ಸೈಬರ್ ವಂಚನೆ ಜಾಲ: 8.5 ಲಕ್ಷ ಬೇನಾಮಿ ಖಾತೆ ಪತ್ತೆ, ಸಿಬಿಐನಿಂದ ಬ್ಯಾಂಕ್ ಅಧಿಕಾರಿಗಳ ವಿಚಾರಣೆ
ಸಿಬಿಐ ನಡೆಸಿದ ಎರಡು ತಿಂಗಳ ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹಲವು ನಿರ್ಣಾಯಕ ಲೋಪಗಳು ಬೆಳಕಿಗೆ ಬಂದಿವೆ. ಅಸಂಖ್ಯಾತ ಬೇನಾಮಿ ಖಾತೆಗಳಲ್ಲಿ ನಿಗದಿತ ಹಣಕಾಸು ಮಿತಿಯನ್ನು ವೇಗವಾಗಿ ಮೀರಿಸುವ ವಹಿವಾಟುಗಳು ನಡೆದಿದ್ದರೂ, ಬ್ಯಾಂಕ್‌ಗಳು ಸಂದೇಹಾಸ್ಪದ ವಹಿವಾಟು ವರದಿಗಳನ್ನು (STR) ಸೃಷ್ಟಿಸುವಲ್ಲಿ ವಿಫಲವಾಗಿವೆ.;
ಸಿಬಿಐ
ಸೈಬರ್ ಅಪರಾಧದ ಪ್ರಮಾಣ ಮತ್ತು ಹರಡುವಿಕೆಯ ಬಗ್ಗೆ ಆತಂಕ ಹೆಚ್ಚಾಗುತ್ತಿದ್ದಂತೆ, ಸಿಬಿಐ ತನ್ನ ಪ್ರಾಥಮಿಕ ತನಿಖೆಯನ್ನು ಎಫ್‌ಐಆರ್ ಆಗಿ ಪರಿವರ್ತಿಸಿ, ಕಳೆದ ವಾರ ದೇಶಾದ್ಯಂತ ದಾಳಿಗಳನ್ನು ನಡೆಸಿದೆ.
ದೇಶಾದ್ಯಂತ ಸೈಬರ್ ಅಪರಾಧ ಸಿಂಡಿಕೇಟ್‌ಗಳ ಸಹಯೋಗದೊಂದಿಗೆ, ಅಪರಾಧದಿಂದ ಬಂದ ಹಣವನ್ನು ವರ್ಗಾಯಿಸಲು 8.5 ಲಕ್ಷಕ್ಕೂ ಹೆಚ್ಚು ಬೇನಾಮಿ ಖಾತೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ, ಸಿಬಿಐ (ಕೇಂದ್ರೀಯ ತನಿಖಾ ದಳ) ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲು ಸಿದ್ಧತೆ ನಡೆಸಿದೆ. ಈ ಬೃಹತ್ ಜಾಲವು ದೇಶಾದ್ಯಂತ 743 ಬ್ಯಾಂಕ್ ಶಾಖೆಗಳಲ್ಲಿ ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.
ಸಿಬಿಐ ನಡೆಸಿದ ಎರಡು ತಿಂಗಳ ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹಲವು ನಿರ್ಣಾಯಕ ಲೋಪಗಳು ಬೆಳಕಿಗೆ ಬಂದಿವೆ. ಅಸಂಖ್ಯಾತ ಬೇನಾಮಿ ಖಾತೆಗಳಲ್ಲಿ ನಿಗದಿತ ಹಣಕಾಸು ಮಿತಿಯನ್ನು ವೇಗವಾಗಿ ಮೀರಿಸುವ ವಹಿವಾಟುಗಳು ನಡೆದಿದ್ದರೂ, ಬ್ಯಾಂಕ್‌ಗಳು ಸಂದೇಹಾಸ್ಪದ ವಹಿವಾಟು ವರದಿಗಳನ್ನು (STR) ಸೃಷ್ಟಿಸುವಲ್ಲಿ ವಿಫಲವಾಗಿವೆ.
