ಬಿಜೆಪಿ ಮುಖಂಡ ಬಿ.ಎಲ್.‌ ಸಂತೋಷ್‌ ಬಂಧನಕ್ಕೆ ಮುಂದಾಗಿದ್ದ ತೆಲಂಗಾಣ ಮಾಜಿ ಸಿಎಂ ಕೆಸಿಆರ್‌!

ಶಾಸಕರ ಖರೀದಿ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಸ್ಥಾಪಿಸಲಾಯಿತು. ಆಗ ಕೆಸಿಆರ್ ಅವರು ಬಿ.ಎಲ್. ಸಂತೋಷ್ ಅವರನ್ನು ಬಂಧಿಸಲು ಬಯಸಿದ್ದರು. ಆದರೆ, ನವೆಂಬರ್ 2022 ರಲ್ಲಿ ನ್ಯಾಯಾಂಗದ ಮಧ್ಯಪ್ರವೇಶದಿಂದ ಸಂತೋಷ್ ಅವರನ್ನು ಪ್ರಶ್ನಿಸಲು ಆಗಲಿಲ್ಲ. ಆನಂತರ ಹೈಕೋರ್ಟ್ ಎಸ್‌ಐಟಿಯನ್ನು ವಿಸರ್ಜಿಸಿತು.

Update: 2024-05-28 12:36 GMT

ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರು ಪುತ್ರಿ ಕೆ. ಕವಿತಾ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣವನ್ನು ಕೇಂದ್ರ ಸರ್ಕಾರ ಕೈ ಬಿಡುವಂತೆ ಒತ್ತಡ ಹೇರಲು ಆರೆಸ್ಸೆಸ್‌ ಮುಖಂಡ ಬಿ.ಎಲ್. ಸಂತೋಷ್ ಅವರನ್ನು ಬಂಧಿಸಲು ಮುಂದಾಗಿದ್ದರು ಎಂದು ಫೋನ್ ಬೇಹುಗಾರಿಕೆ ಪ್ರಕರಣದ ತನಿಖೆಯಿಂದ ಬಹಿರಂಗವಾಗಿದೆ.

ಮಾಜಿ ಉಪ ಪೊಲೀಸ್ ಆಯುಕ್ತ ಪಿ. ರಾಧಾಕೃಷ್ಣ ರಾವ್ ತಮ್ಮ ಆರು ಪುಟಗಳ ತಪ್ಪೊಪ್ಪಿಗೆಯಲ್ಲಿಈ ವಿಷಯ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕೆಸಿಆರ್ ಸೋಲಿನ ನಂತರ ರಾವ್ ಅವರನ್ನು ಮಾರ್ಚ್‌ನಲ್ಲಿ ಬಂಧಿಸಲಾಯಿತು.

ರಾವ್‌ ತಪ್ಪೊಪ್ಪಿಗೆ: ಭಾರತ ರಾಷ್ಟ್ರ ಸಮಿತಿ ಮತ್ತು ರಾಜ್ಯ ಸರ್ಕಾರದ ವಿರುದ್ಧದ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕಲು ತಮಗೆ ಆದೇಶಿಸಲಾಗಿತ್ತು ಎಂದು ರಾವ್ ಹೇಳಿದ್ದಾರೆ.

ಕೆಸಿಆರ್ ಸಣ್ಣ ಭಿನ್ನಾಭಿಪ್ರಾಯ ಅಥವಾ ಟೀಕೆಗಳಿಂದಲೂ ಕಿರಿಕಿರಿಗೊಳ್ಳುತ್ತಾರೆ. ಫೋನ್ ಕದ್ದಾಲಿಕೆ ಪ್ರಕರಣವು ರಾಜಕೀಯ ನಾಯಕರು ಮಾತ್ರವಲ್ಲದೆ, ಖಾಸಗಿ ಕಂಪನಿಗಳು ಮತ್ತು ಟಾಲಿವುಡ್ ಸೆಲೆಬ್ರಿಟಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಎಲೆಕ್ಟ್ರಾನಿಕ್ ದತ್ತಾಂಶವನ್ನು ಸಂಗ್ರಹಿಸುವಿಕೆಯನ್ನು ಒಳಗೊಂಡಿತ್ತು ಎಂದು ರಾವ್‌ ಹೇಳಿದ್ದಾರೆ. 

