ಬಿಜೆಪಿ - ಕಾಂಗ್ರೆಸ್‌ ಹೇಗೆ ಭಿನ್ನ; ಐಐಟಿ ವಿದ್ಯಾರ್ಥಿಗಳ ಸಂದೇಹ ಪರಿಹಾರ ಮಾಡಿದ ರಾಹುಲ್‌ ಗಾಂಧಿ

ಖಾಸಗೀಕರಣ ಮತ್ತು ಆರ್ಥಿಕ ಪ್ರೋತ್ಸಾಹದ ಮೂಲಕ ಗುಣಮಟ್ಟದ ಶಿಕ್ಷಣ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ ರಾಹುಲ್‌, ಸರ್ಕಾರಗಳು ಶಿಕ್ಷಣಕ್ಕಾಗಿ ಹೆಚ್ಚು ಖರ್ಚು ಮಾಡುವ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸಬೇಕು ಎಂದು ಒತ್ತಿ ಹೇಳಿದರು.;

Update: 2025-01-05 04:27 GMT
ರಾಹುಲ್‌ ಗಾಂಧಿ

ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯ ಕಾರ್ಯಸೂಚಿ ಹಾಗೂ ಆಡಳಿತದ ವಿಚಾರಕ್ಕೆ ಬಂದಾಗ ಹೇಗೆ ಭಿನ್ನ ಎಂಬ ಪ್ರಶ್ನೆಗಳು ಸಾಮಾನ್ಯ. ಇದೇ ಪ್ರಶ್ನೆಯನ್ನು ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಸ್ವಲ್ಪ ಸಮಯದ ಹಿಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಳಿದ್ದರು. ಅದಕ್ಕೆ ಅವರು ಸಮಂಜಸ ಉತ್ತರ ನೀಡಿದ್ದರು. ಅವರ ಪ್ರಕಾರ, ಕಾಂಗ್ರೆಸ್ ಅಥವಾ ಯುಪಿಎ, ದೇಶದ ಸಂಪನ್ಮೂಲಗಳನ್ನು ಹೆಚ್ಚು ನ್ಯಾಯಯುತವಾಗಿ ವಿತರಿಸಬೇಕು ಎಂದು ನಂಬಿದೆ. ಅಭಿವೃದ್ಧಿಯು ವಿಶಾಲ ಮತ್ತು ಅಂತರ್ಗತವಾಗಿರಬೇಕು.

ಬಿಜೆಪಿ ಅಭಿವೃದ್ಧಿ ವೈಖರಿಯು ಹೆಚ್ಚು ಆಕ್ರಮಣಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. "ಅವರು ಆರ್ಥಿಕ ದೃಷ್ಟಿಯ ಅಭಿವೃದ್ಧಿಯನ್ನು ಮಾತ್ರ ನಂಬುತ್ತಾರೆ. ಆದರೆ ಸಾಮಾಜಿಕ ರಂಗದಲ್ಲಿ, ಸಾಮರಸ್ಯದಿಂದ ಇರುವಂತೆ ನೋಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ನಾವು ಜನರು ಪರಸ್ಪರ ಹೋರಾಟ ನಡೆಸದೇ ಇರುವುದು ದೇಶಕ್ಕೆ ಒಳಿತು ಎಂದು ಭಾವಿಸುತ್ತೇವೆ" ಎಂದು ರಾಹುಲ್‌ ವಿವರಿಸಿದ್ದಾರೆ.

"ಅಂತರರಾಷ್ಟ್ರೀಯ ಸಂಬಂಧಗಳ ವಿಚಾರಕ್ಕೆ ಬಂದಾಗಲೂ ಎರಡೂ ಪಕ್ಷಗಳು ವಿಭಿನ್ನ ನೋಟವನ್ನು ಹೊಂದಿದೆ. ಆದರೆ, ಆದರೆ ಕಾರ್ಯವಿಧಾನಕ್ಕೆ ಬಂದಾಗ ಅದು ಒಂದೇ ಆಗಿರುತ್ತದೆ" ಎಂದು ಅವರು ಹೇಳಿದ್ದಾರೆ.

ಶಿಕ್ಷಣಕ್ಕಾಗಿ ಹೆಚ್ಚು ಖರ್ಚು ಮಾಡಬೇಕು

ಮಾತುಕತೆ ಸಮಯದಲ್ಲಿ, ರಾಹುಲ್ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.

