Kolkata rape-murder: ಪಾಲಿಗ್ರಾಫ್ ಪರೀಕ್ಷೆಯಲ್ಲಿ ಆರೋಪಿ ಸಂಜಯ್ ರಾಯ್ ಹೇಳಿದ್ದೇನು?

ಆರೋಪಿಯು ತಾನು ನಿರಪರಾಧಿ ಎಂದು ಸಮರ್ಥಿಸಿಕೊಳ್ಳಲು ಸುಳ್ಳು ಮತ್ತು ನಂಬಲಸಾಧ್ಯವಾದ ಉತ್ತರ ಗಳನ್ನು ನೀಡಿದ್ದಾನೆ. ತಾನು ಹೋಗುವಷ್ಟರಲ್ಲಿ ಸಂತ್ರಸ್ತೆ ಮೃತಪಟ್ಟಿದ್ದಳು ಎಂದಿದ್ದಾನೆ ಎಂದು ಸಿಬಿಐ ಮೂಲಗಳು ಹೇಳಿವೆ.

Update: 2024-08-26 06:37 GMT

ಕೋಲ್ಕತ್ತಾದ ಆ‌ರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್, ತಾನು ಸೆಮಿನಾರ್ ಹಾಲ್‌ಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದರು ಎಂದು ಭಾನುವಾರ ತನ್ನ ಪಾಲಿಗ್ರಾಫ್ ಪರೀಕ್ಷೆ ಸಂದರ್ಭದಲ್ಲಿ ಹೇಳಿದ್ದಾನೆ ಎಂದು ತಿಳಿಸುಬಂದಿದೆ.

ಸುಳ್ಳು ಮತ್ತು ನಂಬಲಸಾಧ್ಯ ಉತ್ತರಗಳು: ರಾಯ್ ಮೇಲಿನ ಪಾಲಿಗ್ರಾಫ್ ಪರೀಕ್ಷೆಯು ತಾನು ನಿರಪರಾಧಿ ಎಂಬ ಆತನ ಇತ್ತೀಚಿನ ಹೇಳಿಕೆಗೆ ತದ್ವಿರುದ್ಧವಾಗಿ ಹಲವು ಪ್ರಶ್ನೆಗಳಿಗೆ ʻಸುಳ್ಳು ಮತ್ತು ನಂಬಲಸಾಧ್ಯʼ ಉತ್ತರಗಳು ಸಿಕ್ಕಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 

ದೆಹಲಿಯ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಸಿಎಫ್‌ಎಸ್‌ಎಲ್)ಯ ಪಾಲಿಗ್ರಾಫ್ ತಜ್ಞರ ತಂಡವು ಈ ಪರೀಕ್ಷೆ ನಡೆಸಿತು. 

ಆತಂಕ, ವಿಚಲಿತ: ಎರಡು ಗಂಟೆ ನಡೆದ ವಿಚಾರಣೆ ವೇಳೆ ರಾಯ್ ʻವಿಚಲಿತರಾಗಿದ್ದರು ಮತ್ತು ಆತಂಕಗೊಂಡಿದ್ದರು,ʼ ಎಂದು ಸಿಬಿಐ ಮೂಲಗಳು ಹೇಳಿವೆ. 

ತಾನು ನಿರಪರಾಧಿ ಎಂದು ಹೇಳಿಕೊಂಡಿರುವ ಆತ, ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಸಮಯದಲ್ಲಿ ಅವನು ಅಪರಾಧ ನಡೆದ ಸ್ಥಳದಲ್ಲಿದ್ದನೆಂಬ ಹಲವು ʻಸಾಕ್ಷ್ಯʼಗಳನ್ನು ತನಿಖಾಧಿಕಾರಿಗಳು ತೋರಿಸಿದ್ದರೂ, ಬೇರೆ ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದಾನೆ. ಸೆಮಿನಾರ್ ಹಾಲ್‌ನಲ್ಲಿ ವೈದ್ಯೆ ಶವ ಕಂಡು ಭಯಗೊಂಡು ಓಡಿಹೋದೆ ಎಂದು ಹೇಳಿದ್ದಾನೆ. 

