಾಹಿ ಜಾಮಾ ಮಸೀದಿಯ ಚಾವಣಿಯಿಂದ ಮತ್ತು ಬಳಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯುತ್ತಿರುವುದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ನಂತರ, ಕಿರಿದಾದ ಗಲ್ಲಿಯಲ್ಲಿ ದೊಡ್ಡ ಜನಸಮೂಹ ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಅದರ ವಿಡಿಯೊ ವೈರಲ್‌ ಆಗಿದೆ.

ಇತರ ದೃಶ್ಯಗಳು ಚಪ್ಪಲಿಗಳು, ಇಟ್ಟಿಗೆಗಳು ಮತ್ತು ಕಲ್ಲುಗಳಿಂದ ತುಂಬಿದ ಬೀದಿಯ ಚಿತ್ರಗಳು ವೈರಲ್‌ ಆಗಿವೆ. ಒಂದು ವೀಡಿಯೊದಲ್ಲಿ ಪೊಲೀಸರ ವಿರುದ್ಧವೇ ಗುಂಡು ಹಾರಿಸುವುದು ಕಂಡು ಬಂದಿದೆ. ಇನ್ನೊಂದು ವಿಡಿಯೊದಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೃಷ್ಣ ಕುಮಾರ್ ಅವರು ಹಿಂಸಾಚಾರವನ್ನು ನಿಲ್ಲಿಸುವಂತೆ ಪ್ರತಿಭಟನಾಕಾರರಿಗೆ ಆದೇಶ ಕೊಡುವುದನ್ನು ಕಾಣಬಹುದು. 

Tags:    

Similar News