Kolkata rape murder| ನೂತನ ಪೊಲೀಸ್ ಆಯುಕ್ತ ಮನೋಜ್ ಕುಮಾರ್

Update: 2024-09-17 12:20 GMT

ಕಿರಿಯ ವೈದ್ಯರ ಒತ್ತಡದಿಂದ ವರ್ಗಾವಣೆಯಾದ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರ ಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದ ಮನೋಜ್ ವರ್ಮಾ ಅವರನ್ನು ನೇಮಿಸಲಾಗಿದೆ.

ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಕೌಸ್ತವ್ ನಾಯಕ್ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ ಡಾ.ದೇಬಾಶಿಶ್ ಹಲ್ದರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಸರ್ಕಾರ ಹೇಳಿದೆ.

ಗೋಯಲ್‌ ಅವರ ಸ್ಥಾನಕ್ಕೆ ನೇಮಕಗೊಂಡಿರುವ ಮನೋಜ್ ವರ್ಮಾ 1998ರ ಬ್ಯಾಚ್‌ನ ಅಧಿಕಾರಿಯಾಗಿದ್ದು, ಜನವರಿ 2024ರಿಂದ ಎಡಿಜಿಪಿ ಆಗಿದ್ದರು. ವರ್ಮಾ ಅವರು ಪೊಲೀಸ್ ಕಮಿಷನರ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ಜಾವೇದ್ ಶಮೀಮ್ ಅವರನ್ನು ಹಿಂದೆ ಹಾಕಿದ್ದಾರೆ. ಶಮೀಮ್ ಈಗ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಲಿದ್ದಾರೆ. 1994 ಬ್ಯಾಚ್ ಅಧಿಕಾರಿಯಾದ ಗೋಯಲ್‌, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ (ವಿಶೇಷ ಕಾರ್ಯಪಡೆ)ರಾಗಿ ನೇಮಕಗೊಂಡಿದ್ದಾರೆ.

ಉತ್ತರ ವಿಭಾಗದ ಉಪ ಆಯುಕ್ತ ಅಭಿಷೇಕ್ ಗುಪ್ತಾ ಅವರನ್ನು ಬದಲಿಸಿ, ದೀಪಕ್ ಸರ್ಕಾರ್ ಅವರನ್ನು ನೇಮಿಸಲಾಗಿದೆ. ಹತ್ಯೆಗೀಡಾದ ವೈದ್ಯೆಯ ಪೋಷಕರು, ಗುಪ್ತಾ ತಮಗೆ ಹಣದ ಆಮಿಷವೊಡ್ಡಿದ್ದರು ಎಂದು ಆರೋಪಿಸಿದ್ದರು.

ಆರೋಗ್ಯ ಇಲಾಖೆ ವರ್ಗಾವಣೆ: ಆರೋಗ್ಯ ಸೇವೆಗಳ ಪ್ರಭಾರ ನಿರ್ದೇಶಕರಾಗಿ ಡಾ.ಸ್ವಪನ್ ಸೊರೆನ್ ಮತ್ತು ವೈದ್ಯಕೀಯ ಶಿಕ್ಷಣದ ವಿಶೇಷ ಕರ್ತರ್ವಾಧಿಕಾರಿಯಾಗಿ ಡಾ.ಸುಪರ್ಣಾ ದತ್ತಾ ಅವರನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಆದೇಶ ತಿಳಿಸಿದೆ. 

ನಾಯಕ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಹಲ್ದರ್ ಅವರನ್ನು ಸ್ವಾಸ್ಥ್ಯ ಭವನದಲ್ಲಿ ವಿಶೇಷ ಕರ್ತವ್ಯ (ಸಾರ್ವಜನಿಕ ಆರೋಗ್ಯ) ಅಧಿಕಾರಿಯಾಗಿ ನಿಯೋಜಿಸಲಾಗಿದೆ.

Tags:    

Similar News