ಮೋದಿ ಆಡಳಿತದಲ್ಲಿ ರೈಲ್ವೆ ಅಪಘಾತ ಕಡಿಮೆ; ಸಾವಿನ ಪ್ರಮಾಣ ಹೆಚ್ಚಾಗಿದ್ದು ಯಾಕೆ?

2015ರಿಂದ 2024ರವರೆಗೆ 678 ಅಪಘಾತಗಳು ಸಂಭವಿಸಿದ್ದರೆ ಅದಕ್ಕಿಂತ ಹಿಂದಿನ ದಶಕದಲ್ಲಿ 1711 ಅಫಘಾತಗಳು ಸಂಭವಿಸಿವೆ ಹಾಗೂ 904 ಮಂದಿ ಮೃತಪಟ್ಟಿದ್ದಾರೆ. ಹೀಗಾ್ಗಿ ಸಾವಿನ ಅನುಪಾತ ಲೆಕ್ಕಾಚಾರದಲ್ಲಿ ಮೋದಿ ಕಾಲದಲ್ಲಿಯೇ ಅಧಿಕ.

Update: 2024-12-06 11:49 GMT

2014-15 ರಿಂದ 2023-24 ರವರೆಗಿನ ನರೇಂದ್ರ ಮೋದಿ ಆಡಳಿತದಲ್ಲಿ ಭಾರತೀಯ ರೈಲ್ವೆ ವ್ಯಾಪಕ ಸುಧಾರಣೆ ಕಂಡಿದೆ ಹಾಗೂ ಸುರಕ್ಷತಾ ಟ್ರ್ಯಾಕ್ ರೆಕಾರ್ಡ್ ಗರಿಷ್ಠ ಮಟ್ಟದಲ್ಲಿದೆ ಎಂದು ರೈಲ್ವೆ ಇಲಾಖೆಯ ವರದಿಯು ಹೇಳುತ್ತಿದೆ. ಕೇಂದ್ರ ಸಚಿವ ಅಶ್ವಿನ್​ ವೈಷ್ಣವ್​ ಸಂಸತ್​ನ ಉಭಯ ಸದನಗಳಿಗೆ ಇದೇ ಉತ್ತರ ಕೊಟ್ಟಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ.

ದೇಶದ ಅತಿದೊಡ್ಡ ಸಾರಿಗೆ ಜಾಲದ ಕುರಿತ ಅಪಘಾತಗಳ ವರದಿ ಅಂಕಿ- ಅಂಶದಷ್ಟೇ ವಾಸ್ತವವಲ್ಲ. ಕಡಿಮೆ ಅಪಘಾತವಾದರೂ ಸಾವು ಹೆಚ್ಚಾಗಿದೆ ಎಂಬುದು ಲೆಕ್ಕಾಚಾರ ಹಾಕಿದರಷ್ಟೇ ಗೊತ್ತಾಗುತ್ತದೆ.



8 ತಿಂಗಳಲ್ಲಿ 29 ಅಪಘಾತಗಳು

ಈ ವರ್ಷದ ಏಪ್ರಿಲ್ 1 ಮತ್ತು ನವೆಂಬರ್ 26 ರ ನಡುವೆ ಒಟ್ಟು 29 ಅಪಘಾತಗಳು ನಡೆದಿವೆ. ಅಂದರೆ ತಿಂಗಳಿಗೆ ಕನಿಷ್ಠ ಮೂರು. ಈ ಹಣಕಾಸು ವರ್ಷದ ಎಂಟು ತಿಂಗಳಲ್ಲಿ ಹದಿನೇಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ ಪ್ರತಿ ತಿಂಗಳಿಗೆ ಸುಮಾರು ಇಬ್ಬರು . ಇನ್ನು 71 ಜನರು ಗಾಯಗೊಂಡಿದ್ದಾರೆ.

