ಅಮರನಾಥ ಯಾತ್ರೆ: ಜಮ್ಮುವಿನಿಂದ ತೆರಳಿದ 7,500ಕ್ಕೂ ಹೆಚ್ಚು ಯಾತ್ರಿಕರು

ಸ್ಥಳೀಯ ನೋಂದಣಿಗಾಗಿ ಕೌಂಟರ್‌ಗಳ ಸಂಖ್ಯೆಯನ್ನು 12 ರಿಂದ 15 ಕ್ಕೆ ಹೆಚ್ಚಿಸಲಾಗಿದ್ದು, ದೈನಂದಿನ ಕೋಟಾವನ್ನು 4,100 ಕ್ಕೆ ಏರಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ 4,000ಕ್ಕೂ ಹೆಚ್ಚು ಭಕ್ತರು ಜಮ್ಮುವಿನಲ್ಲಿ ನೋಂದಣಿಗಾಗಿ ಆಗಮಿಸಿದ್ದಾರೆ.;

Update: 2025-07-08 09:28 GMT

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ಗುಹಾ ದೇವಾಲಯಕ್ಕೆ ಮಂಗಳವಾರ ಬೆಳಗ್ಗೆ 7,500ಕ್ಕೂ ಹೆಚ್ಚು ಯಾತ್ರಿಕರ ತಂಡ ಜಮ್ಮುವಿನಿಂದ ಬಿಗಿ ಭದ್ರತೆಯೊಂದಿಗೆ ಹೊರಟಿದೆ. 38 ದಿನಗಳ ಈ ಯಾತ್ರೆ ಜುಲೈ 3ರಂದು ಕಾಶ್ಮೀರದಲ್ಲಿ ಎರಡು ಮಾರ್ಗಗಳ ಮೂಲಕ ಆರಂಭಗೊಂಡಿದ್ದು, ಆಗಸ್ಟ್ 9 ರಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ 94,000ಕ್ಕೂ ಹೆಚ್ಚು ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಗಿನ ಜಾವ 2:55 ರಿಂದ 4:05 ರವರೆಗೆ, ಒಟ್ಟು 7,541 ಯಾತ್ರಿಕರು (5,516 ಪುರುಷರು ಮತ್ತು 1,765 ಮಹಿಳೆಯರು) ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ 309 ವಾಹನಗಳಲ್ಲಿ ಕಾಶ್ಮೀರದ ಎರಡು ಬೇಸ್ ಕ್ಯಾಂಪ್‌ಗಳಿಗೆ ತೆರಳಿದ್ದಾರೆ. 3,321 ಯಾತ್ರಿಕರು 148 ವಾಹನಗಳಲ್ಲಿ 14 ಕಿಮೀ ಬಾಲ್ಟಾಲ್ ಮಾರ್ಗದ ಮೂಲಕ ಸಾಗಿದರೆ, 4,220 ಯಾತ್ರಿಕರು 161 ವಾಹನಗಳಲ್ಲಿ 48 ಕಿ.ಮೀ ಪಹಲ್ಗಾಮ್ ಮಾರ್ಗದ ಮೂಲಕ ಯಾತ್ರೆ ಕೈಗೊಂಡಿದ್ದಾರೆ. ಜುಲೈ 2 ರಂದು ಯಾತ್ರೆಗೆ ಚಾಲನೆ ನೀಡಿದಾಗಿನಿಂದ ಜಮ್ಮುವಿನಿಂದ ಒಟ್ಟು 47,902 ಯಾತ್ರಿಕರು ತೆರಳಿದ್ದಾರೆ.

ಸ್ಥಳೀಯ ನೋಂದಣಿಗಾಗಿ ಕೌಂಟರ್‌ಗಳ ಸಂಖ್ಯೆಯನ್ನು 12 ರಿಂದ 15 ಕ್ಕೆ ಹೆಚ್ಚಿಸಲಾಗಿದ್ದು, ದೈನಂದಿನ ಕೋಟಾವನ್ನು 4,100 ಕ್ಕೆ ಏರಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ 4,000ಕ್ಕೂ ಹೆಚ್ಚು ಭಕ್ತರು ಜಮ್ಮುವಿನಲ್ಲಿ ನೋಂದಣಿಗಾಗಿ ಆಗಮಿಸಿದ್ದಾರೆ. ಇದುವರೆಗೆ 3.5 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಯಾತ್ರಿಕರಿಗಾಗಿ ಜಮ್ಮುವಿನಾದ್ಯಂತ 34 ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಅವರಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಟ್ಯಾಗ್‌ಗಳನ್ನು ನೀಡಲಾಗುತ್ತಿದೆ. ಲಖನ್‌ಪುರದಿಂದ ಬನಿಹಾಲ್‌ವರೆಗೆ 50,000ಕ್ಕೂ ಹೆಚ್ಚು ಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆಗಾಗಿ 100ಕ್ಕೂ ಹೆಚ್ಚು ಲಾಡ್ಜ್‌ಮೆಂಟ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾತ್ರಿಕರ ಭದ್ರತೆಗಾಗಿ 180 ಕೇಂದ್ರಿಯ ಆಯಕಟ್ಟಿನ ಪೊಲೀಸ್ ಪಡೆ (CAPF) ಕಂಪನಿಗಳನ್ನು ನಿಯೋಜಿಸಲಾಗಿದ್ದು, ಇದು ಹಿಂದಿನ ವರ್ಷಗಳಿಗಿಂತ 30 ಕಂಪನಿಗಳು ಹೆಚ್ಚಿವೆ. 

Tags:    

Similar News