ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: ಶಿವಸೇನೆ (ಯುಬಿಟಿ) ಎರಡು, ಬಿಜೆಪಿಗೆ ಒಂದು ಸ್ಥಾನ

Update: 2024-07-02 07:50 GMT

ಮುಂಬೈ, ಜುಲೈ 2: ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಮುಂಬೈ ಪದವೀಧರ ಮತ್ತು ಮುಂಬೈ ಶಿಕ್ಷಕರ ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ ಕೊಂಕಣ ಪದವೀಧರರ ಕ್ಷೇತ್ರದಲ್ಲಿ ಜಯ ಗಳಿಸಿದೆ.

ಜೂನ್ 26 ರಂದು ಮತದಾನ ನಡೆದಿದ್ದು, 1,43,297 ಮತದಾರರು ಹಕ್ಕು ಚಲಾಯಿಸಿದ್ದರು. ಅದರಲ್ಲಿ 1,32,071 ಮತಗಳು ಸಿಂಧುವಾಗಿದ್ದವು.

ಶಿವಸೇನಾ (ಯುಬಿಟಿ) ನಾಯಕ ಅನಿಲ್ ಪರಬ್ ಅವರು ಮುಂಬೈ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಕಿರಣ್ ಶೆಲಾರ್ ಅವರನ್ನು ಸೋಲಿಸಿದ್ದಾರೆ. ಪರಬ್ 44,784 ಹಾಗೂ ಶೇಲಾರ್ 18,772 ಮತ ಪಡೆದರು. ಗೆಲುವಿಗೆ 32,112 ಮತ ಬೇಕಿತ್ತು. ಮುಂಬೈ ಶಿಕ್ಷಕರ ಕ್ಷೇತ್ರದಿಂದ ಶಿವಸೇನಾ (ಯುಬಿಟಿ) ಅಭ್ಯರ್ಥಿ ಜೆ.ಎಂ. ಅಭಯಂಕರ್ ಗೆಲುವು ಸಾಧಿಸಿದ್ದಾರೆ. ಅವರು ಚಲಾವಣೆಯಾದ 11,598 ಮತಗಳಲ್ಲಿ 4,083 ಮತ ಪಡೆದರು.

ಕೊಂಕಣ ಪದವೀಧರರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ನಿರಂಜನ್ ದಾವಖರೆ ಅವರು ಕಾಂಗ್ರೆಸ್‌ನ ರಮೇಶ್ ಕೀರ್ ಅವರನ್ನು ಸೋಲಿಸಿದರು. ದಾವಖರೆ 1,00,719 ಹಾಗೂ ಕೀರ್ 28,585 ಮತ ಪಡೆದರು. 

Tags:    

Similar News