ಅಮೆರಿಕದ ನೆರವು ಸ್ಥಗಿತ : ಹೈದರಾಬಾದ್​ನ ಭಾರತದ ಮೊದಲ ತೃತೀಯ ಲಿಂಗಿಗಳ ಕ್ಲಿನಿಕ್ ಬಂದ್

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್​​ನ್ಯಾಷನಲ್​​ ಡೆವಲಪ್ಮೆಂಟ್ ಕಾರ್ಯಾಚರಣೆಯನ್ನು 90 ದಿನಗಳವರೆಗೆ ಸ್ಥಗಿತಗೊಳಿಸುವ ಡೊನಾಲ್ಡ್ ಟ್ರಂಪ್ ಅವರ ಆದೇಶವು ವಿಶ್ವದಾದ್ಯಂತ ಹಲವಾರು ಇದೇ ರೀತಿಯ ಯೋಜನೆಯ ಮೇಲೆ ಪರಿಣಾಮ ಬಿದ್ದಿದೆ.;

Update: 2025-02-26 11:57 GMT
ಮಿತ್ರ ಕ್ಲಿನಿಕ್​ನ ಸಂಗ್ರಹ ಚಿತ್ರ.

ಯುಎಸ್​ಎಐಡಿ (ಯುನೈಟೆಡ್​ ಸ್ಟೇಟ್ಸ್​​ ಏಜೆನ್ಸಿ ಫಾರ್​ ಇಂಟರ್​ನ್ಯಾಷನಲ್​ ಡೆವಲಪ್​ಮೆಂಟ್​​​) ಕಾರ್ಯಾಚರಣೆಯನ್ನು 90 ದಿನಗಳ ಕಾಲ ಸ್ಥಗಿತಗೊಳಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಆದೇಶದಿಂದ ಭಾರತದ ಏಕೈಕ ತೃತೀಯ ಲಿಂಗಿಗಳ ಆಸ್ಪತ್ರೆ ಮೇಲೆ ಪರಿಣಾಮ ಬೀರಿದ್ದು, ಅನುದಾನ ಸಿಗದೇ ಮುಚ್ಚುವಂತಾಗಿದೆ.

ಜನವರಿ 29, 2021ರಂದು ಹೈದರಾಬಾದ್​ನಲ್ಲಿ ಆರಂಭಿಸಲಾಗಿದ್ದ ಈ ಕ್ಲಿನಿಕ್​​ಗೆ 'ಮಿತ್ರ ಕ್ಲಿನಿಕ್ ಎಂದು ಕರೆಯಲಾಗುತ್ತಿತ್ತು. ಅಮೆರಿಕ ಸರ್ಕಾರದ ಅತಿದೊಡ್ಡ ಮಾನವೀಯತೆಯ ಸಂಸ್ಥೆಯ ಯುಎಸ್ಎಐಡಿ ಇದಕ್ಕೆ ಧನ ಸಹಾಯ ನೀಡುತ್ತಿತ್ತು. ಇದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದೊಂದಿಗೆ ಸಹಭಾಗಿತ್ವ ಪಡೆದು ತೃತೀಯ ಲಿಂಗಿಗಳ ಸಮುದಾಯಕ್ಕೆ ಆರೋಗ್ಯ ನೆರವು ನೀಡುತ್ತಿತ್ತು.

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್​​ನ್ಯಾಷನಲ್​​ ಡೆವಲಪ್ಮೆಂಟ್ ಕಾರ್ಯಾಚರಣೆಯನ್ನು 90 ದಿನಗಳವರೆಗೆ ಸ್ಥಗಿತಗೊಳಿಸುವ ಡೊನಾಲ್ಡ್ ಟ್ರಂಪ್ ಅವರ ಆದೇಶವು ವಿಶ್ವದಾದ್ಯಂತ ಹಲವಾರು ಇದೇ ರೀತಿಯ ಯೋಜನೆಯ ಮೇಲೆ ಪರಿಣಾಮ ಬಿದ್ದಿದೆ. ಅಂತೆಯೇ 'ಮಿತ್ರ ಕ್ಲಿನಿಕ್' ಕೂಡ ಬಾಗಿಲು ಮುಚ್ಚಲಿದೆ.

ಸೆನೆಟರ್​ ಮಾಹಿತಿ

ಈ ತಿಂಗಳ ಆರಂಭದಲ್ಲಿ, ಅಮೆರಿಕದ ಸೆನೆಟರ್ ಜಾನ್ ಕೆನಡಿ ಯುಎಸ್ಎಐಡಿ ಅನುಮೋದಿಸಿರುವ ಕೆಲವು ಯೋಜನೆಗಳು ಉತ್ತಮವಾಗಿದೆ. ಆದರೆ ಕೆಲವೊಂದು ವ್ಯರ್ಥ ಎಂದು ಹೇಳಿದ್ದರು. ಇದೇ ವೇಳೆ ಯುಎಸ್ಎಐಡಿ ಭಾರತದಲ್ಲಿ ತೃತೀಯ ಲಿಂಗಿಗಳ ಆಸ್ಪತ್ರೆಗೂ ನೆರವು ನೀಡುತ್ತದೆ ಎಂದು ಬೊಟ್ಟು ಮಾಡಿದ್ದರು. ಕೆಲವು ಬಲಪಂಥೀಯ ಮಾಧ್ಯಗಳು ಇದನ್ನು ಆಕ್ಷೇಪಿಸಿದ್ದವು. ಅಮೆರಿಕದ ತೆರಿಗೆ ದುಡ್ಡನ್ನು ಭಾರತದಲ್ಲಿ ಕ್ಲಿನಿಕ್ ಆರಂಭಿಸಲು ಬಳಸುವುದು ಯಾಕೆ ಎಂದು ಪ್ರಶ್ನಿಸಿದ್ದರು.

ಅಮೆರಿಕದ ಅಧ್ಯಕ್ಷರು ತೃತೀಯ ಲಿಂಗಿಗಳ ಕುರಿತು ಹೊಂದಿರುವ ಅಭಿಪ್ರಾಯವೂ ಇದೇ ವೇಳೆ ಮುನ್ನೆಲೆಗೆ ಬಂದಿತ್ತು. ಟ್ರಂಪ್​ ಅಧಿಕಾರ ವಹಿಸಿಕೊಂಡ ತಕ್ಷಣ ಇನ್ನು ಅಮೆರಿಕದಲ್ಲಿ ಎರಡೇ ಲಿಂಗಗಳು ಇರುತ್ತವೆ. ಗಂಡು ಮತ್ತು ಹೆಣ್ಣು ಮಾತ್ರ ಎಂದು ಹೇಳಿದ್ದರು.

ಹಲವು ಆಸ್ಪತ್ರೆಗಳಿಗೆ ಪ್ರೇರಣೆ

ಮಿತ್ರ ಆಸ್ಪತ್ರೆಯ ಸ್ಥಾಪನೆ ಬಳಿಕ ಅಲ್ಲಿ ಸಾಮಾನ್ಯ ಆರೋಗ್ಯ ಸೇವೆಗಳು, ಹಾರ್ಮೋನ್ ಚಿಕಿತ್ಸೆ,, ಲಿಂಗ ದೃಢೀಕರಣ ಪ್ರಕ್ರಿಯೆ,, ಮಾನಸಿಕ ಆರೋಗ್ಯ ಸಮಾಲೋಚನೆ, ಎಚ್ಐವಿ / ಎಸ್​​ಜಿಐ ಸಮಾಲೋಚನೆ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳನ್ನು ನೀಡಲಾಗಿತ್ತು. ಇದರಿಂದ ಪ್ರೇರಣೆ ಪಡೆದು ಜುಲೈ 2021ರಲ್ಲಿ ಮಹಾರಾಷ್ಟ್ರದಲ್ಲಿ ಇನ್ನೂ ಎರಡು ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿತ್ತು.

ಆಸ್ಪತ್ರೆಯಿಂದ ಪ್ರೇರಣೆಗೊಂಡ ತೆಲಂಗಾಣ ರಾಜ್ಯ ಇಂತಹ ಹಲವು ಚಿಕಿತ್ಸಾಲಯಗಳನ್ನು ಆರಂಭಿಸಿತು. 2021ರಲ್ಲಿ ಹೈದರಾಬಾದ್​​ನ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಉಚಿತ ತೃತೀಯ ಲಿಂಗಿ ಚಿಕಿತ್ಸಾಲಯ ಪ್ರಾರಂಭಿಸಲಾಯಿತು. ತೆಲಂಗಾಣ ಸರ್ಕಾರವು 'ಮೈತ್ರಿ ಕ್ಲಿನಿಕ್​​' ಎಂದು ಕರೆಯಲ್ಪಡುವ 33 ತೃತೀಯ ಲಿಂಗಿಗಳ ಆರೋಗ್ಯ ಚಿಕಿತ್ಸಾಲಯಗಳನ್ನು ರಾಜ್ಯಾದ್ಯಂತ ತೆರೆದಿತ್ತು.

ಮೈತ್ರಿ ಕ್ಲಿನಿಕ್​​ಗಳಿಗೆ ಈಗಾಗಲೇ ಧನಸಹಾಯ ಮತ್ತು ಬೆಂಬಲ ನೀಡುತ್ತಿರುವುದರಿಂದ ರಾಜ್ಯ ಸರ್ಕಾರವು 'ಮಿತ್ರ ಕ್ಲಿನಿಕ್' ಧನಸಹಾಯ ನೀಡಲು ನಿರಾಕರಿಸಿದೆ.

Tags:    

Similar News