ಮಾನನಷ್ಟ ಪ್ರಕರಣ: ಧ್ರುವ ರಾಥಿಗೆ ಸಮನ್ಸ್

ಧ್ರುವ ರಾಥಿ ಅವರು ಆಧಾರರಹಿತ ಆರೋಪ ಮಾಡಿದ್ದಾರೆ. ತಮ್ಮನ್ನುʻಹಿಂಸಾಪ್ರವೃತ್ತಿಯ ಮತ್ತು ನಿಂದನೀಯʼ ವ್ಯಕ್ತಿ ಎಂದು ಕರೆದಿದ್ದಾರೆ ಎಂದು ಬಿಜೆಪಿ ನಾಯಕ ಸುರೇಶ್ ಕರಮ್ಶಿ ನಖುವಾ ಆರೋಪಿಸಿದ್ದರು.

Update: 2024-07-24 10:08 GMT

ಬಿಜೆಪಿ ನಾಯಕರೊಬ್ಬರು ದಾಖಲಿಸಿದ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಯುಟ್ಯೂಬರ್ ಧ್ರುವ ರಾಥಿ ಅವರಿಗೆ ದೆಹಲಿಯ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ಜುಲೈ 7 ರಂದು ರಾಥಿ ಅವರು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ತಮ್ಮನ್ನು ʻಹಿಂಸಾಪ್ರವೃತ್ತಿಯ ಮತ್ತು ನಿಂದನೀಯʼ ವ್ಯಕ್ತಿ ಎಂದು ಕರೆದಿದ್ದಾರೆ ಎಂದು ಬಿಜೆಪಿ ನಾಯಕ ಸುರೇಶ್ ಕರಮ್ಶಿ ನಖುವಾ ಆರೋಪಿಸಿದ್ದರು. 

ದೆಹಲಿಯ ಸಾಕೇತ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಗುಂಜನ್ ಗುಪ್ತಾ ಅವರು ಜುಲೈ 19 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ರಾಥಿ ಅವರಿಗೆ ಸೂಚಿಸಿದ್ದಾರೆ. ರಾಥಿ ನೋಟಿಸ್ ಸ್ವೀಕರಿಸಿದ್ದು, ಪ್ರಕರಣವನ್ನು ಆಗಸ್ಟ್ 6ಕ್ಕೆ ವಿಚಾರಣೆ ಮುಂದೂಡಲಾಗಿದೆ. 

ನಖುವಾ ಅವರ ಆರೋಪ: ರಾಥಿ ಅವರು ವಿಡಿಯೋದಲ್ಲಿ ʻನೇರವಾದ, ಆಧಾರರಹಿತ ಆರೋಪ ಮಾಡಿದ್ದಾರೆ. ತಮ್ಮನ್ನು ʻಹಿಂಸಾಪ್ರವೃತ್ತಿ ಯ, ನಿಂದನೀಯʼ ವ್ಯಕ್ತಿ ಎಂದು ಕರೆದಿದ್ದಾರೆ. ಈ ಆರೋಪಗಳು ಯಾವುದೇ ತರ್ಕ ಅಥವಾ ಕಾರಣ ಹೊಂದಿಲ್ಲ. ಇದರಿಂದ ತಮ್ಮ ಖ್ಯಾತಿಗೆ ಧಕ್ಕೆಯಾಗಿದೆ ಎಂದು ನಖುವಾ ಹೇಳಿದರು. 

ರಾಥಿ ವ್ಲಾಗರ್ ಆಗಿದ್ದು, ಸಾಮಾಜಿಕ, ರಾಜಕೀಯ ಮತ್ತು ಪರಿಸರ ಸಮಸ್ಯೆ ಕುರಿತ ಯುಟ್ಯೂಬ್‌ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸುಮಾರು 28.7 ದಶಲಕ್ಷ ಚಂದಾದಾರರನ್ನು ಹೊಂದಿದ್ದು, ವಿಡಿಯೋಗಳನ್ನು 4.86 ಶತಕೋಟಿ ಮಂದಿ ವೀಕ್ಷಿಸಿದ್ದಾರೆ. 

Tags:    

Similar News