Indian Railway | ರೈಲಿನಲ್ಲಿ, ಹಳಿಯಲ್ಲಿ ರೀಲ್ಸ್‌ ಮಾಡಿದರೆ ಕಾನೂನು ಕ್ರಮಕ್ಕೆ ನಿರ್ಧಾರ

Indian Railway : ರೈಲ್ವೆ ಹಳಿಗಳಲ್ಲಿ ಮತ್ತು ಚಲಿಸುವ ರೈಲುಗಳಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಸ್ಟಂಟ್ ವೀಡಿಯೊಗಳನ್ನು ಚಿತ್ರೀಕರಿಸುವ ಮೂಲಕ ಜನರು, ಮುಖ್ಯವಾಗಿ ಯುವಕರು ರೈಲ್ವೆ ಸುರಕ್ಷತೆಗೆ ಅಪಾಯ ತಂದಿದ್ದಾರೆ.;

Update: 2024-11-16 11:33 GMT
ಸಾಂಧರ್ಭಿಕ ಚಿತ್ರ.

ರೈಲುಗಳ ಸುರಕ್ಷಿತ ಕಾರ್ಯಾಚರಣೆಗೆ ಅಡಚಣೆ ತರುವ ರೀತಿಯಲ್ಲಿ ರೀಲ್ಸ್‌ ಮಾಡುವವರ ವಿರುದ್ಧ ಕೇಸ್‌ ದಾಖಲಿಸಲು ರೈಲ್ವೆ ಮಂಡಳಿ ತನ್ನೆಲ್ಲ ವಲಯಗಳಿ ಸೂಚನೆ ನೀಡಿದೆ. ರೈಲು ಹಳಿಗಳ ಮೇಳೆ, ಬೋಗಿಗಳಲ್ಲಿ ಅಥವಾ ರೈಲ್ವೆ ಆವರಣದಲ್ಲಿ ಪ್ರಯಾಣಿಕರಿಗೆ ಅನನುಕೂಲ ಆಗುವಂತೆ ರೀಲ್ಸ್‌ ಮಾಡುವ ಪ್ರಕರಣಗಳು ಹೆಚ್ಚಾಗಿರುವ ಕಾರಣ ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ .



ರೈಲ್ವೆ ಹಳಿಗಳಲ್ಲಿ ಮತ್ತು ಚಲಿಸುವ ರೈಲುಗಳಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಸ್ಟಂಟ್ ವೀಡಿಯೊಗಳನ್ನು ಚಿತ್ರೀಕರಿಸುವ ಮೂಲಕ ಜನರು, ಮುಖ್ಯವಾಗಿ ಯುವಕರು ರೈಲ್ವೆ ಸುರಕ್ಷತೆಗೆ ಅಪಾಯ ತಂದಿರುವ ಇತ್ತೀಚಿನ ಪ್ರಕರಣಗಳನ್ನು ಅನುಸರಿಸಿ ರೈಲ್ವೆ ಮಂಡಳಿಯ ಸೂಚನೆ ಬಂದಿದೆ.

"ರೀಲ್ಸ್‌ಗಳನ್ನು ಮಾಡಲು ಜನರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಅವರು ತಮ್ಮ ಪ್ರಾಣವನ್ನು ಪಣಕ್ಕಿಡುವುದಲ್ಲದೆ ರೈಲ್ವೆ ಹಳಿಗಳ ಮೇಲೆ ವಸ್ತುಗಳನ್ನು ಇರಿಸುವ ಮೂಲಕ ಅಥವಾ ವಾಹನಗಳನ್ನು ಓಡಿಸುವ ಮೂಲಕ ಅಥವಾ ಚಲಿಸುವ ರೈಲುಗಳಲ್ಲಿ ಮಾರಣಾಂತಿಕ ಸ್ಟಂಟ್‌ಗಳನ್ನು ಮಾಡುವ ಮೂಲಕ ನೂರಾರು ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತಾರೆ" ಎಂದು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ವೈರಲ್ ವೀಡಿಯೊಗಳು ಸೆಲ್ಫಿ ತೆಗೆದುಕೊಳ್ಳುವಾಗ ಜನರು ರೈಲುಗಳು ಹತ್ತಿರ ಬಂದಿರುವುದೂ ಗೊತ್ತಾಗಲೇ ಗುದ್ದಿ ಸಾಯುತ್ತಾರೆ. ಅವರಿಗೆ ಕನಿಷ್ಠ ಸಮಯದಲ್ಲಿ ರೈಲು ಬಂದು ಗುದ್ದಬಹುದು ಎಂಬುದು ಅವರಿಗೆ ತಿಳಿದಿರುವುದಿಲ್ಲ. ರೈಲು ಡಿಕ್ಕಿ ಹೊಡೆದ ಪರಿಣಾಮ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ" ಎಂದು ಅವರು ಹೇಳಿದ್ದಾರೆ.

