ಕವಿತಾ ಬಂಧನ: ಭ್ರಷ್ಟರನ್ನು ಬಿಡುವುದಿಲ್ಲ ಎಂದ ಮೋದಿ
ಬಿಆರ್‌ಎಸ್ ರಾಜ್ಯದ (ತೆಲಂಗಾಣ) ಹೊರಗೆ ಕಡು ಭ್ರಷ್ಟ ಪಕ್ಷಗಳ ವಿಷವರ್ತುಲ ಸೇರಿಕೊಂಡಿದೆ. ಆ ಸತ್ಯ ತನಿಖೆಯ ಮೂಲಕ ಪ್ರತಿದಿನ ಹೊರಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.;
ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷ ಇತರ ಕಡು ಭ್ರಷ್ಟ ಪಕ್ಷಗಳೊಂದಿಗೆ ಅಪವಿತ್ರ ಮೈತ್ರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೈದರಬಾದ್‌ನ ನಾಗರ್ ಕರ್ನೂಲ್‌ನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮೋದಿ ಮಾತನಾಡಿದರು.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ಹೈದರಾಬಾದ್‌ನಲ್ಲಿ ಬಂಧಿಸಿದೆ.
ಕಡು ಭ್ರಷ್ಟ ಬಿಆರ್‌ಎಸ್
ತೆಲಂಗಾಣದ ಅಭಿವೃದ್ಧಿಯ ಪ್ರತಿಯೊಂದು ಕನಸನ್ನು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಒಟ್ಟಾಗಿ ಭಗ್ನಗೊಳಿಸಿವೆ. ಬಿಆರ್‌ಎಸ್ ರಾಜ್ಯದ (ತೆಲಂಗಾಣ) ಹೊರಗಿನ ಕಡುಭ್ರಷ್ಟ ಪಕ್ಷಗಳೊಂದಿಗೆ ವಿಷವರ್ತುಲ ರಚಿಸಿಕೊಂಡು ಪಾಲುದಾರಿಕೆಗೆ ಹೊಂದಿದೆ. ತನಿಖೆಯ ಮೂಲಕ ಸತ್ಯ ಪ್ರತಿದಿನ ಹೊರಬರುತ್ತಿದೆ ಎಂದು ಅವರು ಹೇಳಿದರು.
ಯಾವುದೇ ಭ್ರಷ್ಟರನ್ನು ಬಿಡುವುದಿಲ್ಲ, ಯಾವುದೇ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಂದು ತೆಲಂಗಾಣ ಜನತೆಗೆ ನಾನು ಭರವಸೆ ನೀಡುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನನಗೆ ತೆಲಂಗಾಣದ ಬೆಂಬಲ ಬೇಕು ಎಂದು ಅವರು ಹೇಳಿದರು.
ವಂಶಪಾರಂಪರ್ಯ ರಾಜಕೀಯ
ಭ್ರಷ್ಟಾಚಾರದ ಆರೋಪದಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡನ್ನೂ ಗುರಿಯಾಗಿಸಿದ ಪ್ರಧಾನಿ, ವಂಶಪಾರಂಪರ್ಯದ ಪಕ್ಷಗಳಲ್ಲಿ ಭ್ರಷ್ಟಾಚಾರವು ತುಂಬಾ ಪ್ರಬಲವಾಗಿದೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡೂ ಭ್ರಷ್ಟಾಚಾರದ ಪಾಲುದಾರರು ಎಂದರು.
2024 ರ ಜನಾದೇಶ ನಮ್ಮ ಪರ
ಬಿಆರ್‌ಎಸ್ ನೀರಾವರಿಯಲ್ಲಿ ಭ್ರಷ್ಟಾಚಾರ ನಡೆಸಿದರೆ, ಕಾಂಗ್ರೆಸ್ 2ಜಿ ಹಗರಣ ಮಾಡಿದೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡೂ ಭೂ ಮಾಫಿಯಾವನ್ನು ಬೆಂಬಲಿಸುತ್ತವೆ ಎಂದು ಮೋದಿ ಆರೋಪಿಸಿದ್ದಾರೆ.
2024 ರ ಜನಾದೇಶ ನಮ್ಮ ಪರ ಇರಲಿದೆ. ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಈ ಬಾರಿ 400 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಜನರು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು.