ರಾಷ್ಟ್ರಗೀತೆಗೆ ಅಪಮಾನ ಆರೋಪ; ತಮಿಳು ನಾಡು ವಿಧಾನಸಭೆಯಿಂದ ಹೊರ ನಡೆದ ರಾಜ್ಯಪಾಲ

ಘಟನೆ ಬಗ್ಗೆ ರಾಜಭವನ ಟ್ವೀಟ್‌ ಮಾಡಿದ್ದು, ತಮಿಳುನಾಡು ವಿಧಾನಸಭೆಯಲ್ಲಿ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಮತ್ತೊಮ್ಮೆ ಅವಮಾನ ಮಾಡಲಾಗಿದ್ದು,ಅದನ್ನು ಸಹಿಸದೇ ಹೊರ ನಡೆಯಲಾಗಿದೆ ಎಂದು ಹೇಳಿದೆ.;

Update: 2025-01-06 09:18 GMT
ತಮಿಳುನಾಡು ರಾಜ್ಯರಾಲ ರವಿ

ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಸೋಮವಾರ ತಮ್ಮ ವಾಡಿಕೆಯ ಭಾಷಣ ಮಾಡದೆ ವಿಧಾನಸಭೆಯಿಂದ ಹೊರಟ ಪ್ರಸಂಗ ನಡೆದಿದೆ.

ರವಿ ತಮ್ಮ ಭಾಷಣ ಪ್ರಾರಂಭಿಸುವ ಕೆಲವೇ ಕ್ಷಣಗಳ ಮೊದಲು, ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಸದಸ್ಯರು ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಎಂ ಅಪ್ಪಾವು ಅವರ ನಿರ್ದೇಶನದ ಮೇರೆಗೆ ಮಾರ್ಷಲ್‌ಗಳು ಅವರನ್ನು ಅವರೆಲ್ಲೆರನ್ನೂ ಹೊರ ಹಾಕಿದರು.

ಅದೇ ಸಮಯದಲ್ಲಿ, ಕಾಂಗ್ರೆಸ್ ಪಕ್ಷದ ಸದಸ್ಯರು ಕಪ್ಪು ಬ್ಯಾಡ್ಜ್‌ಗಳನ್ನು ಧರಿಸಿ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೀಗಾಗಿ ಗದ್ದಲ ಉಂಟು ಮಾಡಿದರು. ನಂತರ ಬಿಜೆಪಿ ಮತ್ತು ಪಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು.

ಘಟನೆ ಬಗ್ಗೆ ರಾಜಭವನ ಟ್ವೀಟ್‌ ಮಾಡಿದ್ದು, ತಮಿಳುನಾಡು ವಿಧಾನಸಭೆಯಲ್ಲಿ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಮತ್ತೊಮ್ಮೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ.

"ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೊದಲ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಇದನ್ನು ಎಲ್ಲಾ ರಾಜ್ಯ ಶಾಸಕಾಂಗಗಳಲ್ಲಿ ರಾಜ್ಯಪಾಲರ ಭಾಷಣದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಾಡಲಾಗುತ್ತದೆ. ಇಂದು, ರಾಜ್ಯಪಾಲರು ಸದನಕ್ಕೆ ಆಗಮಿಸಿದಾಗ ತಮಿಳು ತಾಯಿ ವಾಝ್ತು (ತಾಯಿ ತಮಿಳಿಗೆ ಪ್ರಾರ್ಥನೆ, ರಾಜ್ಯ ಗೀತೆ) ಮಾತ್ರ ಹಾಡಲಾಯಿತು. ರಾಷ್ಟ್ರಗೀತೆ ಹಾಡಲಿಲ್ಲ. ಈ ವೇಳೆ ರಾಜ್ಯಪಾಲರು ಸದನಕ್ಕೆ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಸ್ಮರಿಸಿ ರಾಷ್ಟ್ರಗೀತೆ ಹಾಡುವಂತೆ ಮುಖ್ಯಮಂತ್ರಿ, ಸದನದ ನಾಯಕ ಮತ್ತು ಸ್ಪೀಕರ್‌ಗೆ ಮನವಿ ಮಾಡಿದರು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

" ಮನವಿಯ ಹೊರತಾಗಿಯೂ ಅವರು ನಿರಾಕರಿಸಿದರು. ಇದು ತೀವ್ರ ಕಳವಳಕಾರಿ ವಿಷಯ. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಗೌರವ ನಡೆದ ಸದನದಲ್ಲಿ ಭಾಗಿಯಾಗಬಾರದೆಂದು ರಾಜ್ಯಪಾಲರು ಸದನದಿಂದ ಹೊರನಡೆದರು. ಸದನದ ನಾಯಕ ಮತ್ತು ಹಿರಿಯ ಸಚಿವ ದುರೈಮುರುಗನ್ ಅವರು ಹಿಂದಿನ ವರ್ಷಗಳಲ್ಲಿ ಮಾಡಿದ್ದನ್ನು ರಾಜ್ಯಪಾಲರು ಪುನರಾವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ರವಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಳೆದ ವರ್ಷ ರಾಜ್ಯಪಾಲರು ಇದೇ ವಿಷಯದ ಬಗ್ಗೆ ಸ್ಪೀಕರ್‌ಗೆ ಪತ್ರ ಬರೆದಾಗ, ಭಾಷಣಕ್ಕೆ ಮುಂಚಿತವಾಗಿ ರಾಜ್ಯ ಗೀತೆಯನ್ನು ಹಾಡುವುದು ಮತ್ತು ಭಾಷಣದ ಮುಕ್ತಾಯದ ನಂತರ ರಾಷ್ಟ್ರಗೀತೆಯನ್ನು ನುಡಿಸುವುದನ್ನು ಸ್ಪಷ್ಟಪಡಿಸಲಾಗಿತ್ತು ಎಂದು ಹೇಳಿದ್ದಾರೆ.

"ರಾಜ್ಯಪಾಲರು ಮತ್ತೆ ಅದೇ ವಿಷಯವನ್ನು ವಿಷಯವಾಗಿ ಪ್ರಸ್ತಾಪಿಸಿ ಭಾಷಣವನ್ನು ಓದದೆ ಹೊರನಡೆದಿದ್ದಾರೆ. ಅವರ ನಿಜವಾದ ಉದ್ದೇಶ ಪ್ರಶ್ನಾರ್ಹ" ಎಂದು ಅವರು ಹೇಳಿದ್ದಾರೆ.

ಜನರು, ಸದನ ಮತ್ತು ಸರ್ಕಾರ ಯಾವಾಗಲೂ ರಾಷ್ಟ್ರ, ರಾಷ್ಟ್ರಗೀತೆ, ರಾಷ್ಟ್ರೀಯ ನಾಯಕರ ಬಗ್ಗೆ ಹೆಚ್ಚಿನ ಗೌರವ ತೋರಿಸುತ್ತಿದೆ. ದೇಶಭಕ್ತಿ ಮತ್ತು ರಾಷ್ಟ್ರೀಯ ಏಕೀಕರಣವನ್ನು ಗೌರವಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ. 

Tags:    

Similar News