ಎನ್‌ಎಚ್‌ಆರ್‌ಸಿ ನಿಯಮ ಉಲ್ಲಂಘನೆ: ವಕೀಲ- ಆರೋಪಿ ಪರ ವಕೀಲರ ಅನುಪಸ್ಥಿತಿಯಲ್ಲಿ ಪಾಲಿಗ್ರಾಫ್ ಪರೀಕ್ಷೆ ನಡೆಸುವ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ಮಾರ್ಗಸೂಚಿಗಳನ್ನು ಸಿಬಿಐ ಉಲ್ಲಂಘಿಸಿದೆ ಎಂದು ರಾಯ್ ಅವರ ವಕೀಲ ಕಬಿತಾ ಸರ್ಕಾರ್ ಭಾನುವಾರ ಆರೋಪಿಸಿದ್ದಾರೆ. ʻಪಾಲಿಗ್ರಾಫ್‌ ಪರೀಕ್ಷೆ ಯಾವಾಗ ನಡೆಸಲಾಗುವುದು ಎಂದು ಸಿಬಿಐ ನಮಗೆ ತಿಳಿಸಿಲ್ಲ.ಉಪಸ್ಥಿತರಿರುವಂತೆ ನಮಗೆ ತಿಳಿಸಬೇಕಿತ್ತು,ʼ ಎಂದು ಹೇಳಿದ್ದಾರೆ. 

7 ಜನರ ಪಾಲಿಗ್ರಾಫ್ ಪರೀಕ್ಷೆ: ರಾಯ್ ಮತ್ತು ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಸೇರಿದಂತೆ ಏಳು ಮಂದಿಯನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಸಿಬಿಐ, ನ್ಯಾಯಾಲಯದಿಂದ ಅನುಮತಿ ಕೋರಿದೆ. ಇದನ್ನು ವಿಚಾರಣೆ ವೇಳೆ ಸಾಕ್ಷಿಯಾಗಿ ಬಳಸಲು ಆಗುವುದಿಲ್ಲ. ಆದರೆ, ಫಲಿತಾಂಶವು ತನಿಖೆಗೆ ನೆರವಾಗಲಿದೆ. 

ಆರೋಪ ನಿರಾಕರಣೆ: ರಾಯ್ (33), 2019 ರಿಂದ ಕೋಲ್ಕತ್ತಾ ಪೊಲೀಸರೊಂದಿಗೆ ನಾಗರಿಕ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು. ತರಬೇತಿ ಪಡೆದ ಬಾಕ್ಸರ್ ಆಗಿರುವ ಆರೋಪಿ, ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ನಿಕಟವರ್ತಿಯಾಗಿದ್ದರು ಎಂದು ಆರೋಪಿಸಲಾಗಿದೆ, ಆನಂತರ ಅವರನ್ನು ಕೋಲ್ಕತ್ತಾ ಪೊಲೀಸ್ ಕಲ್ಯಾಣ ಮಂಡಳಿಗೆ ಸ್ಥಳಾಂತರಿಸಲಾಯಿತು; ಬಳಿಕ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಹೊರ ಠಾಣೆಗೆ ನಿಯೋಜಿಸಲಾಯಿತು. ತಮ್ಮ ಮೇಲಿನ ಆರೋಪಗಳನ್ನು ರಾಯ್‌ ನಿರಾಕರಿಸಿದ್ದಾರೆ.

ಅಪರಾಧದ ದೃಶ್ಯ ಬದಲು: ತಾನು ತನಿಖೆ ಕೈಗೆತ್ತಿಕೊಳ್ಳುವಷ್ಟರಲ್ಲಿ ಅಪರಾಧ ನಡೆದ ಸ್ಥಳವನ್ನು ಬದಲಿಸಲಾಗಿತ್ತು ಎಂದು ಸಿಬಿಐ, ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು. ಇದು ಹತ್ಯೆಯನ್ನು ಮುಚ್ಚಿಹಾಕಲು ಸ್ಥಳೀಯ ಪೊಲೀಸರು ಪ್ರಯತ್ನ ನಡೆಸಿದ್ದರು ಎಂಬುದನ್ನು ಸೂಚಿಸುತ್ತದೆ. 

Tags:    

Similar News