ರೆಮಲ್ ಪರಿಣಾಮ: ಮಾನ್ಸೂನ್ ಇಂದು ಕರಾವಳಿ ಪ್ರವೇಶ
ಕೇರಳದ ಹವಾಮಾನ ಇಲಾಖೆ ಹೇಳಿದ್ದಕ್ಕಿಂತ ಒಂದು ದಿನ ಮುಂಚಿತವಾಗಿ ಮುಂಗಾರು ಪ್ರಾರಂಭವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯವಾಗಿ ಮುಂಗಾರು ಜೂನ್ 5ರಿಂದ ಆರಂಭವಾಗುತ್ತದೆ.
ರೆಮಲ್ ಚಂಡಮಾರುತದಿಂದ ಉತ್ತೇಜಿತಗೊಂಡಿರುವ ನೈಋತ್ಯ ಮಾನ್ಸೂನ್ ಇಂದು (ಮೇ 30) ಕೇರಳ ಕರಾವಳಿ ಹಾಗೂ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಕೇರಳದಲ್ಲಿ ಮುಂಗಾರು ಹವಾಮಾನ ಕಚೇರಿಯ ಮುನ್ಸೂಚನೆಗಿಂತ ಒಂದು ದಿನ ಮುಂಚಿತವಾಗಿ ಹಾಗೂ ಅರುಣಾಚಲ ಪ್ರದೇಶ, ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಒಂದು ವಾರ ಮೊದಲು ಮುಂಗಾರು ಆರಂಭಗೊಳ್ಳಲಿದೆ. ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯವಾಗಿ ಮುಂಗಾರು ಜೂನ್ 5 ರಿಂದ ಆರಮಭವಾಗುತ್ತದೆ.
ರೆಮಲ್ ಪರಿಣಾಮ: ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಮೂಲಕ ಭಾನುವಾರ ಆಗಮಿಸಿದ ರೆಮಲ್ ಚಂಡಮಾರುತವು ಮಾನ್ಸೂನ್ ಹರಿವನ್ನು ಬಂಗಾಳ ಕೊಲ್ಲಿಗೆ ಸೆಳೆದಿದೆ ಎಂದು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ. ಈಶಾನ್ಯದಲ್ಲಿ ಮುಂಗಾರು ಬೇಗ ಆರಂಭವಾಗಲು ಇದು ಒಂದು ಕಾರಣ ಆಗಿರಬಹುದು.
ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮೇ ತಿಂಗಳು ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಕಚೇರಿ ಅಂಕಿಅಂಶಗಳು ತೋರಿಸಿವೆ. ʻಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ನೈಋತ್ಯ ಮುಂಗಾರು ಪ್ರಾರಂಭವಾಗಲು ಅನುಕೂಲಕರ ಪರಿಸ್ಥಿತಿ ಇದೆ,ʼ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇ 31 ರೊಳಗೆ ಕೇರಳದಲ್ಲಿ ಮುಂಗಾರು ಪ್ರಾರಂಭವಾಗಲಿದೆ ಎಂದು ಇಲಾಖೆ ಮೇ 15 ರಂದು ಹೇಳಿತ್ತು.
ʻದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಮಾಲ್ಡೀವ್ಸ್ ನ ಉಳಿದ ಭಾಗಗಳು, ಕೊಮೊರಿನ್, ಲಕ್ಷದ್ವೀಪ, ನೈಋತ್ಯ ಮತ್ತು ಮಧ್ಯ ಬಂಗಾಳ ಕೊಲ್ಲಿ, ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ನೈಋತ್ಯ ಮುಂಗಾರು ಮುನ್ನಡೆಯಲು ಅನುಕೂಲಕರ ಪರಿಸ್ಥಿತಿ ಇದೆ,ʼ ಎಂದು ಐಎಂಡಿ ಹೇಳಿದೆ.
ಎಲ್ಲರ ಕಣ್ಣು ಮುಂಗಾರು ಮೇಲೆ: ಮುಂಗಾರು ದೇಶದ ಕೃಷಿಗೆ ನಿರ್ಣಾಯಕ ಅಂಶವಾಗಿದೆ. ಒಟ್ಟು ಕೃಷಿ ಪ್ರದೇಶದ ಶೇ.52ರಷ್ಟು ಮುಂಗಾರನ್ನು ಅವಲಂಬಿಸಿದೆ. ವಿದ್ಯುತ್ ಉತ್ಪಾದನೆ ಹೊರತಾಗಿ ಕುಡಿಯುವ ನೀರು ಪೂರೈಸುವ ಜಲಾಶಯಗಳನ್ನು ಮರುಪೂರಣಗೊಳಿಸಲು ಮುಂಗಾರು ಅತ್ಯಗತ್ಯ. ಜೂನ್ ಮತ್ತು ಜುಲೈ ಅನ್ನು ಪ್ರಮುಖ ಮುಂಗಾರು ತಿಂಗಳುಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಖಾರಿಫ್ ಬೆಳೆಯ ಹೆಚ್ಚಿನ ಬಿತ್ತನೆ ಈ ಅವಧಿಯಲ್ಲಿ ನಡೆಯುತ್ತದೆ.
ಎಲ್ ನಿನೋ ಮತ್ತು ಲಾ ನಿನಾ: ಎಲ್ ನಿನೊ ಪರಿಸ್ಥಿತಿ ಪ್ರಸ್ತುತ ಚಾಲ್ತಿಯಲ್ಲಿದೆ ಮತ್ತು ಲಾ ನಿನಾ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಪ್ರಾರಂಭ ಆಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಲ್ ನಿನೊ ಮಧ್ಯ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರಿನ ಆವರ್ತಕ ಬಿಸಿಯಾಗು ವಿಕೆಯಿಂದ ದುರ್ಬಲ ಮಾನ್ಸೂನ್ ಮಾರುತಗಳು ಮತ್ತು ಶುಷ್ಕ ಪರಿಸ್ಥಿತಿಗೆ ಕಾರಣವಾಗಲಿದೆ. ಲಾ ನಿನಾ ಮುಂಗಾರಿನಲ್ಲಿ ಹೇರಳ ಮಳೆಗೆ ಕಾರಣವಾಗುತ್ತದೆ.
ಹವಾಮಾನ ಇಲಾಖೆಯು ಹಿಂದೂ ಮಹಾಸಾಗರದಲ್ಲಿ ಪಶ್ಚಿಮಕ್ಕೆ ಹೋಲಿಸಿದರೆ ಪೂರ್ವದಲ್ಲಿ ಭಾರತೀಯ ಸಮುದ್ರ ದ್ವಿಧ್ರುವ (ಐಒಡಿ) ಅಂದರೆ, ಸಾಮಾನ್ಯಕ್ಕಿಂತ ತಂಪಾಗಿರುವ ಹಿಂದೂ ಮಹಾಸಾಗರವನ್ನು ನಿರೀಕ್ಷಿಸುತ್ತಿದೆ. ಇದರಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಉತ್ತಮ ಮಳೆ ತರಲು ಸಹಾಯ ಮಾಡುತ್ತದೆ. ಪ್ರಸ್ತುತ ಐಒಡಿ ತಟಸ್ಥವಾಗಿದ್ದು, ಆಗಸ್ಟ್ ವೇಳೆಗೆ ಬದಲಾಗುವ ನಿರೀಕ್ಷೆಯಿದೆ. ಉತ್ತರ ಗೋಳಾ ರ್ಧ ಮತ್ತು ಯುರೇಷಿಯಾದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಿಮದ ಹೊದಿಕೆ ಇರುವುದು ಇನ್ನೊಂದು ಅಂಶ.