ರೈಲ್ವೆ ಮಂಡಳಿಯ ಅಧಿಕಾರಿಗಳ ಪ್ರಕಾರ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳಿಗೆ ನಿಯಮಗಳನ್ನು ಉಲ್ಲಂಘಿಸಿ ರೀಲ್ ಮಾಡುವವರ ವಿರುದ್ಧ ಯಾವುದೇ ಮುಲಾಜು ನೋಡಬಾರದು ಎಂದು ಆದೇಶಿಸಲಾಗಿದೆ.

ಜೈಪುರ ವಿಭಾಗದ ಕನಕಪುರ ಮತ್ತು ಧನಕ್ಯ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳಲ್ಲಿ ಮಹೀಂದ್ರಾ ಥಾರ್ ಎಸ್ ಯುವಿಯನ್ನು ಅನಧಿಕೃತವಾಗಿ ಓಡಿಸುವ ಮೂಲಕ ಸ್ಟಂಟ್ ಮಾಡಲು ಪ್ರಯತ್ನಿಸಿದ ವ್ಯಕ್ತಿಯ ವಿರುದ್ಧ ಆರ್ ಪಿಎಫ್ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಥಾರ್‌ ಓಡಿಸಿದ ಪ್ರಕರಣದಲ್ಲಿ ರೈಲ್ವೆ ಅಧಿಕಾರಿಗಳ ಪ್ರಕಾರ, ಅದೇ ಟ್ರ್ಯಾಕ್‌ನಲ್ಲಿ ಬರುತ್ತಿದ್ದ ಗೂಡ್ಸ್ ರೈಲಿನ ಲೋಕೋ ಪೈಲಟ್ ಅಪಾಯವನ್ನು ಗಮನಿಸಿದ್ದರು. ಹಳಿಗಳ ಮೇಲೆ ನಿಲ್ಲಿಸಿರುವ ಕಾರನ್ನು ನೋಡಿದ ನಂತರ ಸುರಕ್ಷಿತ ದೂರದಲ್ಲಿ ರೈಲನ್ನು ನಿಲ್ಲಿಸಿದ್ದರು. . ಸೋಷಿಯಲ್ ಮೀಡಿಯಾ ಪೋಸ್ಟ್‌ಗಾಗಿ ತನ್ನ ಸ್ನೇಹಿತರ ಜತೆ ಸೇರಿಕೊಂಡು ಆತ ಸ್ಟಂಟ್ ಮಾಡಲು ಯತ್ನಿಸಿದ್ದ .

ಇತ್ತೀಚಿನ ಘಟನೆಯಲ್ಲಿ, ಚೆನ್ನೈನ ವ್ಯಾಸರ್ಪಾಡಿ ಜೀವಾ ರೈಲ್ವೆ ನಿಲ್ದಾಣದಲ್ಲಿ ಫುಡ್‌ಬೋರ್ಟ್‌ನಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದ್ದ. ನಗರದ ಕಾಲೇಜಿನ 10 ವಿದ್ಯಾರ್ಥಿಗಳ ವಿರುದ್ಧ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ವ್ಯಾಸರ್ಪಾಡಿ ಜೀವಾ ರೈಲ್ವೆ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ವೈರಲ್ ಆಗಿತ್ತು. ಗುಂಪಿನಲ್ಲಿ ಒಬ್ಬ ರೈಲಿನ ಚಾವಣಿ ಮೇಲೇರಲು ಪ್ರಯತ್ನಿಸುತ್ತಿದ್ದ. ನಂತರ, ಪೊಲೀಸರು ಪ್ರಕರಣ ದಾಖಲಿಸಿದ ನಂತರ ತನಿಖೆ ಪ್ರಾರಂಭಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

"ವೈರಲ್ ವೀಡಿಯೊಗಳ ಮೂಲಕ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ರೈಲ್ವೆ ಮಂಡಳಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Tags:    

Similar News