ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿಗಳಿಗೆ ವಾಟ್ಸ್ಆ್ಯಪ್ ಗ್ರೂಪ್ ರಚನೆ. ಸರ್ಕಾರದಿಂದ ತನಿಖೆ

ತನ್ನ ವೈಯಕ್ತಿಕ ವಾಟ್ಸಾಪ್ ಸಂಖ್ಯೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಧಾರ್ಮಿಕ ಗುಂಪನ್ನು ರಚಿಸಲು ಬಳಸಲಾಗಿದೆ ಎಂದು ಆರೋಪಿಸಿ ಐಎಎಸ್ ಅಧಿಕಾರಿಯೊಬ್ಬರು ಪೊಲೀಸರಿಗೆ ನೀಡಿದ್ದರು.

Update: 2024-11-04 08:49 GMT
ಸಾಂದರ್ಭಿಕ ಚಿತ್ರ.

ಹಿಂದೂ ಐಎಎಸ್ ಅಧಿಕಾರಿಗಳಿಗಾಗಿಯೇ ವಿಶೇಷ ವಾಟ್ಸ್ಆ್ಯಪ್ ಗ್ರೂಪ್ ರಚಿಸಿದ ವಿವಾದಾತ್ಮಕ ಘಟನೆ ಕೇರಳದಲ್ಲಿ ನಡೆದಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ರಾಜ್ಯ ಕೈಗಾರಿಕಾ ಸಚಿವ ಪಿ.ರಾಜೀವ್ ಸೋಮವಾರ ಹೇಳಿದ್ದಾರೆ. ಐಎಎಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ನಂತರ ಅವರ ಹೇಳಿಕೆ ಬಂದಿದೆ.

ತನ್ನ ವೈಯಕ್ತಿಕ ವಾಟ್ಸಾಪ್ ಸಂಖ್ಯೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಧಾರ್ಮಿಕ ಗುಂಪನ್ನು ರಚಿಸಲು ಬಳಸಲಾಗಿದೆ ಎಂದು ಆರೋಪಿಸಿ ಐಎಎಸ್ ಅಧಿಕಾರಿಯೊಬ್ಬರು ಪೊಲೀಸರಿಗೆ ನೀಡಿದ್ದರು. ಈ ವಿವಾದಕ್ಕೆ ಪ್ರತಿಕ್ರಿಯಿಸಿದ ರಾಜೀವ್, ಹಿಂದೂ ಐಎಎಸ್ ಅಧಿಕಾರಿಗಳಿಗಾಗಿ ನಿರ್ದಿಷ್ಟವಾಗಿ ಗುಂಪು ರಚಿಸುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ .

ಈ ಘಟನೆಯನ್ನು "ಗಂಭೀರ" ಎಂದು ಬಣ್ಣಿಸಿದ ಅವರು, ಸಮುದಾಯ ಆಧಾರಿತ ವಿಭಜನೆಗಳು ಹೆಚ್ಚು ಕಳವಳಕಾರಿ ಎಂದು ನುಡಿದಿದ್ದಾರೆ.

"ಸರ್ಕಾರ ಈ ವಿಷಯವನ್ನು ಪರಿಶೀಲಿಸುತ್ತದೆ. ಸಾರ್ವಜನಿಕ ಆಡಳಿತ ಇಲಾಖೆಯ ಅಡಿಯಲ್ಲಿ ಬರುವ ಐಎಎಸ್ ಅಧಿಕಾರಿಗಳಿಗೆ ಸಾಮಾನ್ಯ ನೀತಿ ಸಂಹಿತೆ ಇದೆ. ನಾವು ಪ್ರಸ್ತುತ ಪರಿಸ್ಥಿತಿ ಪರಿಶೀಲಿಸುತ್ತಿದ್ದೇವೆ. ಏನು ಮಾಡಬೇಕೆಂದು ಪರಿಶೀಲಿಸೋಣ ಮತ್ತು ನಿರ್ಧರಿಸೋಣ" ಎಂದು ಅವರು ಸೋಮವಾರ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಐಎಎಸ್ ಅಧಿಕಾರಿಯೊಬ್ಬರು ತಮ್ಮ ವೈಯಕ್ತಿಕ ವಾಟ್ಸಾಪ್ ಸಂಖ್ಯೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಧಾರ್ಮಿಕ ಗುಂಪನ್ನು ರಚಿಸಲು ಬಳಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ಈ ವಿವಾದ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರು ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ವಿವಾದಾತ್ಮಕ ವಾಟ್ಸಾಪ್ ಗುಂಪಿನಲ್ಲಿ, ವಿವಿಧ ಸಮುದಾಯಗಳ ಅಧಿಕಾರಿಗಳನ್ನು ಸೇರಿಸಲಾಗಿದೆ ಮತ್ತು ಗುಂಪನ್ನು ಹಿಂದೂ ಸಮುದಾಯ ಗುಂಪು ಎಂದು ಲೇಬಲ್ ಮಾಡಲಾಗಿದೆ ಎಂದು ಅಧಿಕಾರಿಗೆ ಹತ್ತಿರದ ಮೂಲಗಳು ತಿಳಿಸಿವೆ.

ಇದನ್ನು ಗಮನಿಸಿದ ಅಧಿಕಾರಿ ತಕ್ಷಣ ದೂರು ದಾಖಲಿಸಿ ಗುಂಪನ್ನು ಸ್ಥಗಿತಮಾಡಿದ್ದಾರೆ. . ಅವರು ತಮ್ಮ ದೂರಿನಲ್ಲಿ, ಯಾವುದೇ ಅಧಿಕಾರಿಗಳನ್ನು ಪ್ರಶ್ನಾರ್ಹ ಗುಂಪಿಗೆ ಸೇರಿಸಿಲ್ಲ ಎಂದು ಹೇಳಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Tags:    

Similar News