SM Krishna : ದೇಶ ಕಂಡ ಅಪರೂಪದ ರಾಜಕಾರಣಿ ಎಸ್​ಎಂ ಕೃಷ್ಣ ಅವರ ಜೀವನ, ಸಾಧನೆ ಹಾದಿ ಹೀಗಿದೆ

SM Krishna: ಎಸ್​ಎಂ ಕೃಷ್ಣ ಅವರ ರಾಜಕೀಯ ದಾರಿ ಸುಗಮವಾಗಿ ಏನೂ ಇರಲಿಲ್ಲ. ಹಲವಾರು ಏರಿಳಿತಗಳ ಕಂಡು ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯುನ್ನತ ಹುದ್ದೆಗೆ ಏರಿ ಖ್ಯಾತನಾಮರಾದವರು.

Update: 2024-12-10 02:18 GMT
SM Krishna

ಎಸ್​ಎಂ ಕೃಷ್ಣ ಎಂದೇ ಖ್ಯಾತರಾಗಿದ್ದ ಸೋಮನಹಳ್ಳಿ ಮಲ್ಲಣ್ಣ ಕೃಷ್ಣ (ಎಸ್‌ ಎಂ ಕೃಷ್ಣ) ಅವರು ಈ ರಾಜ್ಯ ಕಂಡ ಅಪರೂಪದ ರಾಜಕಾರಣಿ ಹಾಗೂ ಮುತ್ಸದ್ಧಿ. ವಿಧಾನಸಭೆ ಸ್ಪೀಕರ್ (Speaker) ಆಗಿ, ಉಪಮುಖ್ಯಮಂತ್ರಿಯಾಗಿ (Deputy Chief Minister), ಮುಖ್ಯಮಂತ್ರಿಯಾಗಿ (Chief Minister), ಮಹಾರಾಷ್ಟ್ರದ ರಾಜ್ಯಪಾಲರಾಗಿ (Governor of Maharashtra) ಕಾರ್ಯನಿರ್ವಹಿಸಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವರೂ (Minister of External Affairs) ಆಗಿದ್ದರು. ಹೀಗೆ ಎಸ್.ಎಂ. ಕೃಷ್ಣ (SM Krishna) ಹಲವು ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

ಎಸ್​ಎಂ ಕೃಷ್ಣ ಅವರ ರಾಜಕೀಯ ದಾರಿ ಸುಗಮವಾಗಿ ಏನೂ ಇರಲಿಲ್ಲ. ಹಲವಾರು ಏರಿಳಿತಗಳ ಕಂಡು ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯುನ್ನತ ಹುದ್ದೆಗೆ ಏರಿ ಖ್ಯಾತನಾಮರಾದವರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932ರಲ್ಲಿ ಒಕ್ಕಲಿಗ ಕುಟುಂಬದ ಎಸ್‌.ಸಿ. ಮಲ್ಲಯ್ಯ ಅವರ ಪುತ್ರ ಎಸ್. ಎಂ. ಕೃಷ್ಣ. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದರು ಹಾಗೂ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಓದಿದರು.

ಮದ್ದೂರಲ್ಲಿ ಮೊದಲ ವಿಜಯ ?

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾದ ಎಸ್​ ಎಂ ಕೃಷ್ಣ ಅವರು 1962ರಲ್ಲಿ ವಿಧಾನಸಭೆ ಪ್ರವೇಶಿಸಿದ್ದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಗೊಂಡರು. 1971ರಲ್ಲಿ ಮತ್ತೊಮ್ಮೆ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1972ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೃಷ್ಣ 1977ರಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರಯ., 1983ರಲ್ಲಿ ಉದ್ಯಮ ಖಾತೆ ಸಚಿವರಾಗಿ, 1984ರಲ್ಲಿ ಹಣಕಾಸು ಸಚಿವರಾಗಿ ಬಳಿಕ 1989ರಿಂದ 1992ರ ತನಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.