ಖಾಸಗೀಕರಣ ಮತ್ತು ಆರ್ಥಿಕ ಪ್ರೋತ್ಸಾಹದ ಮೂಲಕ ಗುಣಮಟ್ಟದ ಶಿಕ್ಷಣ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ ರಾಹುಲ್‌, ಸರ್ಕಾರಗಳು ಶಿಕ್ಷಣಕ್ಕಾಗಿ ಹೆಚ್ಚು ಖರ್ಚು ಮಾಡುವ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸಬೇಕು ಎಂದು ಒತ್ತಿ ಹೇಳಿದರು.

"ತನ್ನ ಜನರಿಗೆ ಗುಣಮಟ್ಟದ ಶಿಕ್ಷಣ ಖಾತರಿಪಡಿಸುವುದು ಯಾವುದೇ ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ ಎಂದು ನಾನು ನಂಬುತ್ತೇನೆ. ಖಾಸಗೀಕರಣ ಮತ್ತು ಆರ್ಥಿಕ ಪ್ರೋತ್ಸಾಹದ ಮೂಲಕ ಇದನ್ನು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣ ಮತ್ತು ಸರ್ಕಾರಿ ಸಂಸ್ಥೆಗಳನ್ನು ಬಲಪಡಿಸಲು ನಾವು ಹೆಚ್ಚಿನ ಹಣ ಖರ್ಚು ಮಾಡಬೇಕಾಗಿದೆ" ಎಂದು ಅವರು ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆಯ ಎಡಿಟ್ ಮಾಡಿದ ವೀಡಿಯೊವನ್ನು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಾಂಪ್ರದಾಯಿಕ ವೃತ್ತಿಜೀವನ ಬೇಡ

"ಯಶಸ್ಸನ್ನು ಮರುವ್ಯಾಖ್ಯಾನಿಸುವ ಮತ್ತು ಭಾರತದಲ್ಲಿ ಶಿಕ್ಷಣವನ್ನು ಮರುರೂಪಿಸುವ ಕುರಿತು ಚರ್ಚೆ ಮಾಡಿದ್ದೇವೆ ಎಂಬುದಾಗಿ" ರಾಹುಲ್‌ ತಮ್ಮ ವಾಟ್ಸ್‌ಆಪ್‌ ಚಾನೆಲ್‌ನಲ್ಲಿ ಹೇಳಿದ್ದಾರೆ .

"ನಮ್ಮ ಸಂಭಾಷಣೆಯು ಸಾಂಪ್ರದಾಯಿಕ ವೃತ್ತಿಜೀವನವನ್ನು ಮೀರಿದ ಮಾರ್ಗಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕುರಿತಾಗಿತ್ತು. ವಿದ್ಯಾರ್ಥಿಗಳ ಸಂಶೋಧನೆ ಹಸಿವನ್ನು ಉತ್ತೇಜಿಸುವ ಮೂಲಕ, ಸೃಜನಶೀಲತೆಯನ್ನು ಪೋಷಿಸಿ ಉತ್ಪಾದನೆ ಹೆಚ್ಚಿಸಬಹುದು. ಅದರೊಂದಿಗೆ ನಾವು ಭಾರತವನ್ನು ನಿಜವಾದ ಜಾಗತಿಕ ನಾಯಕನನ್ನಾಗಿ ಮಾಡಬಹುದು" ಎಂದು ಅವರು ಹೇಳಿದರು.

ಉನ್ನತ ಶಿಕ್ಷಣವನ್ನು ಹೇಗೆ ಉತ್ತೇಜಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ , ಒಂದು ದೇಶವು ತನ್ನ ಜನರಿಗೆ ಗುಣಮಟ್ಟದ ಶಿಕ್ಷಣ ಖಾತರಿಪಡಿಸಬೇಕಾಗಿದೆ ಎಂದರು. "ಖಾಸಗೀಕರಣ ಗುಣಮಟ್ಟದ ಶಿಕ್ಷಣ ಖಾತರಿಪಡಿಸುವ ಅತ್ಯುತ್ತಮ ಮಾರ್ಗ ಎಂದು ನಾನು ಭಾವಿಸುವುದಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ. ಆರ್ಥಿಕ ಪ್ರೋತ್ಸಾಹ ನೀಡುವುದರಿಂದಲೇ ಗುಣಮಟ್ಟದ ಶಿಕ್ಷಣ ನೀಡಬಹುದು ಎಂದು ನಾನು ಭಾವಿಸುವುದಿಲ್ಲ, "ಎಂಬುದಾಗಿಯೂ ರಾಹುಲ್‌ ಹೇಳಿದ್ದಾರೆ.

