ವಕ್ಫ್ ಮಸೂದೆ| ಜೆಪಿಸಿಗೆ ತೇಜಸ್ವಿ ಸೂರ್ಯ, ಓವೈಸಿ, ಎ. ರಾಜಾ ಸೇರಿದಂತೆ 21 ಸಂಸದರು

Update: 2024-08-09 12:16 GMT

ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸಲಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಲ್ಲಿ ಲೋಕಸಭೆಯ 21 ಮತ್ತು ರಾಜ್ಯಸಭೆಯ 10 ಸದಸ್ಯರು ಇರಲಿದ್ದು, ಮುಂದಿನ ಸಂಸತ್ತಿನ ಅಧಿವೇಶನದ ವೇಳೆಗೆ ತನ್ನ ವರದಿ ಸಲ್ಲಿಸುತ್ತದೆ.

ಲೋಕಸಭೆಯ  21 ಸದಸ್ಯರನ್ನು ಹೆಸರಿಸುವ ನಿರ್ಣಯವನ್ನು ಶುಕ್ರವಾರ (ಆಗಸ್ಟ್ 9) ಅಂಗೀಕರಿಸಿತು. ಅವರೆಂದರೆ, ಜಗದಾಂಬಿಕಾ ಪಾಲ್, ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಅಭಿಕಿತ್ ಗಂಗೋಪಾಧ್ಯಾಯ, ಡಿ.ಕೆ. ಅರುಣ (ಬಿಜೆಪಿ), ಗೌರವ್ ಗೊಗೋಯ್, ಇಮ್ರಾನ್ ಮಸೂದ್ ಮತ್ತು ಮೊಹಮ್ಮದ್ ಜಾವೇದ್ (ಕಾಂಗ್ರೆ‌ಸ್‌), ಮೌಲಾನಾ ಮೊಹಿಬುಲ್ಲಾ (ಎಸ್‌ಪಿ), ಕಲ್ಯಾಣ್ ಬ್ಯಾನರ್ಜಿ (ಟಿಎಂಸಿ), ಎ.ರಾಜಾ (ಡಿಎಂಕೆ), ಲವು ಶ್ರೀಕೃಷ್ಣ ದೇವರಾಯಲು (ಟಿಡಿಪಿ), ದಿಲೇಶ್ವರ ಕಮೈತ್ (ಜೆಡಿಯು), ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ), ಬಲ್ಯ ಮಾಮ ಸುರೇಶ್ ಗೋಪಿನಾಥ್ ಮಹಾತ್ರೆ ( ಎನ್‌ಸಿಪಿ-ಶರದ್ ಪವಾರ್), ನರೇಶ್ ಮಾಸ್ಕೆ (ಶಿವಸೇನೆ), ಅರುಣ್ ಭಾರತಿ (ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್) ಮತ್ತು ಅಸಾದುದ್ದೀನ್ ಓವೈಸಿ (ಎಐಎಂಐಎಂ). 

ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ (ತಿದ್ದುಪಡಿ) ಮಸೂದೆಯನ್ನು ಜಂಟಿ ಸದನ ಸಮಿತಿಗೆ ಉಲ್ಲೇಖಿಸುವ ಪ್ರಸ್ತಾಪವನ್ನು ಮಂಡಿಸಿದರು.10 ಮೇಲ್ಮನೆ ಸದಸ್ಯರನ್ನು ಸಮಿತಿಯಲ್ಲಿ ಸೇವೆ ಸಲ್ಲಿಸಲು ನೇಮಿಸಬೇಕೆಂದು ರಾಜ್ಯಸಭೆಗೆ ಕೋರಲಾಗಿದೆ. 

ಮುಂದಿನ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಸಮಿತಿ ತನ್ನ ವರದಿಯನ್ನು ಲೋಕಸಭೆಗೆ ಸಲ್ಲಿಸಲಿದೆ.

Tags:    

Similar News