Kolkata rape-murder: ಪ್ರಾಂಶುಪಾಲನ ಸದಸ್ಯತ್ವ ಅಮಾನತುಗೊಳಿಸಿದ ಐಎಂಎ

Update: 2024-08-29 06:51 GMT

ಹೊಸದಿಲ್ಲಿ: ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬುಧವಾರ ಅಮಾನತುಗೊಳಿಸಿದೆ. 

ಸಂಘದ ಕೋಲ್ಕತ್ತಾ ಶಾಖೆಯ ಉಪಾಧ್ಯಕ್ಷರಾಗಿರುವ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಐಎಂಎ ಶಿಸ್ತು ಸಮಿತಿ ತೆಗೆದುಕೊಂಡಿದೆ. 

ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ಅವರು ರಚಿಸಿದ್ದ ಸಮಿತಿಯು ಪ್ರಕರಣವನ್ನು ಪರಿಗಣಿಸಿದೆ. ಐಎಂಎ ಪ್ರಧಾನ ಕಾರ್ಯದರ್ಶಿ ಮತ್ತು ಅಶೋಕನ್, ಸಂತ್ರಸ್ತೆಯ ಪೋಷಕರನ್ನು ಅವರ ಮನೆಯಲ್ಲಿ ಭೇಟಿಯಾಗಿ ದ್ದರು. ʼಘೋಷ್‌ ಅವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ವಿಷಯವನ್ನು ಸಹಾನುಭೂತಿ ಮತ್ತು ಸೂಕ್ಷ್ಮವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಐಎಂಎ ಬಂಗಾಳ ರಾಜ್ಯ ಶಾಖೆ ಮತ್ತು ವೈದ್ಯರ ಕೆಲವು ಸಂಘಗಳು ನೀವು ವೃತ್ತಿಗೆ ತಂದಿರುವ ಅಪಖ್ಯಾತಿಯ ಸ್ವರೂಪವನ್ನು ಉಲ್ಲೇಖಿಸಿ, ಕ್ರಮಕ್ಕೆ ಒತ್ತಾಯಿಸಿವೆ,ʼ ಎಂದು ಅದು ಹೇಳಿದೆ. 

ʻಭಾರತೀಯ ವೈದ್ಯಕೀಯ ಸಂಘದ ಸದಸ್ಯತ್ವದಿಂದ ತಕ್ಷಣ ಅಮಾನತುಗೊಳಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ,ʼ ಎಂದು ಆದೇಶದಲ್ಲಿ ತಿಳಿಸಿದೆ. 

Tags:    

Similar News