NEET UG 2024| ಮರುಪರೀಕ್ಷೆ:ಹರಿಯಾಣ ನೀಟ್‌ ಕೇಂದ್ರ ಮೊದಲಿನ ಸಾಧನೆ ಮಾಡುವಲ್ಲಿ ವಿಫಲ

ಮರುಪರೀಕ್ಷೆಯಲ್ಲಿ ಅತ್ಯಧಿಕ ಸ್ಕೋರ್ 682: 13 ವಿದ್ಯಾರ್ಥಿಗಳು ಮಾತ್ರ 600 ಅಂಕ ಗಳಿಸಿದ್ದಾರೆ. ಇದು ಮೇ 5 ರ ಪರೀಕ್ಷೆಯ ಫಲಿತಾಂಶಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.

Update: 2024-07-20 13:28 GMT

ನೀಟ್-ಯುಜಿ ಮರುಪರೀಕ್ಷೆ ತೆಗೆದುಕೊಂಡಿದ್ದ ಹರಿಯಾಣದ ನೀಟ್‌ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಹಿಂದಿನ ಸಾಧನೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಈ ಹಿಂದೆ ಕೇಂದ್ರದ ಆರು ವಿದ್ಯಾರ್ಥಿಗಳು 720 ಅಂಕಗಳಲ್ಲಿ 720 ಅಂಕ ಗಳಿಸಿದ್ದರು. ಆದರೆ, ಮರುಪರೀಕ್ಷೆಯಲ್ಲಿ ಯಾರೂ 682 ಅಂಕಗಳಿಗಿಂತ ಹೆಚ್ಚು ಅಂಕ ಗಳಿಸಿಲ್ಲ.

ಹರಿಯಾಣದ ಬಹದ್ದೂರ್‌ಗಢದಲ್ಲಿರುವ ಹರದಯಾಲ್ ಪಬ್ಲಿಕ್ ಸ್ಕೂಲ್‌ನಲ್ಲಿ 494 ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿಒಬ್ಬ ವಿದ್ಯಾರ್ಥಿ ಮಾತ್ರ ಗರಿಷ್ಠ ಸ್ಕೋರ್ 682 ಗಳಿಸಿದ್ದಾನೆ. 13 ವಿದ್ಯಾರ್ಥಿಗಳು 600 ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮೇ 5 ರ ಫಲಿತಾಂಶಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. 

ಮರುಪರೀಕ್ಷೆ ಏಕೆ?: ನೀಟ್‌ ಪರೀಕ್ಷೆಯಲ್ಲಿ ಆರು ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದರು. ಇದು ವ್ಯಾಪಕ ಅನುಮಾನ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಕೃಪಾಂಕಗಳನ್ನು ರದ್ದುಗೊಳಿಸಿತು. 1,563 ಅಭ್ಯರ್ಥಿಗಳಿಗೆ ಮರುಪರೀಕ್ಷೆಗೆ ಆದೇಶಿಸಿತು. ಇವರಲ್ಲಿ 800 ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು. ಮೇ ತಿಂಗಳಲ್ಲಿ ಈ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಇಬ್ಬರು ಅಭ್ಯರ್ಥಿಗಳು 718 ಮತ್ತು 719 ಅಂಕ ಗಳಿಸಿದ್ದರು.

ಫಲಿತಾಂಶ ಪ್ರಕಟ: ಸುಪ್ರೀಂ ಕೋರ್ಟ್ ಆದೇಶದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯು ಶನಿವಾರ (ಜುಲೈ 20) ನೀ‌ಟ್-ಯುಜಿ ಪರೀಕ್ಷೆಯ ಕೇಂದ್ರವಾರು ಮತ್ತು ನಗರವಾರು ಫಲಿತಾಂಶಗಳನ್ನು ಪ್ರಕಟಿಸಿದೆ. ಆಕಾಂಕ್ಷಿಗಳ ಗುರುತನ್ನು ಮರೆಮಾಚಲಾಗಿದೆ. ಇತರ ಕೇಂದ್ರಗಳ ಅಭ್ಯರ್ಥಿಗಳಿಗೆ ಹೋಲಿಸಿದರೆ ಕಳಂಕಿತ ಕೇಂದ್ರಗಳ ಅಭ್ಯರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸಿದ್ದಾರೆಯೇ ಎಂದು ಪರಿಶೀಲಿಸಲು ಇದು ನೆರವಾಗಲಿದೆ.

ಜುಲೈ 22 ರಂದು ಸುಪ್ರೀಂ ಕೋರ್ಟ್ ಈ ಕುರಿತು ವಿಚಾರಣೆಯನ್ನು ಪುನರಾರಂಭಿಸಲಿದೆ.

Tags:    

Similar News