ಬಿಆರ್‌ಎಸ್‌ ನಾಯಕರು ಪಾಲ್ಗೊಂಡಿದ್ದರು: ಕಾಂಗ್ರೆಸ್ ನಾಯಕ ಎನ್. ಉತ್ತಮ್ ಕುಮಾರ್ ರೆಡ್ಡಿ ನೀಡಿರುವ ಹೇಳಿಕೆಯಲ್ಲಿ, ʻಇದೆಲ್ಲವೂ ಬಿಆರ್‌ಎಸ್ ನಾಯಕರ ಅರಿವಿನಿಂದಲೇ ನಡೆದಿದೆ. ಶೀಘ್ರದಲ್ಲೇ ಬಿಆರ್‌ಎಸ್ ನಾಯಕರು ತನಿಖೆಯ ವ್ಯಾಪ್ತಿಗೆ ಬರಲಿದ್ದಾರೆ,ʼ. 

ಹಾಲಿ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸೇರಿದಂತೆ ಹಲವರ ಫೋನ್‌ ಕದ್ದಾಲಿಸಲಾಗಿದೆ. ಒಂದು ಲಕ್ಷ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಅಂತಹ ಒಂದು ಫೋನ್ ಕದ್ದಾಲಿಕೆಯಿಂದ ಬಿಆರ್‌ಎಸ್ ಶಾಸಕರನ್ನು ಬೇಟೆಯಾಡಲು ಬಿಜೆಪಿ ಸಂಚು ರೂಪಿಸಲು ಕಾರಣವಾಯಿತು.

ಸ್ಪೆಷಲ್ ಇಂಟೆಲಿಜೆನ್ಸ್ ಬ್ರಾಂಚ್ ಮುಖ್ಯಸ್ಥರಾಗಿದ್ದ ಟಿ. ಪ್ರಭಾಕರ್ ರಾವ್ ಅವರು ಫೋನ್ ಕದ್ದಾಲಿಕೆಯ ನೇತೃತ್ವ ವಹಿಸಿದ್ದರು. ವಿದೇಶದಲ್ಲಿರುವ ಅವರನ್ನು ಪ್ರಕರಣದಲ್ಲಿ 'ಆರೋಪಿ ನಂ.1' ಎಂದು ಹೆಸರಿಸಲಾಗಿದೆ. ಕೆಸಿಆರ್ ಅವರ ಆದೇಶದ ಮೇರೆಗೆ ವಿಶೇಷ ಗುಪ್ತಚರ ವಿಭಾಗವು ಬಿಆರ್‌ಎಸ್‌ ಶಾಸಕರ ಮೇಲೆ ಕಣ್ಗಾವಲು ಹಾಕಿತು. ಹೈದರಾಬಾದಿನ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಮೂವರನ್ನು ಬಂಧಿಸಲು ಇದು ಕಾರಣವಾಯಿತು.

ಎಸ್‌ಐಟಿ ತನಿಖೆ: ಶಾಸಕರ ಖರೀದಿ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಸ್ಥಾಪಿಸಲಾಯಿತು. ಆಗ ಕೆಸಿಆರ್ ಅವರು ಬಿ.ಎಲ್. ಸಂತೋಷ್ ಅವರನ್ನು ಬಂಧಿಸಲು ಬಯಸಿದ್ದರು. ಆದರೆ, ನವೆಂಬರ್ 2022 ರಲ್ಲಿ ನ್ಯಾಯಾಂಗದ ಮಧ್ಯಪ್ರವೇಶದಿಂದ ಸಂತೋಷ್ ಅವರನ್ನು ಪ್ರಶ್ನಿಸಲು ಆಗಲಿಲ್ಲ. ಆನಂತರ ಹೈಕೋರ್ಟ್ ಎಸ್‌ಐಟಿಯನ್ನು ವಿಸರ್ಜಿಸಿತು.

2023ರಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಸುನೀಲ್ ಕನುಗೋಲು ವಿರುದ್ಧ ದಾಳಿಯನ್ನು ಯೋಜಿಸಲಾಗಿತ್ತು ಎಂದು ರಾಧಾಕೃಷ್ಣ ರಾವ್ ಹೇಳಿದ್ದಾರೆ.

Tags:    

Similar News