Indian Railways: ಮುಂದಿನ ತಿಂಗಳಿಂದ ಕಾಶ್ಮೀರಕ್ಕೆ ವಿಶೇಷ ವಿನ್ಯಾಸದ 2 ಹೊಸ ರೈಲು ಸೇವೆ ಶುರು

ನವದೆಹಲಿಯಿಂದ ಶ್ರೀನಗರಕ್ಕೆ 13 ಗಂಟೆಗಳ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಸೆಂಟ್ರಲ್ ಹೀಟೆಡ್ ಸ್ಲೀಪರ್ ರೈಲು ಹೊಸ ಸೇವೆಗಳಲ್ಲಿ ಒಂದಾಗಿದೆ.

Update: 2024-12-22 10:10 GMT

ಮುಂದಿನ ತಿಂಗಳು ಕಾಶ್ಮೀರಕ್ಕೆ ಎರಡು ರೈಲುಗಳ ಸಂಚಾರ ಆರಂಭಿಸಲಿದೆ. ಇದರೊಂದಿಗೆ ಕಣಿವೆ ರಾಜ್ಯದೊಂದಿಗೆ ತನ್ನ ಸಂಪರ್ಕ ಹೆಚ್ಚಿಸಲು ಸಜ್ಜಾಗಿದೆ. ರೈಲು ಸೇವೆ ಜನವರಿ 2025ರಂದು ಪ್ರಾರಂಭವಾಗಲಿದೆ. ಇದು ಕಾಶ್ಮೀರ ಕಣಿವೆ ಮತ್ತು ದೇಶದ ಇತರ ಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಮೊದಲ ರೈಲು ನವದೆಹಲಿಯಿಂದ ಶ್ರೀನಗರಕ್ಕೆ 13 ಗಂಟೆಗಳ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಸೆಂಟ್ರಲ್ ಹೀಟೆಡ್ ಸ್ಲೀಪರ್ ರೈಲು ಹೊಸ ಸೇವೆಯ ವಿಶೇಷ. ಈ ಹಿಂದಿನ ಊಹಾಪೋಹಗಳಿಗಿಂತ ಭಿನ್ನವಾಗಿ, ಇದು ವಂದೇ ಭಾರತ್ ಅಲ್ಲ, ಆದರೆ ಈ ಪ್ರದೇಶದ ಕಠಿಣ ಚಳಿಗಾಲಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಿಶಿಷ್ಟ ಸ್ಲೀಪರ್ ಕೋಚ್‌ ರೈಲು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇದು ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ದಾಟಲಿದೆ. ಪ್ರಯಾಣಿಕರಿಗೆ ಹಿಮದಿಂದ ಆವೃತವಾದ ಪರ್ವತಗಳ ಅದ್ಭುತ ನೋಟ ನೀಡುತ್ತದೆ.

ಈ ರೈಲು ಸೆಕೆಂಡ್‌ ಕ್ಲಾಸ್‌ ಸ್ಲೀಪರ್ ಕೋಚ್‌ ಬೋಗಿಗಳನ್ನು ಹೊಂದಿರುವುದಿಲ್ಲ. ದಕ್ಷತೆ ಮತ್ತುಆರಾಮದಾಯ ಪ್ರಯಾಣಕ್ಕೆ ಮೀಸಲು ಎಂದು ರೈಲ್ವೇ ಹೇಳಿದೆ.

ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು ಮೈನಸ್‌ ಡಿಗ್ರಿ ಸೆಲ್ಸಿಯಸ್‌ನಲ್ಲಿ ರೈಲು ಸಾಗುವುದಕ್ಕೆ ಅನುಕೂಲಕವಾಗುವಂತೆ ಚಾಲಕನ ಕ್ಯಾಬಿನ್ ನ ಮುಂಭಾಗದ ಗ್ಲಾಸ್ ಬಿಸಿಯಾಗುವ ವ್ಯವಸ್ಥೆಯನ್ನು ಇಟ್ಟಿದೆ. ಇದರಿಂದಾಗಿ ಕಠಿಣ ಪರಿಸ್ಥಿತಿಗಳಲ್ಲಿಯೂ ತಡೆರಹಿತ ರೈಲು ಸಂಚಾರ ಸಾಧ್ಯವಾಗಲಿದೆ.

ಎರಡನೇ ರೈಲಿನ ವಿಶೇಷತೆ ಏನು?

ಎರಡನೇ ರೈಲು ಎಂಟು ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌. ಚೇರ್ ಕಾರ್ ಆಸನಗಳನ್ನು ಇದು ಹೊಂದಿದೆ, ಇದು ಕತ್ರಾ ಮತ್ತು ಬಾರಾಮುಲ್ಲಾ ನಡುವಿನ 246 ಕಿ.ಮೀ ಮಾರ್ಗದಲ್ಲಿ ಸಂಚರಿಸುತ್ತದೆ.

ಈ ರೈಲು ಪ್ರಯಾಣದ ಸಮಯವನ್ನು ಸಾಕಷ್ಟು ಉಳಿಸುತ್ತದೆ. ಈ ಎರಡು ಪ್ರದೇಶಗಳ ನಡುವೆ ರಸ್ತೆ ಮೂಲಕ ಸಾಗುವುದಾದರೆ 10 ಗಂಟೆಯಾದರೆ ಈ ರೈಲು 3ಗಂಟೆ 30 ನಿಮಿಷಗಳಲ್ಲಿ ತಲುಪುತ್ತದೆ.

ಈ ರೈಲಿನಲ್ಲಿ ನೀರಿನ ಟ್ಯಾಂಕ್‌ಗಳಿಗೆ ಸಿಲಿಕಾನ್ ಬಿಸಿಯಾಗುವ ಪ್ಯಾಡ್ ಗಳು, ಶೌಚಾಲಯಗಳಲ್ಲಿ ಬೆಚ್ಚಗಿನ ಗಾಳಿಯ ಚಲನೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸೆಂಟ್ರಲೈಸ್ಡ್‌ ಹೀಟರ್‌ ವ್ಯವಸ್ಥೆ ಅಳವಡಿಸಲಾಗಿದೆ. .

ವರ್ಗಾವಣೆ ಬಿಂದು

ಮಾತಾ ವೈಷ್ಣೋ ದೇವಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಮುಖ ಯಾತ್ರಾ ಕೇಂದ್ರವಾದ ಕತ್ರಾ ಟ್ರಾನ್ಸಿಟ್‌ ಪಾಯಿಂಟ್‌ ಆಗಲಿದೆ. ಅಸ್ತಿತ್ವದಲ್ಲಿರುವ ನವದೆಹಲಿ-ಕತ್ರಾ ವಂದೇ ಭಾರತ್ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರು ಹೊಸ ಕತ್ರಾ-ಬಾರಾಮುಲ್ಲಾ ರೈಲಿನ ಮೂಲಕ ಸಂಚರಿಸಬಹುದು. , ಶ್ರೀನಗರ ಮತ್ತು ಬಾರಾಮುಲ್ಲಾದಂತಹ ಸ್ಥಳಗಳನ್ನು ಸುಲಭವಾಗಿ ತಲುಪಬಹುದು.

ಉಧಂಪುರ, ಶ್ರೀನಗರ ಮತ್ತು ಬಾರಾಮುಲ್ಲಾವನ್ನು ಸಂಪರ್ಕಿಸುವ 37,012 ಕೋಟಿ ರೂ.ಗಳ ರೈಲ್ವೆ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಚೆನಾಬ್ ರೈಲು ಸೇತುವೆ ಮತ್ತು ಹಲವಾರು ಸುರಂಗಗಳು ಬಹುತೇಕ ಸಿದ್ಧಗೊಂಡಿವೆ. ಇದು ಕಣಿವೆ ರಾಜ್ಯಕ್ಕೆ ನಿರಂತರ ಸಂಪರ್ಕದ ಭರವಸೆ ನೀಡುತ್ತದೆ.

Tags:    

Similar News