ಕೋಲ್ಕತ್ತಾ: ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯೆಗೆ ನ್ಯಾಯ ಕೋರಿ ಕಿರಿಯ ವೈದ್ಯರು ನಡೆಸುತ್ತಿರುವ ಧರಣಿ ಸೋಮವಾರವೂ ಮುಂದುವರಿದಿದೆ.
ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ ಸ್ವಾಸ್ಥ್ಯ ಭವನದ ಹೊರಗೆ ವೈದ್ಯರು ಎಂಟು ದಿನದಿಂದ ಧರಣಿ ನಡೆಸುತ್ತಿದ್ದು, 36 ದಿನದಿಂದ ಕೆಲಸ ಸ್ಥಗಿತಗೊಳಿಸಿದ್ದಾರೆ.
ಕೋಲ್ಕತ್ತಾ ಪೊಲೀಸ್ ಕಮಿಷನರ್ ಮತ್ತು ಹಿರಿಯ ಆರೋಗ್ಯ ಅಧಿಕಾರಿಗಳನ್ನು ವಜಾಗೊಳಿಸುವವರೆಗೆ ಧರಣಿ ಮುಂ ದುವರಿಯಲಿದೆ. ರಾಜ್ಯ ಸರ್ಕಾರವು ಬಿಕ್ಕಟ್ಟನ್ನು ಪರಿಹರಿಸುವ ಬಗ್ಗೆ ಗಂಭೀರವಾಗಿಲ್ಲ ಎಂದು ಕಿರಿಯ ವೈದ್ಯರೊಬ್ಬರು ಹೇಳಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಉದ್ದೇಶಿತ ಸಭೆ ವಿಫಲವಾಯಿತು. ಸಿಎಂ ನಿವಾಸದ ಗೇಟ್ ಬಳಿ ಮೂರು ಗಂಟೆ ಕಾಲ ಕಾದು ಕುಳಿತಿದ್ದರು. ಸಿಎಂ ವಿನಂತಿಸಿದಂತೆ ನೇರ ಪ್ರಸಾರ ಅಥವಾ ವಿಡಿಯೋ ರೆಕಾರ್ಡಿಂಗ್ ಇಲ್ಲದೆ ಸಭೆಗೆ ಹಾಜರಾಗಲು ಒಪ್ಪಿಕೊಂಡಿ ದ್ದೇವೆ. ಆದ ರೆ, ನಿರ್ಧಾರವನ್ನು ಆರೋಗ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರಿಗೆ ತಿಳಿಸಲು ತಡವಾಗಿದ್ದರಿಂದ, ನಮಗೆ ತೆರಳಲು ಸೂಚಿಸಲಾಯಿತು ಎಂದು ಪ್ರತಿಭಟನಾನಿರತ ವೈದ್ಯರೊಬ್ಬರು ಹೇಳಿದರು.
ಸಭೆಯ ನೇರ ಪ್ರಸಾರ ಮತ್ತು ಪ್ರತಿನಿಧಿಗಳ ಸಂಖ್ಯೆ ಕುರಿತ ಭಿನ್ನಾಭಿಪ್ರಾಯಗಳಿಂದ ಕಿರಿಯ ವೈದ್ಯರು ಮತ್ತು ಸಿಎಂ ನಡುವಿನ ಮಾತುಕತೆಯ ಹಿಂದಿನ ಕೆಲವು ಪ್ರಯತ್ನಗಳು ವಿಫಲವಾಗಿವೆ.