ಈ ವರ್ಷದ ಜೂನ್​​ನಲ್ಲಿ ಬಂಗಾಳದ ರಂಗಪಾಣಿ ಮತ್ತು ಚಟ್ಟರ್ ಹ್ಯಾಟ್ ನಿಲ್ದಾಣಗಳ ನಡುವೆ ಸರಕು ರೈಲೊಂದು ಹಿಂದಿನಿಂದ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಜನರು ಮೃತಪಟ್ಟಿದ್ದರು. ಘಟನೆಯಲ್ಲಿ 43 ಜನರು ಗಾಯಗೊಂಡಿದ್ದರು. ಇದೀಗ ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದು ರೈಲ್ವೆ ಕಾರ್ಯನಿರ್ವಹಣೆಯ ದೋಷವೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

ಮೇಲಿನ ಸಾವು ಮತ್ತು ಗಾಯದ ಸಂಖ್ಯೆಗಳು ಪ್ರಸಕ್ತ ಹಣಕಾಸು ವರ್ಷದ ಅಂಕಿಅಂಶಗಳಾಗಿವೆ. ಮೋದಿ ಆಡಳಿತದ ದಶಕದಲ್ಲಿ ರೈಲು ಅಪಘಾತಗಳ "ತೀವ್ರ ಇಳಿಕ ಕಂಡಿದೆ" ಎಂದು ವೈಷ್ಣವ್ ಒತ್ತಿಹೇಳುತ್ತಲೇ ಇದ್ದಾರೆ. ಲಿಖಿತ ಉತ್ತರದಲ್ಲಿ ಅವರು "ಹಲವು ವರ್ಷಗಳಲ್ಲಿ ಕೈಗೊಂಡ ವಿವಿಧ ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಪರಿಣಾಮವಾಗಿ ರೈಲು ಅಪಘಾತಗಳು 2014-15 ರಲ್ಲಿ 135 ರಿಂದ 2023-24 ರಲ್ಲಿ 40 ಕ್ಕೆ ಇಳಿದಿದೆ. 2024ರ ಏಪ್ರಿಲ್​ನಿಂದ ಅಕ್ಟೋಬರ್ ನಡುವಿನ ಅವಧಿಯಲ್ಲಿ ಅಪಘಾತಗಳ ಸಂಖ್ಯೆ 25 ರಷ್ಟಾಗಿದ್ದು, 2013ರಲ್ಲಿ ಇದೇ ಅವಧಿಯಲ್ಲಿ 67 ಅಪಘಾತಗಳು ಸಂಭವಿಸಿವೆ" ಎಂದು ತುಲನೆ ಮಾಡಿದ್ದಾರೆ.

ಮಾರಕ ಅಪಘಾತಗಳು

2015 ಮತ್ತು 2024ರ ನಡುವೆ 678 ಅಪಘಾತಗಳು ನಡೆದಿವೆ. 748 ಸಾವುಗಳು ಮತ್ತು 2,087 ಮಂದಿಗೆ ಗಾಯಗಳಾಗಿವೆ ಎಂದು ಸಚಿವರು ತಿಳಿಸಿದ್ದಾರೆ. ಇದು ಹಿಂದಿನ ದಶಕಕ್ಕಿಂತ ಕಡಿಮೆಯೇ ಹೌದು. ಆ ಅವಧಿಯಲ್ಲಿ 1,711 ರೈಲು ಅಪಘಾತಗಳು, 904 ಸಾವುಗಳು ಮತ್ತು 3,155 ಗಾಯಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.

ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದರೂ, ಹಣಕಾಸು ವರ್ಷ 15 ರಿಂದ 2024 ರ ಅವಧಿಯಲ್ಲಿ ಅಪಘಾತಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆಯ ಅನುಪಾತವು ಮಿತಿ ಮೀರಿದೆ. ಹಣಕಾಸು ವರ್ಷ 2005ರಿಂದ ರಿಂದ 2014 ಅವಧಿಯಲ್ಲಿ ಕೇವಲ 0.52 ರಷ್ಟಿದ್ದ ಅನುಪಾತವು, ಹಣಕಾಸು ವರ್ಷ 15ರಿಂದ ಹಣಕಾಸು ವರ್ಷ24ರವರೆಗೆ 1.1 ಕ್ಕೆ ಏರಿದೆ. ವಿವರಿಸಿ ಹೇಳುವುದಾದರೆ, ಒಟ್ಟು ರೈಲು ಅಪಘಾತಗಳ ಸಂಖ್ಯೆ ಕಡಿಮೆಯಾದ ಹೊರತಾಗಿಯೂ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಛಳವಾಗಿದೆ.

ರೈಲ್ವೆ ಸಲಕರಣೆಗಳ ವೈಫಲ್ಯ, ಪ್ರಾಕೃತಿಕ ವಿಕೋಪಗಳು, ಮಾನವ ಸೃಷ್ಟಿ ದೋಷಗಳು ಮತ್ತು ವಿಧ್ವಂಸಕ ಕೃತ್ಯಗಳಿಂದಾಗಿ ಅಪಘಾತಗಳು ಸಂಭವಿಸಿವೆ ಎಂದು ವೈಷ್ಣವ್ ಹೇಳಿದ್ದಾರೆ ಇದೇ ವೇಳೆ ಅವರು ವಿವಿಧ ಸುರಕ್ಷತಾ ಕ್ರಮಗಳ ಮೇಲಿನ ವೆಚ್ಚ ಹೆಚ್ಚಳದ ಮಾಹಿತಿಯನ್ನೂ ಕೊಟ್ಟಿದ್ದಾರೆ.

ಹಲವು ಪ್ರಶ್ನೆಗಳು, ಒಂದೇ ಉತ್ತರ

ಹಿಂದಿನ ದಶಕಕ್ಕೆ ಹೋಲಿಸಿದರೆ 2015-24ರ ಹಣಕಾಸು ವರ್ಷದಲ್ಲಿ ಹಳಿಗಳ ನವೀಕರಣದ ವೆಚ್ಚವು 2.33 ಪಟ್ಟು ಹೆಚ್ಚಾಗಿದೆ ಎಂದು ಸಚಿವ ವೈಷ್ಣವ್​ ಹೇಳಿದ್ದಾರೆ. ಹಳಿಗಳ ನವೀಕರಣದ ವೆಚ್ಚವು 1.34 ಪಟ್ಟು ಹೆಚ್ಚಾಗಿದೆ, ಹೊಸ ಹಳಿಗಳ ಅಳವಡಿಕೆ ವೆಚ್ಚ ದ್ವಿಗುಣಗೊಂಡಿದೆ. ಮಾನವರಹಿತ ಲೆವೆಲ್ ಕ್ರಾಸಿಂಗ್​ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್​ಲಾಕಿಂಗ್​ ವೆಚ್ಚವು 3.52 ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮುಂದುವರಿದ ಅವರು 2025ರ ಹಣಕಾಸು ವರ್ಷದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳ ಒಟ್ಟು ಬಜೆಟ್ ವೆಚ್ಚ ಸುಮಾರು 1.09 ಲಕ್ಷ ಕೋಟಿ ರೂಪಾಯಿ ಎಂದು ವಿವರಣೆ ನೀಡಿದ್ದಾರೆ.

ರೈಲ್ವೆ ಸಚಿವರು ತಮ್ಮ ಸಚಿವಾಲಯದ ಸುರಕ್ಷತಾ ದಾಖಲೆಯ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಅನೇಕ ಪ್ರಶ್ನೆಗಳು ಬಂದರು ಒಂದೇ ವಾಕ್ಯದ ಉತ್ತರ ನೀಡುತ್ತಿದ್ದಾರೆ. ''ಮೋದಿ ಆಡಳಿತದಲ್ಲಿ ಅಪಘಾತ ಕಡಿಮೆಯಾಗಿದೆ''. ಅಪಘಾತ ಸಂತ್ರಸ್ತರಿಗೆ ಪಾವತಿಸುವ ಪರಿಹಾರ, ಅಪಘಾತಗಳನ್ನು ಕಡಿಮೆ ಮಾಡಲು ಅನುಸರಿಸುತ್ತಿರುವ ಕ್ರಮಗಳು ಮತ್ತು ಅಪಘಾತಗಳ ಸಂಖ್ಯೆ ಅವರಿಗೆ ಎದುರಾಗಿರುವ ಪ್ರಮುಖ ಪ್ರಶ್ನೆಗಳಾಗಿವೆ.

ಪ್ರತಿ ಬಾರಿಯೂ ಸಚಿವರು, ಅಪಘಾತಗಳ ಸಂಖ್ಯೆಯಲ್ಲಿನ ಕುಸಿತ ಮತ್ತು ಸುರಕ್ಷತೆಗೆ ಸಂಬಂಧಿಸಿದ ವೆಚ್ಚದ ಹೆಚ್ಚಳ ಉಲ್ಲೇಖಿಸಿದ್ದಾರೆ. ಲೋಕಸಭೆಯಲ್ಲಿಯೂ ರೈಲ್ವೆ ಅಪಘಾತಗಳಿಗೆ ಸಂಬಂಧಿಸಿದ ಎಂಟು ಪ್ರಶ್ನೆಗಳಿಗೆ ಒಂದೇ ಉತ್ತರ ನೀಡಿದ್ದಾರೆ.

