Kolkata rape-murder: ಎರಡನೇ ದಿನವೂ ಮುಂದುವರಿದ ಮಾಜಿ ಪ್ರಾಂಶುಪಾಲರ ವಿಚಾರಣೆ
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಸತತ ಎರಡನೇ ದಿನವೂ ಸಿಬಿಐ ಹಲವು ಗಂಟೆಗಳ ಕಾಲ ಪ್ರಶ್ನಿಸಿದೆ.;
ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ವಿದ್ಯಾರ್ಥಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಬಿಐ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಸತತ ಎರಡನೇ ದಿನವೂ ಸಿಬಿಐ ಹಲವು ಗಂಟೆಗಳ ಕಾಲ ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರದಿಂದ ನಡೆದ ತನಿಖೆಯೂ ಶನಿವಾರದ ಆರಂಭದವರೆಗೂ ಮುಂದುವರೆಯಿತು. ಮತ್ತೊಂದು ಸುತ್ತಿನ ವಿಚಾರಣೆಗಾಗಿ ಘೋಷ್ ಅವರನ್ನು ಮತ್ತೆ ಸಿಬಿಐ ಕಚೇರಿಗೆ ಕರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ನಾತಕೋತ್ತರ ತರಬೇತಿಯ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ್ದ ರಾತ್ರಿ ಅವರು ಎಲ್ಲಿದ್ದರು, ಘಟನೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಹಾಗೂ ಈ ಪ್ರಕರಣದ ಬಗ್ಗೆ ಪ್ರಾಥಮಿಕ ಪ್ರತಿಕ್ರಿಯೆಯ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯ ವಿದ್ಯಾರ್ಥಿನಿಯ ಸಾವಿನ ಸುದ್ದಿಯನ್ನು ಪಡೆದ ಬಳಿಕ ಅವರ ಮೊದಲ ಪ್ರತಿಕ್ರಿಯೆಯ ಬಗ್ಗೆ ಮಾಜಿ ಪ್ರಾಂಶುಪಾಲರನ್ನು ಸಿಬಿಐ ಪ್ರಶ್ನಿಸಿದ್ದು, ಈ ವಿಷಯವನ್ನು ಅವರು ಕುಟುಂಬಕ್ಕೆ ಹೇಗೆ ತಿಳಿಸಿದರು ಮತ್ತು ಯಾರು ಪೊಲೀಸರನ್ನು ಸಂಪರ್ಕಿಸಿದರು ಎಂದು ಮೊದಲ ಸುತ್ತಿನಲ್ಲಿ ಸಿಬಿಐ ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘೋಷ್ ಅವರು ನೀಡಿದ ಕೆಲವು ಉತ್ತರಗಳು ಗೊಂದಲಮಯವಾಗಿವೆ. ಶನಿವಾರದ ಆರಂಭದವರೆಗೆ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಮತ್ತು ಅವರನ್ನು ತನಿಖೆಗೆ ಮತ್ತೆ ಹಾಜಾರಾಗುವಂತೆ ತಿಳಿಸಿ ಮನೆಗೆ ತೆರಳಲು ಅನುಮತಿಸಲಾಗಿದೆ" ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕೋಲ್ಕತ್ತಾ ಅತ್ಯಾಚಾರ-ಕೊಲೆ, ಸಿಬಿಐ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಡಾ ಸಂದೀಪ್ ಘೋಷ್
ಆಗಸ್ಟ್ 9 ರಂದು ಟ್ರೈನಿ ವೈದ್ಯಕೀಯ ವಿದ್ಯಾರ್ಥಿಯ ಶವ ಪತ್ತೆಯಾದ ಎರಡು ದಿನಗಳ ಬಳಿಕ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿದ್ದ ಡಾ.ಸಂದೀಪ್ ಘೋಷ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ತನಿಖಾ ಸಂಸ್ಥೆಯು ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 40 ಜನರ ಪಟ್ಟಿಯನ್ನು ಸಿದ್ಧಪಡಿಸಿದೆ. ಅವರ ತನಿಖೆಯ ಭಾಗವಾಗಿ ಅವರು ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿ ಹೇಳಿದರು. ಅವರು ಈಗಾಗಲೇ 20 ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಯ ಪ್ರತ್ಯೇಕ ತಂಡಗಳು ಆರ್‌ಜಿ ಕರ್ ಆಸ್ಪತ್ರೆ ಮತ್ತು ಸಾಲ್ಟ್ ಲೇಕ್‌ನಲ್ಲಿರುವ ಕೋಲ್ಕತ್ತಾ ಪೋಲೀಸ್ ಸಶಸ್ತ್ರ ಪಡೆಗಳ ನಾಲ್ಕನೇ ಬೆಟಾಲಿಯನ್‌ನ ಬ್ಯಾರಕ್‌ನಲ್ಲಿ ಅಪರಾಧ ನಡೆದ ಸ್ಥಳವನ್ನು ತಲುಪಿದ್ದವು. ಅಲ್ಲಿ ಬಂಧಿತ ಪ್ರಮುಖ ಆರೋಪಿ, ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಇರಿಸಿದ್ದರು.
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ತನಿಖಾಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಅದೇ ತಂಡವು ಸಂಜಯ್ ರಾಯ್ ಅವರ ಬಾಡಿಗೆ ನಿವಾಸವಾದ ದಕ್ಷಿಣ ಕೋಲ್ಕತ್ತಾದ ಸಂಭುನಾಥ್ ಪಂಡಿತ್ ಸ್ಟ್ರೀಟ್‌ಗೆ ತೆರಳಿತ್ತು.ಅವರ ತಾಯಿಯೊಂದಿಗೆ ಮಾತನಾಡಿ ಲಿಖಿತ ಹೇಳಿಕೆಯನ್ನು ದಾಖಲಿಸಿದೆ ಎಂದು ಅವರು ಹೇಳಿದರು.
ಘಟನೆಯ ದಿನ ಸಂಜಯ್ ರಾಯ್ ಅವರು ಎಲ್ಲಿಗೆ ಹೋಗಿದ್ದರೋ ಆ ಎಲ್ಲಾ ಸ್ಥಳಗಳ ನಕ್ಷೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಅವರ ಸ್ನೇಹಿತರು, ವೈದ್ಯರು ಮತ್ತು ಅವರನ್ನು ತಿಳಿದಿರುವ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.