ಖಾತೆ ತೆರೆಯುವಾಗ ಬ್ಯಾಂಕ್ ಅಧಿಕಾರಿಗಳು ಗ್ರಾಹಕ ಜವಾಬ್ದಾರಿ ನಿರ್ವಹಣೆ (Customer Due Diligence – CDD) ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಿಲ್ಲ. ಇದು ಆರಂಭಿಕ ಅಪಾಯದ ಮೌಲ್ಯಮಾಪನ ಮತ್ತು ಗ್ರಾಹಕರ ಸರಿಯಾದ ಗುರುತಿಸುವಿಕೆಗೆ ಅತಿ ಮುಖ್ಯವಾಗಿದೆ. ಈ ಮೂಲಭೂತ ಮೇಲ್ವಿಚಾರಣೆಯ ಕೊರತೆಯಿಂದಾಗಿ ಹಣಕಾಸು ಅಪರಾಧದ ಅಪಾಯಗಳನ್ನು ಸಮರ್ಪಕವಾಗಿ ನಿರ್ಣಯಿಸಲಾಗಿಲ್ಲ. ಸೈಬರ್ ಅಪರಾಧ ಸಿಂಡಿಕೇಟ್‌ಗಳು ಅನಾಮಧೇಯ ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ ಡಿಜಿಟಲ್ ವಂಚನೆಗಳಿಂದ ಬಂದ ಅಕ್ರಮ ಹಣವನ್ನು ಬೇನಾಮಿ ಖಾತೆಗಳ ಮೂಲಕ ವರ್ಗಾಯಿಸಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿದ್ದಾರೆ ಎಂದು ಸಿಬಿಐ ತನ್ನ ಇತ್ತೀಚಿನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.
ಸೈಬರ್ ಅಪರಾಧದ ಪ್ರಮಾಣ ಮತ್ತು ಹರಡುವಿಕೆಯ ಬಗ್ಗೆ ಆತಂಕ ಹೆಚ್ಚಾಗುತ್ತಿದ್ದಂತೆ, ಸಿಬಿಐ ತನ್ನ ಪ್ರಾಥಮಿಕ ತನಿಖೆಯನ್ನು ಎಫ್‌ಐಆರ್ ಆಗಿ ಪರಿವರ್ತಿಸಿ, ಕಳೆದ ವಾರ ದೇಶಾದ್ಯಂತ ದಾಳಿಗಳನ್ನು ನಡೆಸಿತು. ಈ ಕಾರ್ಯಾಚರಣೆಯಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿದ್ದು, ಸಿಬಿಐ ತನ್ನ ಎಫ್‌ಐಆರ್‌ನಲ್ಲಿ 37 ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಿದೆ.
ಸಿಬಿಐ ತನಿಖೆಯಲ್ಲಿ ಎರಡು ರೀತಿಯ ಬೇನಾಮಿ ಖಾತೆಗಳು ಪತ್ತೆಯಾಗಿವೆ: ಸಣ್ಣ ಪ್ರಮಾಣದ ವಹಿವಾಟುಗಳಿಗೆ ಬಳಸಲಾದ ಖಾತೆಗಳು ಮತ್ತು ಕೆಲವೇ ದಿನಗಳಲ್ಲಿ ಹಲವು ವಹಿವಾಟುಗಳನ್ನು ನಡೆಸಿ, ನಿಗದಿತ ಮಿತಿಯನ್ನು ದಾಟುವಂಥ ಖಾತೆಗಳು. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಬೇನಾಮಿ ಖಾತೆ ಎಂದು ಗುರುತಿಸಿದರೆ ಕಡ್ಡಾಯವಾಗಿ ಎಸ್‌ಟಿಆರ್ ಸಲ್ಲಿಸಬೇಕು. ಇದನ್ನು ಮಾಡದಿರುವುದು ಆರ್‌ಬಿಐ ಸುತ್ತೋಲೆಗಳ ಉಲ್ಲಂಘನೆಯಾಗಿದೆ.