Kolkata rape-murder: ಪ್ರಮುಖ ಆರೋಪಿ, ಇತರ 6 ಮಂದಿ ಪಾಲಿಗ್ರಾಫ್ ಪರೀಕ್ಷೆ

Update: 2024-08-24 13:23 GMT
ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ರವೀಂದ್ರ ಸರೋವರ(ಧಾಕುರಿಯಾ ಸರೋವರ)ದಲ್ಲಿ ನಾಗರಿಕರು ಶನಿವಾರ ಪ್ರತಿಭಟನೆ ನಡೆಸಿದರು.

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಇತರ ಆರು ಮಂದಿಗೆ ಪಾಲಿಗ್ರಾಫ್(ಸುಳ್ಳು ಪತ್ತೆ)‌ ಪರೀಕ್ಷೆಯನ್ನು ಶನಿವಾರ (ಆಗಸ್ಟ್ 24) ಸಂಜೆ ನಡೆಸಲಾಯಿತು. 

ಪ್ರಮುಖ ಆರೋಪಿ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ಜೈಲಿನಲ್ಲಿ ಹಾಗೂ ಉಳಿದವರು ಕೋಲ್ಕತ್ತಾದಲ್ಲಿರುವ ಸಿಬಿಐ ಕಚೇರಿಯಲ್ಲಿ ಪರೀಕ್ಷೆಗೆ ಒಳಗಾದರು. 

ಆರು ಇತರರು: ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್, ಘಟನೆ ನಡೆದ ದಿನ ರಾತ್ರಿ ಕರ್ತವ್ಯದಲ್ಲಿದ್ದ ನಾಲ್ವರು ವೈದ್ಯರು ಮತ್ತು ನಾಗರಿಕ ಸ್ವಯಂಸೇವಕರ ಪರೀಕ್ಷೆ ನಡೆಸಲಾಗಿದೆ. ಇಬ್ಬರು ವೈದ್ಯರು ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ತರಬೇತಿ ಪಡೆಯುತ್ತಿದ್ದು, ಅವರ ಬೆರಳಚ್ಚುಗಳು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿದ್ದವು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಘೋಷ್ ಸತತ ಒಂಬತ್ತನೇ ದಿನ ಶನಿವಾರ ಬೆಳಗ್ಗೆ ಸಾಲ್ಟ್ ಲೇಕ್‌ನ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ್ದು, ಅವರನ್ನು ಪರೀಕ್ಷೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ದೆಹಲಿಯಿಂದ ಆಗಮಿಸಿದ್ದ  ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ(ಸಿಎಫ್‌ಎಸ್‌ಎಲ್‌)ದ ಪಾಲಿಗ್ರಾಫ್ ತಜ್ಞರ ತಂಡವು ಈ ಪರೀಕ್ಷೆ ನಡೆಸಿದೆ.

Tags:    

Similar News