Kolkata rape murder| ವಿಚಾರಣೆ ನೇರಪ್ರಸಾರಕ್ಕೆ ಅನುಮತಿ: ವೈದ್ಯೆ ವಿವರ ತೆಗೆದುಹಾಕಲು ವಿಕಿಪೀಡಿಯಾಗೆ ಸೂಚನೆ

ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ಹಣಕಾಸು ಅಕ್ರಮ ಕುರಿತ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಸಿಬಿಐಗೆ ಸೂಚಿಸಿದೆ; ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯ ವರದಿ ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ;

Update: 2024-09-17 11:56 GMT

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಕುರಿತು ಸಿಬಿಐ ಸಲ್ಲಿಸಿದ ವಸ್ತುಸ್ಥಿತಿ ವರದಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆ ವೇಳೆ ಸಂಸ್ಥೆಯಲ್ಲಿನ ಹಣಕಾಸು ಅವ್ಯವಹಾರಗಳ ತನಿಖೆಯ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ಮಂಗಳವಾರ (ಸೆಪ್ಟೆಂಬರ್ 17) ಸೂಚಿಸಿದೆ.

ಮುಂದಿನ ತನಿಖೆ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇರುವುದರಿಂದ ವಸ್ತುಸ್ಥಿತಿ ವರದಿಯನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. 

ನೇರ ಪ್ರಸಾರಕ್ಕೆ ನಿರ್ಬಂಧವಿಲ್ಲ: ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ನೇರಪ್ರಸಾರವನ್ನು ನಿಲ್ಲಿಸಲು ನ್ಯಾಯಾಲಯ ನಿರಾಕರಿಸಿತು. ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯ. ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿದಿರಬೇಕು ಎಂದು ಹೇಳಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠಕ್ಕೆ ನೇರ ಪ್ರಸಾರವನ್ನು ನಿಲ್ಲಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದರು. ಮಹಿಳಾ ವಕೀಲರು ಆಸಿಡ್ ದಾಳಿ ಮತ್ತು ಅತ್ಯಾಚಾರದ ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅಂಥ ಯಾವುದೇ ಬೆದರಿಕೆಯಿದ್ದಲ್ಲಿ ತಾನು ಮಧ್ಯಪ್ರವೇಶಿಸುವುದಾಗಿ ಕೋರ್ಟ್ ಭರವಸೆ ನೀಡಿದೆ.

ವಿಕಿಪೀಡಿಯಾಕ್ಕೆ ನಿರ್ದೇಶನ: ಸಿಬಿಐ ಪರ ವಕೀಲ ಸಾಲಿಸಿಟರ್ ಜನರಲ್, ವಿಕಿಪೀಡಿಯಾ ಇನ್ನೂ ಸಂತ್ರಸ್ತೆಯ ಹೆಸರು ಮತ್ತು ಫೋಟೋ ತೋರಿಸುತ್ತಿದೆ ಎಂದು ಹೇಳಿದರು. ಸಂತ್ರಸ್ತೆಯ ವಿವರ ತೆಗೆದುಹಾಕುವಂತೆ ವಿಕಿಪೀಡಿಯಾಕ್ಕೆ ಕೋರ್ಟ್‌ ಸೂಚಿಸಿತು.

ʻಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೃತರ ಘನತೆ ಮತ್ತು ಗೋಪ್ಯತೆಯನ್ನು ಕಾಪಾಡಲು ಅವರ ಗುರುತು ಬಹಿರಂಗಪಡಿಸಬಾರದು ಎಂಬುದು ಆಡಳಿತದ ತತ್ವ. ವಿಕಿಪೀಡಿಯಾ nfyayalyd ತನ್ನ ಹಿಂದಿನ ಆದೇಶ ಪಾಲಿಸಲು ಕ್ರಮ ತೆಗೆದುಕೊಳ್ಳಬೆಕು,ʼ ಎಂದು ಪೀಠ ಹೇಳಿತು. 

ಹಣಕಾಸು ಅವ್ಯವಹಾರದ ವರದಿ: ಅಪರಾಧ, ದೃಶ್ಯ ಅಥವಾ 27 ನಿಮಿಷಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗೆ ಸಂಬಂಧಿಸಿದ ಏನನ್ನೂ ಸಿಬಿಐ ನಾಶಪಡಿಸಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಮ್ಮ ಬಳಿಕ ಸಕಲವನ್ನೂ ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. 

ವೈದ್ಯಕೀಯ ಇಲಾಖೆಯಲ್ಲಿನ ಹಣಕಾಸು ಅವ್ಯವಹಾರ ಕುರಿತ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿದೆ. ವಿಚಾರಣೆ ಮುಂದುವರಿದಿದೆ. 

Tags:    

Similar News