Phir Layenge Kejriwal : 'ಫಿರ್ ಲಾಯೆಂಗೆ ಕೇಜ್ರಿವಾಲ್': ಪ್ರಚಾರ ಗೀತೆ ಬಿಡುಗಡೆ ಮಾಡಿದ ಆಪ್
Phir Layenge Kejriwal:ಚುನಾವಣಾ ಆಯೋಗ (ಇಸಿ) ಮಂಗಳವಾರದ ನಂತರ ಚುನಾವಣಾ ವೇಳಾಪಟ್ಟಿ ಮಾಡಿದ ಹಿನ್ನೆಲೆಯಲ್ಲಿ ಆಪ್ ಕೂಡ ತನ್ನ ಪ್ರಚಾರಕ್ಕೆ ಕಿಚ್ಚು ಹಚ್ಚಿದೆ.;
ದೆಹಲಿ ವಿಧಾನಸಭಾ ಚುನಾವಣೆಗೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಂಗಳವಾರ ಪಕ್ಷದ ಪ್ರಚಾರ ಗೀತೆ ಬಿಡುಗಡೆ ಮಾಡಿದರು. 3:29 ನಿಮಿಷಗಳ "ಫಿರ್ ಲಾಯೆಂಗೆ ಕೇಜ್ರಿವಾಲ್" ಹಾಡು ಎಎಪಿಯ ಅಧಿಕಾರಾವಧಿಯ ಸಾಧನೆಗಳನ್ನು ಹೇಳಿದೆ. ಆಡಳಿತದಲ್ಲಿ ನಿರಂತರತೆಗೆ ಒತ್ತು ನೀಡುವ ಮೂಲಕ ಮತದಾರರನ್ನು ಸೆಳೆಯುವ ಗುರಿಯನ್ನು ಈ ಪ್ರಚಾರ ಗೀತೆ ಹೊಂದಿದೆ.
ಚುನಾವಣಾ ಆಯೋಗ (ಇಸಿ) ಮಂಗಳವಾರದ ನಂತರ ಚುನಾವಣಾ ವೇಳಾಪಟ್ಟಿ ಮಾಡಿದ ಹಿನ್ನೆಲೆಯಲ್ಲಿ ಆಪ್ ಕೂಡ ತನ್ನ ಪ್ರಚಾರಕ್ಕೆ ಕಿಚ್ಚು ಹಚ್ಚಿದೆ.
ಹಾಡನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಕೇಜ್ರಿವಾಲ್, "ನಾವು ನಮ್ಮ ಚುನಾವಣೆಗಳನ್ನು ಹಬ್ಬಗಳಂತೆ ಆಚರಿಸುತ್ತೇವೆ. ಜನರು ನಮ್ಮ ಹಾಡಿಗಾಗಿ ಕಾಯುತ್ತಿದ್ದರು. ಈಗ ಅದು ಹೊರಬಂದಿದೆ. ಜನರು ಈ ಹಾಡಿಗೆ ನರ್ತಿಸಬಹುದು." ಎಂದು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಬಿಜೆಪಿ ನಾಯಕರು ಸಹ ನಮ್ಮ ಹಾಡನ್ನು ಇಷ್ಟಪಡುತ್ತಾರೆ ಎಂದು ನನಗೆ ತಿಳಿದಿದೆ. ಅವರು ಸಹ ಕದ್ದ ಮುಚ್ಚಿ ನಮ್ಮ ಹಾಡಿಗೆ ನೃತ್ಯ ಮಾಡಲಿದ್ದಾರೆ,ʼʼ ಎಂದು ಹೇಳಿದರು.
ಮುಖ್ಯಮಂತ್ರಿ ಅತಿಶಿ ಮತ್ತು ಇತರ ಹಿರಿಯ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸೌರಭ್ ಭಾರದ್ವಾಜ್, ಗೋಪಾಲ್ ರಾಯ್ ಮತ್ತು ಸಂಜಯ್ ಸಿಂಗ್ ಇತರರು ಬಿಡುಗಡೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಚಾರ ಗೀತೆಯ ಬಿಡುಗಡೆಯೊಂದಿಗೆ, ಎಎಪಿ ರಾಷ್ಟ್ರ ರಾಜಧಾನಿಯಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಲು ಎಎಪಿ ಈಗಾಗಲೇ ಎಲ್ಲಾ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.