ಕೇರಳ ಎಕ್ಸ್‌ಪ್ರೆಸ್ | ತುರ್ತು ನಿಲುಗಡೆಯಿಂದ ತಪ್ಪಿದ ಅನಾಹುತ

Update: 2024-10-01 12:13 GMT

ಲಲಿತ್‌ಪುರ (ಯುಪಿ): ತುರ್ತು ನಿಲುಗಡೆಯಿಂದ ಕೇರಳ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಮುರಿದ ಹಳಿಗಳ ಮೇಲೆ ಉರುಳುವುದನ್ನುತಪ್ಪಿಸಿ, ಅನಾಹುತವನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 

ತಿರುವನಂತಪುರದಿಂದ ನವದೆಹಲಿಗೆ ತೆರಳುತ್ತಿದ್ದ ಕೇರಳ ಎಕ್ಸ್‌ಪ್ರೆಸ್‌, ನಿಗದಿತ ಸಮಯಕ್ಕಿಂತ ವಿಳಂಬವಾಗಿತ್ತು. ಮಧ್ಯಪ್ರದೇಶದ ಬಿನಾ ನಿಲ್ದಾಣದಿಂದ ಹೊರಟು ಉತ್ತರಪ್ರದೇಶದ ಝಾನ್ಸಿ ನಿಲ್ದಾಣಕ್ಕಿಂತ ಹಿಂದೆ ನಿಂತಿತು. ʻಹಳಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ರೈಲಿಗೆ ಕೆಂಪು ಬಾವುಟ ತೋರಿಸಿದ್ದು, ಲೋಕೋ ಪೈಲಟ್‌ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದರು. ವಿಷಯ ತನಿಖೆಯಲ್ಲಿದೆ. ಯಾವುದೇ ಉದ್ಯೋಗಿ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳ ಲಾಗುವುದು,ʼ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. 

ಆನಂತರ ರೈಲು ಝಾನ್ಸಿಯ ವೀರಾಂಗನಾ ಲಕ್ಷ್ಮೀಬಾಯಿ ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಮಾಡಿತು; ಅಲ್ಲಿ ಕೆಲವು ಪ್ರಯಾಣಿಕರು ತಮ್ಮ ಅನುಭವ ಹಂಚಿಕೊಂಡರು. 

ʻಕೆಲವು ಕಾರ್ಮಿಕರು ಕೆಂಪು ಧ್ವಜ ತೋರಿಸಿದರು.ಆನಂತರ ತುರ್ತು ಬ್ರೇಕ್‌ ಹಾಕಲಾಯಿತು.ಹಳಿ ಮುರಿದುಹೋದ ಸ್ಥಳಕ್ಕಿಂತ ಮೊದಲೇ ನಿಂತಿತು. ಅಷ್ಟರಲ್ಲಿ ಮೂರು ಬೋಗಿಗಳು ಬಿರುಕು ಬಿಟ್ಟ ಸ್ಥಳವನ್ನು ದಾಟಿ ಹೋಗಿದ್ದವು,ʼ ಎಂದು ಪ್ರಯಾಣಿಕರು ತಿಳಿಸಿದರು. 

ʻದುರಸ್ತಿಯಲ್ಲಿ ನಿರತರಾಗಿದ್ದ ಕೆಲವು ಕಾರ್ಮಿಕರು ರೈಲು ಬರುತ್ತಿರುವುದನ್ನು ಕಂಡು ಓಡಿಹೋದರು,ʼ ಎಂದು ಅವರು ಹೇಳಿದರು.


Tags:    

Similar News