"ನಮ್ಮ ದೇಶದ ಅತ್ಯುತ್ತಮ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಎಂದು ನಾನು ಅನೇಕ ಬಾರಿ ಹೇಳಿದ್ದೇನೆ, ಅವುಗಳಲ್ಲಿ ಐಐಟಿ ಕೂಡ ಒಂದು. ಸರ್ಕಾರಗಳು ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕೆಂದು ನಾನು ವಾದಿಸುತ್ತೇನೆ" ಎಂದು ಅವರು ಐಐಟಿ ಮದ್ರಾಸ್ ವಿದ್ಯಾರ್ಥಿಗಳಿಗೆ ರಾಹುಲ್‌ ಹೇಳಿದರು.

ಯೋಚಿಸುವ ಸ್ವಾತಂತ್ರ್ಯದ ಕೊರತೆ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುವ ವಿಧಾನದಲ್ಲಿ ಬಿಜೆಪಿ ಗಂಭೀರ ಸಮಸ್ಯೆಗಳನ್ನು ಹೊಂದಿದೆ ಎಂದು ರಾಹುಲ್ ಹೇಳಿದರು. "ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆ ನಮ್ಮ ಮಕ್ಕಳ ಕಲ್ಪನೆಯನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಇದು ತುಂಬಾ ನಿರ್ಬಂಧಿತ ವ್ಯವಸ್ಥೆ. ಕಿರಿದಾದ ವ್ಯಾಪ್ತಿ ಹೊಂದಿದೆ " ಎಂದು ಅವರು ಹೇಳಿದರು.

ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸಾವಿರಾರು ಮಕ್ಕಳೊಂದಿಗೆ ನಾನು ಮಾತನಾಡಿದ್ದೆ. ಅವರೆಲ್ಲರೂ ವಕೀಲರು, ವೈದ್ಯರು, ಎಂಜಿನಿಯರ್ ಅಥವಾ ಸೇನಾ ಸೈನಿಕನಾಗಲು ಬಯಸುತ್ತೇವೆ ಎಂದು ಹೇಳುತ್ತಿದ್ದರು ಎಂದು ರಾಹುಲ್‌ ಹೇಳಿದರು.

"ಮೇಲಿನ ಐದು ಉದ್ಯೋಗಗಳು ಮಾತ್ರ ದೇಶದಲ್ಲಿ ಇವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಮ್ಮ ವ್ಯವಸ್ಥೆಯು ಅದನ್ನೇ ಮುಂದಿಡುತ್ತಿದೆ" ಎಂದು ಅವರು ರಾಹುಲ್‌ ಹೇಳಿದರು. ಒಬ್ಬರು ಎಂಜಿನಿಯರ್ ಅಥವಾ ವೈದ್ಯರಾದರೆ, ಅಥವಾ ಐಎಎಸ್ / ಐಪಿಎಸ್‌ಗೆ ಸೇರಿದರೆ ಅಥವಾ ಸೇನೆಗೆ ಸೇರುವುದೇ ದೇಶದ ಶಿಕ್ಷಣ ವ್ಯವಸ್ಥೆಯ ಗುರಿಯಾಗಿದೆ. ಇದು ನಮ್ಮ ದೇಶದ ಜನಸಂಖ್ಯೆಯ ಕೆಲವೇ ಪ್ರತಿಶತ ಉದ್ಯೋಗಗಳಾಗಿವೆ ಎಂದು ರಾಹುಲ್‌ ಹೇಳಿದರು.

ದೈಹಿಕ ಸದೃಢತೆಗೆ ರಾಹುಲ್ ಒತ್ತು

ದೇಶದ ಶಿಕ್ಷಣ ವ್ಯವಸ್ಥೆಯು ಅತ್ಯಂತ ಶ್ರೇಣೀಕೃತ ರಚನೆಯಾಗಿದೆ ಎಂದು ಹೇಳಿದ ರಾಹುಲ್‌ , ಅದರ ಸಾಂಪ್ರದಾಯಿಕ ವ್ಯವಸ್ಥೆಯು ಆತ್ಮಾವಲೋಕನ, ಆಂತರಿಕ ನೋಟ ಮತ್ತು ಸ್ವಯಂ ಅವಲೋಕನ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಮಕ್ಕಳನ್ನು ನಾವೀನ್ಯತೆಗಾಗಿ ರೂಪಿಸಬೇಕಾಗಿದೆ ಎಂದು ರಾಹುಲ್ ಒಲವು ತೋರಿದರು. ಮಕ್ಕಳ ಕೌಶಲದ ಮೇಲೆ ಹೂಡಿಕೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.  

Tags:    

Similar News