Pahalgam Terror Attack | ಪಹಲ್ಗಾಮ್ ಘಟನೆಗೆ ಖಂಡನೆ; ಕಪ್ಪುಬಣ್ಣದ ಮುಖಪುಟ ಪ್ರಕಟಿಸಿದ ದಿನಪತ್ರಿಕೆಗಳು
ಕಾಶ್ಮೀರದ ಪ್ರಮುಖ ದಿನಪತ್ರಿಕೆಗಳಾದ ಗ್ರೇಟರ್ ಕಾಶ್ಮೀರ್, ರೈಸಿಂಗ್ ಕಾಶ್ಮೀರ್, ಕಾಶ್ಮೀರ್ ಉಜ್ಜಾ, ಅಫ್ತಾಬ್ ಮತ್ತು ತೈಮೀಲ್ ಇರ್ಷಾದ್ ಸೇರಿ ಹಲವು ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಗಳು ಮುಖಪುಟವನ್ನು ಕಪ್ಪುಬಣ್ಣದಲ್ಲಿ ಮುದ್ರಿಸಿ, ಹಿಂಸಾಚಾರ ವಿರೋಧಿಸಿವೆ.;
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಕಾಶ್ಮೀರದ ಮಾಧ್ಯಮಗಳು ಒಕ್ಕೊರಲಿನಿಂದ ಖಂಡಿಸಿವೆ. ಉಗ್ರರ ದುಷ್ಕೃತ್ಯ ಖಂಡಿಸಿ ಹಲವು ಪ್ರಮುಖ ದಿನಪತ್ರಿಕೆಗಳು ಮುಖಪುಟವನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿವೆ.
ಕಪ್ಪು ಬಣ್ಣದ ಮುಖಪುಟದಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಮುಖ್ಯಾಂಶ ಮತ್ತು ತಲೆಬರಹ ನೀಡಿವೆ. ಕಾಶ್ಮೀರದ ಪ್ರಮುಖ ದಿನಪತ್ರಿಕೆಗಳಾದ ಗ್ರೇಟರ್ ಕಾಶ್ಮೀರ್, ರೈಸಿಂಗ್ ಕಾಶ್ಮೀರ್, ಕಾಶ್ಮೀರ್ ಉಜ್ಜಾ, ಅಫ್ತಾಬ್ ಮತ್ತು ತೈಮೀಲ್ ಇರ್ಷಾದ್ ಸೇರಿ ಹಲವು ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಗಳು ಮುಖಪುಟವನ್ನು ಕಪ್ಪುಬಣ್ಣದಲ್ಲಿ ಮುದ್ರಿಸಿ, ಹಿಂಸಾಚಾರ ವಿರೋಧಿಸಿವೆ.
ಭಯೋತ್ಪಾದಕರು ಕಾಲ್ನಡಿಗೆ ಅಥವಾ ಕುದುರೆ ಮೂಲಕ ಬಂದು ಜನದಟ್ಟಣೆಯ ಪ್ರವಾಸಿ ತಾಣಗಳಲ್ಲಿ ದಾಳಿ ಮಾಡಬಹುದು ಎಂಬ ಅಂಶವನ್ನು ಎತ್ತಿ ತೋರಿಸಿವೆ. ಇಂತಹ ಭೀಕರ ಘಟನೆಗಳು ಮರುಕಳಿಸದಂತೆ ತಡೆಯಲು ಜಾಗರೂಕತೆ, ಸಮುದಾಯಗಳ ಸಹಭಾಗಿತ್ವ ಹಾಗೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವುದೇ ಏಕಮಾತ್ರ ಮಾರ್ಗ ಎಂದು ಅಭಿಪ್ರಾಯ ಪ್ರಕಟಿಸಿವೆ.
ಈ ಮಧ್ಯೆ ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯರು ಕೂಡ ಕಾಶ್ಮೀರ ಬಂದ್ ಆಚರಿಸುತ್ತಿದ್ದು, ಪ್ರತಿಭಟನಾ ರ್ಯಾಲಿ ನಡೆಸಿವೆ. ಸ್ಥಳೀಯ ಮುಖಂಡರು ಪ್ರವಾಸಿಗರಿಗೆ ಧೈರ್ಯ ತುಂಬಿದ್ದು, ಆಶ್ರಯ, ಊಟದ ವ್ಯವಸ್ಥೆ ಕೂಡ ಕಲ್ಪಿಸಿದ್ದಾರೆ.