ರಾಜ್ಯಸಭೆ ಉಪ ಚುನಾವಣೆ | ಬಿಜೆಪಿ 9, ಮಿತ್ರಪಕ್ಷಗಳಿಗೆ 2 ಸ್ಥಾನ, ಎ‌ನ್‌ಡಿಎಗೆ ಬಹುಮತ

ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ ಗೆಲುವಿನಿಂದ ಕಾಂಗ್ರೆಸ್ ಬಲ 85 ಕ್ಕೆ ಏರಿದೆ. ಎನ್‌ಡಿಎ ಬಲ 119ಕ್ಕೆ ಹೆಚ್ಚಳಗೊಂಡಿದೆ.

Update: 2024-08-28 06:07 GMT

ರಾಜ್ಯಸಭೆಯ 12 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಒಂಬತ್ತು ಮತ್ತು ಅದರ ಮಿತ್ರಪಕ್ಷಗಳು ಎರಡು ಸ್ಥಾನ ಗೆದ್ದಿದ್ದು, ಎನ್‌ಡಿಎ ರಾಜ್ಯಸಭೆಯಲ್ಲಿ ಬಹುಮತ ಗಳಿಸಿದೆ. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಬಿಜೆಪಿ 9, ಕಾಂಗ್ರೆಸ್ 1 ಸ್ಥಾನ: ಬಿಜೆಪಿ ಆಯ್ಕೆಯಾದವರು ಅಸ್ಸಾಂನಿಂದ ಮಿಷನ್ ರಂಜನ್ ದಾಸ್ ಮತ್ತು ರಾಮೇಶ್ವರ್ ತೇಲಿ, ಬಿಹಾರದಿಂದ ಮನನ್ ಕುಮಾರ್ ಮಿಶ್ರಾ, ಹರಿಯಾಣದಿಂದ ಕಿರಣ್ ಚೌಧರಿ, ಮಹಾರಾಷ್ಟ್ರದಿಂದ ಧಿರ್ಯ ಶೀಲ್ ಪಾಟೀಲ್, ಒಡಿಶಾದಿಂದ ಮಮತಾ ಮೊಹಾಂತ, ತ್ರಿಪುರದಿಂದ ರಾಜೀವ್ ಭಟ್ಟಾಚಾರ್ಯ, ಕೇಂದ್ರ ಸಚಿವರಾದ ಜಾರ್ಜ್ ಕುರಿಯನ್ ಮಧ್ಯಪ್ರದೇಶದಿಂದ ಮತ್ತು ರವೀತ್ ಸಿಂಗ್ ಬಿಟ್ಟು ರಾಜಸ್ಥಾನದಿಂದ ಆಯ್ಕೆಯಾದರು.

ಎನ್‌ಸಿಪಿಯ ಅಜಿತ್ ಪವಾರ್ ಬಣದ ನಿತಿನ್ ಪಾಟೀಲ್ ಮಹಾರಾಷ್ಟ್ರ, ರಾಷ್ಟ್ರೀಯ ಲೋಕ ಮಂಚ್‌ನ ಉಪೇಂದ್ರ ಕುಶ್ವಾಹ ಬಿಹಾರದಿಂದ ಹಾಗೂ ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯಸಭೆಯಲ್ಲಿ ಈಮಡಿಯ ಒಕ್ಕೂಟದ ಬಲ 85 ಕ್ಕೆ ಏರಿದೆ. ಕಾಂಗ್ರೆಸ್ 27 ಸ್ಥಾನ ಹೊಂದಿದ್ದು, ಇದು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅಗತ್ಯವಿರುವುದಕ್ಕಿಂತ ಎರಡು ಸ್ಥಾನ ಹೆಚ್ಚು.

ಎನ್‌ಡಿಎ ಸಂಖ್ಯಾಬಲ 119: ಬಿಜೆಪಿಯ ಬಲ 87 ರಿಂದ 96 ಕ್ಕೆ ಹಾಗೂ ಎನ್‌ಡಿಎ ಬಲವನ್ನು 119 ಕ್ಕೆ ಹೆಚ್ಚಿಸಿದೆ. ಇದರಿಂದ ಸದನದಲ್ಲಿ ಮಸೂದೆಗಳನ್ನು ಅಂಗೀಕರಿಸುವಲ್ಲಿ ಎನ್‌ಡಿಎ ಹಾದಿ ಸುಗಮಗೊಳ್ಳಲಿದೆ. 2014ರ ನಂತರ ರಾಜ್ಯಸಭೆಯಲ್ಲಿ ಎನ್‌ಡಿಎ ಬಹುಮತ ಗಳಿಸಿರುವುದು ಇದೇ ಮೊದಲು. 

ಸಂಸತ್ತಿನ ಮೇಲ್ಮನೆಯು 245 ಸ್ಥಾನಗಳನ್ನು ಹೊಂದಿದ್ದು, ಎಂಟು ಸ್ಥಾನ ಖಾಲಿ ಇದೆ( ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ಮತ್ತು ನಾಮನಿರ್ದೇಶಿತ ವರ್ಗದಲ್ಲಿ ನಾಲ್ಕು). ಇದರಿಂದ ಬಹುಮತದ ಸಂಖ್ಯೆ 119 ಆಗಲಿದೆ. ಬಿಜೆಪಿಯ ಮಿತ್ರಪಕ್ಷಗಳಲ್ಲಿ ಜೆಡಿ(ಯು), ಎನ್‌ಸಿಪಿ, ಜೆಡಿ(ಎಸ್), ಆರ್‌ಪಿಐ(ಎ), ಶಿವಸೇನೆ, ಆರ್‌ಎಲ್‌ಡಿ, ಆರ್‌ಎಲ್‌ಎಂ, ಎನ್‌ಪಿಪಿ, ಪಿಎಂಕೆ, ತಮಿಲ್ ಮನಿಲಾ ಕಾಂಗ್ರೆಸ್ ಮತ್ತು ಯುಪಿಪಿಎಲ್ ಸೇರಿವೆ. 

12 ಸ್ಥಾನಗಳಿಗೆ ಉಪಚುನಾವಣೆ: ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ಲೋಕಸಭೆಗೆ ಆಯ್ಕೆಯಾದ ಕಾರಣ ಖಾಲಿಯಾದ 12 ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. 

Tags:    

Similar News