ಜೈಶಂಕರ್, ವೈಷ್ಣವ್ ಅಧಿಕಾರ ಸ್ವೀಕಾರ

Update: 2024-06-11 06:47 GMT

ರಾಜತಾಂತ್ರಿಕ-ರಾಜಕಾರಣಿ ಎಸ್. ಜೈಶಂಕರ್ ಅವರು ಮಂಗಳವಾರ (ಜೂನ್ 11) ಎರಡನೇ ಅವಧಿಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಅವರು ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. 

ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾದ ಅವರು ಹಿಂದಿನ ಸರ್ಕಾರದಲ್ಲಿ ನಿರ್ವಹಿಸಿದ ಸಚಿವಾಲಯಗಳನ್ನು ಉಳಿಸಿಕೊಂಡಿದ್ದಾರೆ. 

2019 ರಿಂದ ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಅವರು, ಜಾಗತಿಕ ಮಟ್ಟದಲ್ಲಿ ದೇಶದ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿ ಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಮಾಸ್ಕೋದಿಂದ ಕಚ್ಚಾ ತೈಲ ಖರೀದಿ, ಚೀನಾ ಕುರಿ ತು ದೃಢ ನೀತಿಯನ್ನು ರೂಪಿಸುವುದಲ್ಲದೆ, ದೇಶ ಜಿ20 ಅಧ್ಯಕ್ಷರಾಗಿದ್ದಾಗ ವಿದೇಶಾಂಗ ನೀತಿಯನ್ನು ಚರ್ಚೆಯ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 

ವಿದೇಶಾಂಗ ಕಾರ್ಯದರ್ಶಿ ಯಾಗಿ(2015-18), ಅಮೆರಿಕ (2013-15), ಚೀನಾ (2009-2013), ಮತ್ತು ಜೆಕ್ ರಿಪಬ್ಲಿಕ್ (2000-2004) ಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸಿಂಗಾಪುರಕ್ಕೆ ಭಾರತದ ಹೈಕಮಿಷನರ್ ಆಗಿದ್ದರು (2007-2009). ಮಾಸ್ಕೋ, ಕೊಲಂಬೋ, ಬುಡಾಪೆಸ್ಟ್ ಮತ್ತು ಟೋಕಿಯೊದ ರಾಯಭಾರ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಷ್ಟ್ರಪತಿಯವರ ಸಚಿವಾಲಯದಲ್ಲಿ ರಾಜತಾಂತ್ರಿಕ ಸೇವೆ ಸಲ್ಲಿಸಿದ್ದಾರೆ. 

ಅಶ್ವಿನಿ ವೈಷ್ಣವ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಅಧಿಕಾರ: ಅಶ್ವಿನಿ ವೈಷ್ಣವ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಉಪಸ್ಥಿತರಿದ್ದರು. ಎನ್‌ಡಿಎ 2ರಲ್ಲಿ ಅನುರಾಗ್ ಸಿಂಗ್ ಠಾಕೂರ್ ಅವರು ಸುಮಾರು ಮೂರು ವರ್ಷ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು. 

ವೈಷ್ಣವ್(53) ಐಐಟಿ ಕಾನ್ಪುರದ ವಿದ್ಯಾರ್ಥಿ. ಒಡಿಶಾದ ರಾಜ್ಯಸಭೆ ಸದಸ್ಯರಾಗಿದ್ದ ಅವರು 2002 ರಲ್ಲಿ ಬಿಜೆಪಿಯು ಬಿಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಾಗ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡರು. ಜು ಲೈ 2021 ರಲ್ಲಿ ಮೊದಲ ಬಾರಿ ಸಚಿವರಾಗಿ ಸೇರ್ಪಡೆಗೊಂಡರು.

Tags:    

Similar News