ದಟ್ಟಣೆ ಮತ್ತು ಸುರಕ್ಷತೆ

ರೈಲ್ವೆ ಸುರಕ್ಷತಾ ಯೋಜನೆಗಳಿಗೆ ಗರಿಷ್ಠ ಬಜೆಟ್​ ನೀಡುತ್ತಿರುವ ವಿಷಯವನ್ನು ಒತ್ತಿಹೇಳಲು ಸಚಿವಾಲಯವು ಶ್ರಮಿಸುತ್ತಿದ್ದಾರೆ. ಆದರೆ, ತಜ್ಞರು ರೈಲ್ವೆ ಸಂಚಾರದಲ್ಲಿಉಂಟಾಗಿರುವ ಭಾರಿ ದಟ್ಟಣೆಯಿಂದಾಗಿ ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ರೈಲ್ವೆಯ ನಿವೃತ್ತ ಮುಖ್ಯ ಎಂಜಿನಿಯರ್ ಅಲೋಕ್ ಕುಮಾರ್ ವರ್ಮಾ ಅವರು ಈ ಹಿಂದೆ, ರೈಲ್ವೆ ಸಂಚಾರದಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಹೇಳಿದ್ದರು. ಸಂಚಾರ ಜಾಲದಾದ್ಯಂತ ಸುಮಾರು 10,000 ಕಿ.ಮೀ ಟ್ರಂಕ್ ಮಾರ್ಗಗಳು ಕಿಕ್ಕಿರಿದಿವೆ. ಅದರ ಸಾಮರ್ಥ್ಯಕ್ಕಿಂತಲೂ ಶೇಕಡಾ 125 ರಷ್ಟಿದೆ ಎಂದು ವಿವರಿಸಿದ್ದರು.

ದಟ್ಟಣೆಯ ನಡುವೆ ಎಲ್ಲಿಯಾದರೂ ವೈಫಲ್ಯ ಉಂಟಾದರೆ ಬಹಳಷ್ಟು ರೈಲುಗಳು ಒಂದೇ ಕಡೆ ಸೇರುವಂತಾಗುತ್ತೆದೆ. ಇದು 100 ಕಿ.ಮೀ ವ್ಯಾಪ್ತಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತವೆ. ಒದಿ ಎರಡು-ಮೂರು ದಿನಗಳವರೆಗೆ ಸಮಸ್ಯೆ ಉಂಟು ಮಾಡುತ್ತದೆ. ಇದರಿಂದ ತಪಾಸಣೆ ಹಾಗೂ ನಿರ್ವಹಣೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ದಟ್ಟಣೆ ಮತ್ತು ವಿಳಂಬವಾದ ರೈಲುಗಳು ರೈಲ್ವೆ ಮಾರ್ಗಗಳಲ್ಲಿ ದೈನಂದಿನ ಸುರಕ್ಷತೆ ಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಖಾಸಗೀಕರಣದ ಭೀತಿ

ರೈಲ್ವೆ (ತಿದ್ದುಪಡಿ) ಮಸೂದೆ 2024 ಅನ್ನು ತರುವ ಮೂಲಕ ರೈಲ್ವೆಯ ಸ್ವಾಯತ್ತತೆಯನ್ನು ಕಡಿಮೆ ಮಾಡಲು ಮತ್ತು ಅದನ್ನು ಖಾಸಗೀಕರಣಗೊಳಿಸಲು ಸರ್ಕಾರ ಬಯಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಭಾರತೀಯ ರೈಲ್ವೆ ಮಂಡಳಿ ಕಾಯ್ದೆ, 1905 ಅನ್ನು ರೈಲ್ವೆ ಕಾಯ್ದೆ, 1989 ನೊಂದಿಗೆ ವಿಲೀನಗೊಳಿಸಲು ಸರ್ಕಾರ ಪ್ರಸ್ತಾಪಿಸಿದೆ - ರೈಲ್ವೆ (ತಿದ್ದುಪಡಿ) ಮಸೂದೆ, 2024.

Tags:    

Similar News