Kolkata rape-murder| ಆರೋಪಿ ಪಾಲಿಗ್ರಾಫ್ ಪರೀಕ್ಷೆ ಮುಂದೂಡಿಕೆ

ಸಂಜಯ್ ರಾಯ್ ಅವರನ್ನು ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲು ಸಿಬಿಐಗೆ ಸಾಧ್ಯವಾಗಿಲ್ಲ.ಆರೋಪಿ ಪರ ನ್ಯಾಯಾಲಯ ನೇಮಿಸಿದ ವಕೀಲರು ಆತನನ್ನು ಇನ್ನೂ ಭೇಟಿಯಾಗಿಲ್ಲ.;

Update: 2024-08-21 06:34 GMT

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ ಅವರನ್ನು ಕಡ್ಡಾಯ ಒಪ್ಪಿಗೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಬಿಐ ವಿಫಲವಾಗಿದ್ದರಿಂದ, ಅವರ ಪಾಲಿಗ್ರಾಫ್ ಪರೀಕ್ಷೆಯನ್ನು ಮುಂದೂಡಲಾಗಿದೆ.

ನ್ಯಾಯಾಲಯಕ್ಕೆ ತೆರಳುವ ಮಾರ್ಗದಲ್ಲಿ ರಾಯ್ ಅವರ ಸುರಕ್ಷತೆ ಮತ್ತು ಭದ್ರತೆ ಕಾಯ್ದುಕೊಳ್ಳುವುದು ಕಷ್ಟಕರ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.‌ 

ಕಾನೂನಿನ ಪ್ರಕಾರ, ಪಾಲಿಗ್ರಾಫ್‌ ಪರೀಕ್ಷೆಯ ದೈಹಿಕ, ಭಾವನಾತ್ಮಕ ಮತ್ತು ಕಾನೂನು ಪರಿಣಾಮಗಳ ಬಗ್ಗೆ ಆರೋಪಿಗೆ ವಿವರಿಸುವುದು ಕಡ್ಡಾಯ. ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ವ್ಯಕ್ತಿಯನ್ನು ಹಾಜರುಪಡಿಸಿ, ಒಪ್ಪಿಗೆ ಪಡೆಯಬೇಕು ಮತ್ತು ವಿಚಾರಣೆ ಸಮಯದಲ್ಲಿ ಆರೋಪಿಯ ವಕೀಲರು ಹಾಜರಿರಬೇಕು. 

ವಕೀಲರ ಗೈರುಹಾಜರಿ: ಸೀಲ್ದಾ ನ್ಯಾಯಾಲಯದ ಯಾವುದೇ ವಕೀಲರು ರಾಯ್ ಅವರನ್ನು ಪ್ರತಿನಿಧಿಸಲು ಒಪ್ಪದ ಕಾರಣ, ನ್ಯಾಯಾಲಯವು ರಾಜ್ಯದ ಕಾನೂನು ನೆರವು ರಕ್ಷಣಾ ಸಲಹೆಗಾರ ವ್ಯವಸ್ಥೆ (ಎಲ್‌ಎಡಿಸಿಎಸ್‌)ಯಿಂದ ವಕೀಲರನ್ನು ಸೋಮವಾರ ನೇಮಿಸಿತು. ಮಂಗಳವಾರ ಬೆಳಗ್ಗೆಯಿಂದ ಸಿಬಿಐ ತಂಡ ನ್ಯಾಯಾಲಯಕ್ಕೆ ಹಾಜರಾಗಿದ್ದರೂ, ವಿಚಾರಣೆ ನಡೆದಿಲ್ಲ ಎಂದು ಉತ್ತರ 24 ಪರಗಣದ ಎಲ್‌ಎಡಿಸಿಎಸ್‌ ಮುಖ್ಯಸ್ಥ ಸೌರಭ್ ಬಂದೋಪಾಧ್ಯಾಯ ಹೇಳಿದ್ದಾರೆ. 

ಆಗಸ್ಟ್ 23 ರಂದು ರಾಯ್ ಪರವಾಗಿ ಹಾಜರಾಗುತ್ತೇನೆ. ಎಲ್‌ಎಡಿಸಿಎಸ್‌ ವಕೀಲರಾದ ಕಬಿತಾ ಸರ್ಕಾರ್ ಅವರು ಇನ್ನೂ ರಾಯ್ ಅವರನ್ನು ಭೇಟಿ ಮಾಡಿಲ್ಲ ಎಂದು ಬಂದೋಪಾಧ್ಯಾಯ ಹೇಳಿದ್ದಾರೆ.

ಒಂದಕ್ಕಿಂತ ಹೆಚ್ಚು ಅಪರಾಧಿಗಳ ಉಪಸ್ಥಿತಿಯನ್ನು ಸಿಬಿಐ ತಳ್ಳಿಹಾಕಿಲ್ಲ. ಸಾಂದರ್ಭಿಕ ಪುರಾವೆಗಳು ಹೆಚ್ಚು ಜನರ ಉಪಸ್ಥಿತಿಯ ಸಾಧ್ಯತೆಯನ್ನು ತೋರಿಸುತ್ತವೆ ಎಂದು ಏಜೆನ್ಸಿ ಮೂಲಗಳು ಹೇಳಿವೆ.

Tags:    

Similar News