ಪ್ರಪಂಚದ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಸೇತುವೆ ನದಿ ಮಟ್ಟದಿಂದ 359 ಮೀಟರ್‌ ಎತ್ತರವಿದ್ದು 1315 ಮೀಟರ್‌ ಉದ್ದವಿದೆ. 272 ಕಿ.ಮೀ ಉದ್ದದ ಉಧಂಪುರ, ಶ್ರೀನಗರ ಹಾಗೂ ಬಾರಾಮುಲ್ಲಾ ರೈಲ್ವೆ ಲಿಂಕ್‌ನ ಭಾಗವಾಗಿದ್ದು ಇದು ಭಾರತೀಯ ಎಂಜಿನಿಯರಿಂಗ್‌ನ ಅದ್ಭುತ ಕೌಶಲ್ಯವಾಗಿದೆ.;

Update: 2025-06-06 14:54 GMT

ಚೆನಾಬ್‌ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಈ ಸೇತುವೆ ನದಿ ಮಟ್ಟದಿಂದ 359 ಮೀಟರ್‌ ಎತ್ತರವಿದ್ದು 1315 ಮೀಟರ್‌ ಉದ್ದವಿದೆ. 272 ಕಿ.ಮೀ  ಉದ್ದದ ಉಧಂಪುರ, ಶ್ರೀನಗರ ಹಾಗೂ ಬಾರಾಮುಲ್ಲಾ ರೈಲ್ವೆ ಲಿಂಕ್‌ನ ಭಾಗವಾಗಿದ್ದು ಇದು ಭಾರತೀಯ ಎಂಜಿನಿಯರಿಂಗ್‌ನ ಅದ್ಭುತ ಕೌಶಲ್ಯವಾಗಿದೆ. 

ಸೇತುವೆ ನಿರ್ಮಾಣಕ್ಕೆ ಬೆಂಗಳೂರಿನ ನಂಟು

ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ನಿರ್ಮಾಣದ ಹಿಂದೆ ಬೆಂಗಳೂರಿನ ಐಐಎಸ್‌ಸಿ ಪ್ರೊಫೆಸರ್‌ ಮಾಧವಿ ಲತಾ ಅವರ ಅಗಾಧ ಪರಿಶ್ರಮ ಅಡಗಿದೆ. ಐಐಎಸ್‌ಸಿ ಸಿವಿಲ್‌ಎಂಜಿನಿಯರಿಂಗ್‌ ವಿಭಾಗದ ರಾಕ್‌ ಎಂಜಿನಿಯರ್‌ ಆಗಿರುವ ಅವರು, ಸುಮಾರು 17 ವರ್ಷಗಳ ಕಾಲ ಚೆನಾಬ್‌ ಸೇತುವೆಯ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಐಫೆಲ್‌ ಟವರ್‌ಗಿಂತ ಎತ್ತರದ ಸೇತುವೆ 

ಚೆನಾಬ್‌ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯು 359 ಮೀಟರ್‌ ಎತ್ತರವಿದ್ದು ಖಾತ್ರ ಮತ್ತು ಖಾಜಿಗುಂಡ್‌ ನಡುವಿನ ಎರಡು ಬೆಟ್ಟಗಳನ್ನು ಸಂಪರ್ಕಿಸುವ ರೈಲು ಸೇತುವೆಗೆ 1,486 ಕೋಟಿ ರೂ. ವೆಚ್ಚ ಮಾಡಲಾಗಿದ್ದು ಶತಮಾನಕ್ಕೂ ಹೆಚ್ಚು ಕಾಲ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಸೇತುವೆಯು ಪ್ಯಾರಿಸ್‌ನ ಐಪೆಲ್‌ ಟವರ್‌ಗಿಂತ ಎತ್ತರವಾಗಿರುವುದು ಈ ಸೇತುವೆಯ ವಿಶೇಷತೆಯಾಗಿದೆ.  

ಸೇತುವೆಯ ವಿಶೇಷತೆ

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಗೆ 28,660 ಮೆಗಾ ಟನ್ ಉಕ್ಕಿನಿಂದ ತಯಾರಿಸಲಾಗಿದ್ದು, ಇದು 0 ಡಿಗ್ರಿ ಯಿಂದ 40 ಡಿಗ್ರಿಗಳವರೆಗೆ ತಡೆದುಕೊಳ್ಳಬಲ್ಲದು. 359 ಮೀಟರ್ ಎತ್ತರವಿರುವ ಇದು ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ಗಿಂತ ಎತ್ತರವಾಗಿದ್ದು, ಕುತುಬ್ ಮಿನಾರ್‌ಗಿಂತ ಕನಿಷ್ಠ ಐದು ಪಟ್ಟು ಎತ್ತರವಾಗಿದೆ. ಈ ಸೇತುವೆಯು ಗಂಟೆಗೆ 266 ಕಿ.ಮೀ ವೇಗದ ಗಾಳಿ ಮತ್ತು ಬಲವಾದ ಭೂಕಂಪಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸರ್ಕಾರ ಇದನ್ನು "ಇತ್ತೀಚಿನ ಇತಿಹಾಸದಲ್ಲಿ ಭಾರತದಲ್ಲಿ ಯಾವುದೇ ರೈಲ್ವೆ ಯೋಜನೆ ಎದುರಿಸುತ್ತಿರುವ ಅತಿದೊಡ್ಡ ಸಿವಿಲ್‌ ಎಂಜಿನಿಯರಿಂಗ್‌ ಸವಾಲು" ಎಂದು ಬಣ್ಣಿಸಿದೆ.

Tags:    

Similar News