Kolkata rape-murder| ಘಟನೆ ನಂತರ ಹೆಣ್ಣುಮಕ್ಕಳು ನನ್ನನ್ನು ತೊರೆದಿದ್ದಾರೆ: ಆರೋಪಿ ತಾಯಿ

ʻಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ಅವನ ಕೆಲಸದ ಬಗ್ಗೆ ನನಗೆ ಏನೂ ತಿಳಿದಿಲ್ಲ.ಅವನಿಂದ ಅಸಹಜ ನಡವಳಿಕೆ ಗಮನಿಸಲಿಲ್ಲ.ಘಟನೆ ನಡೆದ ದಿನ ರಾತ್ರಿ ಆತ ಊಟ ಮಾಡಲಿಲ್ಲ.ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಹೋದ ಎಂದು ಆರೋಪಿಯ ತಾಯಿ ಹೇಳಿದ್ದಾರೆ.;

Update: 2024-08-24 06:28 GMT

ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಅವರ ತಾಯಿ, ʻನಾನು ತನ್ನ ಮಗನನ್ನು ನೋಡಿಲ್ಲ. ಘಟನೆ ನಂತರ ತನ್ನ ನಾಲ್ಕು ಹೆಣ್ಣುಮಕ್ಕಳು ನನ್ನನ್ನು ಭೇಟಿ ಮಾಡಿಲ್ಲʼ ಎಂದು ಹೇಳಿದ್ದಾರೆ.

ʻಇಂಥ ಸಂಕಷ್ಟದ ಸಮಯದಲ್ಲಿ ನಾಲ್ವರಲ್ಲಿ ಒಬ್ಬಳೂ ಮನೆಗೆ ಬಂದಿಲ್ಲ. ನನಗೆ ಅಂತಹ ಸುಂದರ ಕುಟುಂಬವಿತ್ತು. ಗಂಡನ ಸಾವಿನ ನಂತರ ಎಲ್ಲವೂ ಅಸ್ತವ್ಯಸ್ತವಾಯಿತು. ಸುಂದರ ಸಂಸಾರ ಈಗ ನೆನಪು ಮಾತ್ರ,ʼ ಎಂದು ಹೇಳಿದ್ದಾರೆ. 

ʻಮಗ ಪದವೀಧರನಾಗಿದ್ದು, ಶಾಲೆಯಲ್ಲಿ ಎನ್‌ಸಿಸಿ ಕೆಡೆಟ್ ಆಗಿದ್ದ. ತನ್ನನ್ನು ನೋಡಿಕೊಳ್ಳುತ್ತಿದ್ದ ಮತ್ತು ಅಡುಗೆ ಮಾಡಿ ಕೊಡುತ್ತಿದ್ದ. ಮಗನನ್ನು ಭೇಟಿಯಾಗಲು ನನ್ನನ್ನು ಯಾರೂ ಕರೆದುಕೊಂಡು ಹೋಗಿಲ್ಲ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದು ಹೇಗೆ ಎಂದು ಗೊತ್ತಿಲ್ಲ,ʼ ಎಂದು ಹೇಳಿದರು.

ನಾಲ್ಕು ಮದುವೆ: ತಡರಾತ್ರಿ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ಎನ್ನುವುದೂ ಸೇರಿದಂತೆ ದುಷ್ಕೃತ್ಯದ ಕಾರಣದಿಂದ ಮೂವರು ಹೆಂಡತಿಯರು ಅವನನ್ನು ತೊರೆದಿದ್ದಾರೆ ಎಂಬ ನೆರೆಹೊರೆಯವರ ಆರೋಪವನ್ನು ನಿರಾಕರಿಸಿ, ಮಗ ಯಾರೊಂದಿಗೂ ಅನುಚಿತವಾಗಿ ವರ್ತಿಸಿರಲಿಲ್ಲ ಎಂದು ಹೇಳಿದರು. 

ʻಅವನ ಮೊದಲ ಹೆಂಡತಿ ಒಳ್ಳೆಯ ಹುಡುಗಿ ಮತ್ತು ಇಬ್ಬರೂ ಸಂತೋಷವಾಗಿದ್ದರು. ಆದರೆ, ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆನಂತರ ಮಗ ಖಿನ್ನತೆಗೆ ಒಳಗಾಗಿ, ಮದ್ಯಪಾನ ಪ್ರಾರಂಭಿಸಿದ. ಕುಡಿತವನ್ನು ತಡೆಯಲು ಪ್ರಯತ್ನಿಸಿದೆ. ಬದಲಿಗೆ ಚಹಾ ಕುಡಿಯಲು ಹೇಳಿದೆ. ಇನ್ನೊಂದು ಮದುವೆ ಮಾಡುವುದಾಗಿ ಹೇಳಿದ್ದೆ,' ಎಂದರು. 

ಘಟನೆ ನಡೆದ ರಾತ್ರಿ: ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ಅವನ ಕೆಲಸದ ಬಗ್ಗೆ ನನಗೆ ಏನೂ ತಿಳಿದಿಲ್ಲ.ಅವನಿಂದ ಯಾವುದೇ ಅಸಹಜ ನಡವಳಿಕೆ ಗಮನಿಸಲಿಲ್ಲ. ಘಟನೆ ನಡೆದ ದಿನ ರಾತ್ರಿ ಆತ ಊಟ ಮಾಡಲಿಲ್ಲ ಎಂದು ಹೇಳಿ ಆಸ್ಪತ್ರೆಗೆ ಹೋದ. ಮಗ ನಿರುಪದ್ರವಿ. ಅವನನ್ನು ಯಾರೋ ಸಿಕ್ಕಿಸಿದ್ದಾರೆ. ಅವನನ್ನು ಸಿಲುಕಿಸಿದವರಿರೆ ಶಿಕ್ಷೆಯಾಗುತ್ತದೆ. ಮಗ ಅಪರಾಧ ಎಸಗಿದ್ದರೆ, ದೇವರು ಶಿಕ್ಷೆ ನೀಡುತ್ತಾನೆ' ಎಂದು ಸಂಜಯ್‌ ತಾಯಿ ಹೇಳಿದರು.

Tags:    

Similar News