ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಲಘು ಭೂಕಂಪ
ಚಂದ್ರಾಪುರದಲ್ಲಿ, ನಗರದ ಬಲ್ಲಾರ್ಪುರದ ಕೆಲವು ಭಾಗಗಳು ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಹಸಿಲ್ಗಳಲ್ಲಿಯೂ ಲಘು ಭೂಕಂಪನದ ಅನುಭವವಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.;
ತೆಲಂಗಾಣದ ಮುಲುಗು ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ (ಡಿಸೆಂಬರ್ 4ರಂದು) ಭೂಕಂಪದ ಅನುಭವವಾಗಿದೆ. ನಂತರ ಮಹಾರಾಷ್ಟ್ರದ ನಾಗ್ಪುರ, ಗಡ್ಚಿರೋಲಿ ಮತ್ತು ಚಂದ್ರಾಪುರ ಜಿಲ್ಲೆಗಳಲ್ಲಿ ನಡುಕ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 7.27 ಕ್ಕೆ ಮುಲುಗುವಿನಲ್ಲಿ 5.3 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವಾರು ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಸಿಸಿಟಿವಿ ದೃಶ್ಯಾವಳಿಗಳು ಕ್ಯಾಮೆರಾದ ಲಘು ಅಲುಗಾಡುವಿಕೆಯನ್ನು ತೋರಿಸಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂಲಗಳು ಮತ್ತು ಸ್ಥಳೀಯ ನಿವಾಸಿಗಳ ಪ್ರಕಾರ ನಾಗ್ಪುರದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ತೆಲಂಗಾಣಕ್ಕೆ ಬಹಳ ಹತ್ತಿರದಲ್ಲಿರುವ ಗಡ್ಚಿರೋಲಿಯಲ್ಲಿಯೂ ಲಘು ಭೂಕಂಪನಗಳು ಸಂಭವಿಸಿವೆ ಎಂದು ಜಿಲ್ಲಾ ಮಾಹಿತಿ ಕಚೇರಿ ತಿಳಿಸಿದೆ.
ಚಂದ್ರಾಪುರದಲ್ಲಿ, ನಗರದ ಬಲ್ಲಾರ್ಪುರದ ಕೆಲವು ಭಾಗಗಳು ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಹಸಿಲ್ಗಳಲ್ಲಿಯೂ ಲಘು ಭೂಕಂಪನದ ಅನುಭವವಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂದ್ರಾಪುರ ಜಿಲ್ಲಾಧಿಕಾರಿ ವಿನಯ್ ಗೌಡ ಅವರು ಆತಂಕಕ್ಕೆ ಒಳಗಗಾದಂತೆ ಜನರಿಗೆ ಮನವಿ ಮಾಡಿದ್ದಾರೆ. ಭೂಕಂಪನವು ಮತ್ತೆ ಸಂಭವಿಸಿದರೆ ಜಾಗರೂಕರಾಗಿರಲು ಮತ್ತು ಕಟ್ಟಡಗಳ ಹೊರಗಿನ ತೆರೆದ ಸ್ಥಳಗಳಿಗೆ ಹೋಗುವಂತೆ ಸೂಚನೆ ನೀಡಿದ್ದಾರೆ.
ಭೂಕಂಪದ ಕೇಂದ್ರಬಿಂದುದಿಂದ 200 ರಿಂದ 300 ಕಿ.ಮೀ ದೂರದಲ್ಲಿದೆ. ಹೀಗಾಗಿ ಭೂಕಂಪನದ ಅನುಭವವಾಗಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.