ಮುಖ್ಯಮಂತ್ರಿಯಾಗಿ ಎಸ್.ಎಂ. ಕೃಷ್ಣ

ಕರ್ನಾಟಕದ ಉಪಮುಖ್ಯಮಂತ್ರಿಯಾಗಿ 1992ರಿಂದ 1994ರವರೆಗೆ ಸೇವೆ ಸಲ್ಲಿಸಿದ್ದ ಎಸ್.ಎಂ. ಕೃಷ್ಣ 1996ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು. ಬಳಿಕ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ 1999ರಿಂದ 2004ರವರೆಗೆ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಅವರು ಹಲವಾರು ಯಶಸ್ವಿ ಯೋಜನೆಗಳನ್ನು ಜಾರಿಗೆ ತಂದು ಪ್ರಖ್ಯಾತರಾದರು. ಅವರು ಸಿಎಂ ಆಗಿದ್ದ ಕಾಲದಲ್ಲಿ ಬೆಂಗಳೂರು ಐಟಿ, ಬಿಟಿ ನಗರವಾಗಿ ವಿಶ್ವ ಮಟ್ಟದಲ್ಲೇ ಜಾಗತಿಕ ಖ್ಯಾತಿ ಗಿಟ್ಟಿಸಿತು. ವರನಟ ಡಾ. ರಾಜ್‌ಕುಮಾರ್‌ ಅಪಹರಣ, ಕಾವೇರಿ ವಿವಾದ ಹಾಗೂ ಭೀಕರ ಬರಗಾಲ ಸಮಸ್ಯೆಗಳನ್ನು ತಮ್ಮ ಆಡಳಿತದ ಅವಧಿಯಲ್ಲಿ ಎದುರಿಸಿದರು. ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಪ್ರಸ್ತುತ ಅತ್ಯಂತ ಯಶಸ್ವಿ ಸರ್ಕಾರಿ ಯೋಜನೆ ಎನಿಸಿಕೊಂಡಿದೆ.

ಮಹಾರಾಷ್ಟ್ರ ರಾಜ್ಯಪಾಲ

2004ರಲ್ಲಿ ಕರ್ನಾಟಕದಲ್ಲ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕೃಷ್ಣ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. 2008ರಲ್ಲಿ ಮತ್ತೆ ರಾಜ್ಯಸಭೆಗೆ ಮರಳಿದ ಅವರು, 2009ರಿಂದ 2012ರವರೆಗೆ ವಿದೇಶಾಂಗ ಸಚಿವರಾದರು. ರಾಜ್ಯ ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಮಾಡಿದ ಅವರು 2017ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರಿದರು. ಆದರೆ ಅವರಿಗೆ ಅಲ್ಲೂ ಸೂಕ್ತ ಸ್ಥಾನಮಾನ ಸಿಗಲಿಲ್ಲ.

ಕ್ರೀಡಾಪ್ರೇಮಿ

ಎಸ್‌ ಎಂ ಕೃಷ್ಣ ಅವರು ಕ್ರೀಡಾ ಪ್ರೇಮಿ. ನಿಯಮಿತವಾಗಿ ಟೆನಿಸ್​ ಆಡುತ್ತಿದ್ದರು. ಈ ಮೂಲಕ ಉತ್ತರ ಫಿಟ್‌ನೆಸ್‌ ಹೊಂದಿದ್ದರು. ಅವರು ಇತರ ಕ್ರೀಡೆಗಳ ಬಗ್ಗೆಯೂ ಹೆಚ್ಚು ಒಲವು ಹೊಂದಿದ್ದರು.

ರಾಜಕೀಯದಿಂದ ನಿವೃತ್ತಿ

2023ರ ವಿಧಾನಸಭಾ ಚುನಾವಣೆ ತಯಾರಿ ನಡೆಯುವಾಗ ಅವರು ರಾಜಕೀಯದಿಂದ ನಿವೃತ್ತಿ ಪಡೆದರು. ''ನನಗೆ 90 ವರ್ಷ. ಈಗ ನಾನು 50 ವರ್ಷದವನಂತೆ ಇರಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆʼʼ ಎಂದು ಹೇಳಿದ್ದರು. ಆ ಬಳಿಕ ರಾಜಕೀಯದಿಂದ ಸಂಪೂರ್ಣ ದೂರ ಇದ್ದರು.

Tags:    

Similar News