ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತಿದ್ದ ಇಡಿ ತಂಡದ ಮೇಲೆ ದಾಳಿ
ನೈಋತ್ಯ ದೆಹಲಿಯ ಕಪಶೇರಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಬಿಜ್ವಾಸನ್ ಪ್ರದೇಶದಲ್ಲಿ ಘಟನೆ ನಡೆದಿದೆ., ಅಧಿಕಾರಿಗಳು ತೋಟದ ಮನೆಯೊಂದಕ್ಕೆ ಪರಿಶೀಲನೆಗೆ ತೆರಳಿದ್ದ ವೇಳೆ ದಾಳಿ ನಡೆಸಲಾಗಿದೆ.
ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶೋಧ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ತಂಡದ ಮೇಲೆ ಗುರುವಾರ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಆರೋಪಿ ಅಶೋಕ್ ಶರ್ಮಾ ತಂಡದ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
ನೈಋತ್ಯ ದೆಹಲಿಯ ಕಪಶೇರಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಬಿಜ್ವಾಸನ್ ಪ್ರದೇಶದಲ್ಲಿ ಘಟನೆ ನಡೆದಿದೆ., ಅಧಿಕಾರಿಗಳು ತೋಟದ ಮನೆಯೊಂದಕ್ಕೆ ಪರಿಶೀಲನೆಗೆ ತೆರಳಿದ್ದ ವೇಳೆ ದಾಳಿ ನಡೆಸಲಾಗಿದೆ.
ದಾಳಿಯ ಸಮಯದಲ್ಲಿ ಜಾರಿ ಅಧಿಕಾರಿಗೆ (ಇಒ) ಸಣ್ಣಪುಟ್ಟ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರು ಶೋಧ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಪಿವೈವೈಪಿಎಲ್ ಅಪ್ಲಿಕೇಶನ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಹೋಗಿದ್ದರು.
ಅಶೋಕ್ ಶರ್ಮಾ ಮತ್ತು ಅವರ ಸಹೋದರ ಸೇರಿದಂತೆ ಪ್ರಕರಣದ ಪ್ರಮುಖ ಆರೋಪಿಗಳು ಇಡಿ ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಫಿಶಿಂಗ್, ಕ್ಯೂಆರ್ ಕೋಡ್ ವಂಚನೆ, ಅರೆಕಾಲಿಕ ಉದ್ಯೋಗ ವಂಚನೆಯಂತಹ ಸೈಬರ್ ಅಪರಾಧಗಳ ಬಗ್ಗೆ ಐ 4 ಸಿ ಮತ್ತು ಹಣಕಾಸು ಗುಪ್ತಚರ ಘಟಕದಿಂದ (ಎಫ್ಐಯು) ಇಡಿ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸೈಬರ್ ವಂಚನೆಯ ಮೂಲಕ ಗಳಿಸಿದ ಹಣವನ್ನು 15,000 'ನಕಲಿ' ಖಾತೆಗಳ ಮೂಲಕ ಲೇಯರ್ ಮಾಡಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ವಿತ್‌ಡ್ರಾ ಮಾಡಲಾಗಿತ್ತು.
ಈ ಕಾರ್ಡ್‌ಗಳನ್ನುಬಳಸಿಕೊಂಡು, ಯುಎಇ ಮೂಲದ ಪೈಪ್ಲ್ ಪಾವತಿ ಅಗ್ರಿಗೇಟರ್ ಮೂಲಕ ವರ್ಚುವಲ್ ಅಕೌಂಟ್ ಮೂಲಕ ಕಳುಹಿಸಲಾಗಿದೆ. ಕ್ರಿಪ್ಟೋ ಕರೆನ್ಸಿ ಖರೀದಿಸಲು ಪೈಪ್ಲ್‌ನಿಂದ ಹಣ ಬಳಸಲಾಗಿದೆ ಎಂದು ಕಂಡುಬಂದಿದೆ.
ಈ ಜಾಲವನ್ನು ಕೆಲವು ಚಾರ್ಟರ್ಡ್ ಅಕೌಂಟೆಂಟ್‌ಗಳು (ಸಿಎ) ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.