ʼಭಾರತೀಯʼ ಹೆಣ್ಣು ಮಕ್ಕಳು ತಲಾ ಮೂರು ಮಕ್ಕಳನ್ನು ಹೆರಬೇಕು: ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌

ಜನಸಂಖ್ಯೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. ಒಂದು ಸಮಾಜದ ಒಟ್ಟು ಫಲವತ್ತತೆ ದರವು 2.1 ಇರವುದು ಅಪಾಯಕಾರಿ ಎಂದು ಅವರು ಹೇಳಿದರು.;

Update: 2024-12-02 04:04 GMT

ನವದೆಹಲಿ: ದೇಶವು ಜನಸಂಖ್ಯಾ ಬೆಳವಣಿಗೆಯಲ್ಲಿ ಆತಂಕಕಾರಿ ಕುಸಿತ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್. ಭಾರತೀಯ ಹೆಣ್ಣು ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಮೂರು ಮಕ್ಕಳನ್ನು ಹೆರಬೇಕು ಎಂದು ಭಾನುವಾರ (ಡಿಸೆಂಬರ್ 1) ಕರೆಕೊಟ್ಟಿದ್ದಾರೆ, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಒಟ್ಟು ಫಲವತ್ತತೆ ದರವನ್ನು (ಟಿಎಫ್ಆರ್) 3 ಕ್ಕೆ ತರಬೇಕು ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಕೆಲವು ರಾಜ್ಯಗಳ ಸಿಎಂಗಳು ಹೆಚ್ಚೆಚ್ಚು ಮಕ್ಕಳನ್ನು ಹೊಂದುವಂತೆ ಯುವ ದಂಪತಿಗೆ ಕರೆ ಕೊಟ್ಟಿರುವ ನಡುವೆ ಆರ್‌ಎಸ್‌ಎಸ್‌ ಮುಖ್ಯಸ್ಥರ ಮಾತೂ ಚರ್ಚೆಗೆ ಗ್ರಾಸವಾಗಿದೆ.


ನಾಗ್ಪುರದಲ್ಲಿ ನಡೆದ 'ಕಥಲೆ ಕುಲ್ (ಕುಲ) ಸಮ್ಮೇಳನ'ದಲ್ಲಿ ಮಾತನಾಡಿದ ಭಾಗವತ್, ಕೌಟುಂಬಿಕ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಜನಸಂಖ್ಯಾ ವಿಜ್ಞಾನದ ಪ್ರಕಾರ, ಭಾರತೀಯ ಸಮಾಜ, ಟಿಪಿಆರ್ (ಮಹಿಳೆ ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ) ಅಳಿವನ್ನು ಎದುರಿಸಬಹುದು ಎಂದು ಅವರು ಎಚ್ಚರಿಕೆ ನೀಡಿದರು.

ಜನಸಂಖ್ಯೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. ಒಂದು ಸಮಾಜದ ಒಟ್ಟು ಫಲವತ್ತತೆ ದರವು 2.1 ಇರವುದು ಅಪಾಯಕಾರಿ ಎಂದು ಅವರು ಹೇಳಿದರು.

ಸಂಸ್ಕೃತಿ ಕಣ್ಮರೆ

"ಫಲವತ್ತತೆಯ ಸಮಸ್ಯೆಯಿಂದ ಈಗಾಗಲೇ ಅನೇಕ ಭಾಷೆಗಳು ಮತ್ತು ಸಂಸ್ಕೃತಿಗಳು ಕಣ್ಮರೆಯಾಗಿವೆ. ಹೀಗಾಗಿ, ಫಲವತ್ತತೆ ದರವನ್ನು 2.1 ಕ್ಕಿಂತ ಹೆಚ್ಚು ಕಾಪಾಡಿಕೊಳ್ಳುವುದು ಅತ್ಯಗತ್ಯ" ಎಂದು ಭಾಗವತ್ ಹೇಳಿದರು. ಕುಟುಂಬ ಸಮಾಜದ ಅವಿಭಾಜ್ಯ ಅಂಗವಾಗಿದೆ. ಪ್ರತಿ ಕುಟುಂಬವು ಪ್ರಮುಖ ಸಮಾಜ ನಿರ್ಮಾಣ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ,ʼʼ ಎಂದು ಒತ್ತಿ ಹೇಳಿದರು.

"1998 ಅಥವಾ 2002ರಲ್ಲಿ ರೂಪಿಸಲಾದ ನಮ್ಮ ದೇಶದ ಜನಸಂಖ್ಯಾ ನೀತಿಯು ಒಟ್ಟು ಫಲವತ್ತತೆ ದರವು 2.1 ಕ್ಕಿಂತ ಕಡಿಮೆ ಇರಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ ನಾವು 2.1 ಎಂದರೆ ಕನಿಷ್ಠ ಮೂರು ಆಗಿರಬೇಕು ಎಂದು ಅಂದಾಜಿಸಬೇಕು" ಎಂದು ಭಾಗವತ್ ಹೇಳಿದರು.

ಟಿಎಫ್ಆರ್ ಕುಸಿಯುತ್ತಿದೆ

2021ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಭಾರತದ ಟಿಎಫ್ಆರ್ 2.2 ರಿಂದ 2 ಕ್ಕೆ ಇಳಿದಿದೆ. ಗರ್ಭನಿರೋಧಕ ಬಳಕೆಯ ಪ್ರಮಾಣವು ಶೇಕಡಾ 54 ರಿಂದ 67 ಕ್ಕೆ ಏರಿದೆ.

ಒಟ್ಟು ಫಲವತ್ತತೆ ದರ 2.1 ಅನ್ನು ಪರ್ಯಾಯ ದರವೆಂದು ಪರಿಗಣಿಸಲಾಗುತ್ತದೆ. ಇದು ಜನಸಂಖ್ಯೆಯ ಬೆಳವಣಿಗೆಯಲ್ಲಿ ನಿರ್ಣಾಯಕ ಅಂಶ. ಮಹಿಳೆ ಮತ್ತು ಪುರಷನ ನಿಧನದ ನಂತರ ಉಳಿದಿರುವರ ಸಂಖ್ಯೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ ಸದಸ್ಯರು ಮದುವೆಯಾಗಲಿ: ಓವೈಸಿ

ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ, "ಮುಸ್ಲಿಂ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು" ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ. ಹಿಂದೂ ಹೆಣ್ಣುಮಕ್ಕಳಿಂದ ಮಂಗಳಸೂತ್ರಗಳು ಸೇರಿದಂತೆ ಚಿನ್ನವನ್ನು ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಮೋದಿಯವರ ಹೇಳಿಕೆಯನ್ನು ಅವರು ಉಲ್ಲೇಖಿಸಿದರು.

"ಹೆಚ್ಚು ಮಕ್ಕಳನ್ನು ಹೆರಬೇಕೆಂದು ಭಾಗವತ್ ಹೇಳುತ್ತಾರೆ. ಹೀಗಾಗಿ ಆರ್‌ಎಸ್‌ಎಸ್‌ನಲ್ಲಿರುವವರು ಮದುವೆಯಾಗಲು ಪ್ರಾರಂಭಿಸಬೇಕು" ಎಂದು ಓವೈಸಿ ಪ್ರತಿಕ್ರಿಯಿಸಿದ್ದಾರೆ .

Similar News