ಹುತಾತ್ಮ ಸೈನಿಕರ ಕುಟುಂಬಕ್ಕೆ ಅನುಕೂಲತೆ: ನಿಯಮ ಬದಲಿಸಲು ಕ್ಯಾ.ಅಂಶುಮಾನ್ ಪೋಷಕರ ಮನವಿ

Update: 2024-07-12 10:59 GMT

ಸೇನೆಯಲ್ಲಿ ಕಾರ್ಯನಿರ್ವಹಿಸುವ ಸೈನಿಕನ ಹುತಾತ್ಮರಾದ ನಂತರ ಕುಟುಂಬ ಸದಸ್ಯರಿಗೆ ಆರ್ಥಿಕ ಸಹಾಯಕ್ಕಾಗಿ ಸಂಬಂಧಿಕರ (ಎನ್‌ಒಕೆ) ಮಾನದಂಡದಲ್ಲಿ ಬದಲಾವಣೆಗಳನ್ನು ತರಬೇಕು ಎಂದು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು ಭಾರತೀಯ ಸೇನೆಗೆ ಮನವಿ ಮಾಡಿದ್ದಾರೆ.

ಕ್ಯಾಪ್ಟನ್ ಅಂಶುಮಾನ್ ಸಿಂಗ್ ಜುಲೈ 2023 ರಲ್ಲಿ ಸಿಯಾಚಿನ್‌ನಲ್ಲಿ ಸಂಭವಿಸಿದ ದೊಡ್ಡ ಬೆಂಕಿಯಲ್ಲಿ ಸಾವನ್ನಪ್ಪಿದರು. ಅವರಿಗೆ ಜುಲೈ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಯಿತು. ಈ ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ.

ಹುತಾತ್ಮ ಯೋಧ ಅಂಶುಮಾನ್‌ ಸಿಂಗ್‌ ಅವರ ಪತ್ನಿ ಸತಿ ಸಿಂಗ್‌ ಮತ್ತು ಅವರ ತಾಯಿ ಮಂಜು ದೇವಿ ಈ ಗೌರವವನ್ನು ಸ್ವೀಕರಿಸಿದರು. ಆದರೆ ಇದೀಗ ಹುತಾತ್ಮ ಯೋಧನ ಪೋಷಕರಾದ, ರವಿ ಪ್ರತಾಪ್ ಸಿಂಗ್ ಮತ್ತು ಮಂಜು ಸಿಂಗ್ ಅವರು ಟಿವಿ9 ಭಾರತವರ್ಷ್ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ, ತಮ ಸೊಸೆ ಸತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗ ಹುತಾತನಾಗಿದ್ದರೂ ಏನೂ ಸಿಗಲಿಲ್ಲ. ಸೊಸೆ ಗೌರವ ಮತ್ತು ಪರಿಹಾರದ ಮೊತ್ತ ಎರಡನ್ನೂ ತೆಗೆದುಕೊಂಡಿದ್ದಾಳೆ. ಮಗನೂ ಹೊರಟುಹೋದ, ಸೊಸೆಯೂ ಹೊರಟುಹೋದಳುʼʼ ಎಂದು ಹೇಳಿದರು.

ರವಿ ಪ್ರತಾಪ್ ಸಿಂಗ್ ಮಾತನಾಡಿ, ʻʻಎನ್‌ಒಕೆ (ಸಂಬಂಧಿಕರ ಮುಂದಿನ) ಮಾನದಂಡದಲ್ಲಿ ಬದಲಾವಣೆಯನ್ನು ಬಯಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಜೊತೆಗೂ ಮಾತುಕತೆ ನಡೆಸಲಾಗಿದೆʼʼ ಎಂದು ತಿಳಿಸಿದ್ದಾರೆ.

“ತನ್ನ ಮಗನಿಗೆ 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಅವನಿಗೆ ಯಾವುದೇ ಮಗು ಇಲ್ಲ ಆದರೆ ಈಗ ನಮ ಬಳಿ ಮಗನ ಫೋಟೋ ಹೊರತುಪಡಿಸಿ ಏನೂ ಇಲ್ಲʼʼ ಎಂದು ಅವರು ಹೇಳಿದರು.

ಸೊಸೆ ಈಗ ತಮನ್ನು ಬಿಟ್ಟು ಹೋಗಿದ್ದು, ವಿಳಾಸವನ್ನೂ ಬದಲಾಯಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕೀರ್ತಿ ಚಕ್ರ ಸ್ವೀಕರಿಸುವಾಗ ಅವರ ಪತ್ನಿ (ಹುತಾತ್ಮಅಂಶುಮಾನ್‌ ಅವರ ತಾಯಿ) ಜೊತೆಗಿದ್ದರೂ ಈಗ ನಮ ಮಗನ ಪೆಟ್ಟಿಗೆಗೆ ಹಾಕಲು ಏನೂ ಇಲ್ಲ ಎಂದು ತಂದೆ ಹೇಳಿದರು. ನಮಗೆ ಆದದ್ದು ಯಾರಿಗೂ ಆಗಬಾರದು ಎಂದು ತಂದೆ ಹೇಳಿದರು.

ʻʻಇತರ ಪೋಷಕರು ತೊಂದರೆ ಅನುಭವಿಸಬಾರದು ಎಂದು ಸರ್ಕಾರ NOK ನಿಯಮಗಳನ್ನು ಬದಲಾಯಿಸಬೇಕೆಂದು ಬಯಸುತ್ತೇವೆʼʼ ಎಂದು ಅನ್ಶುಮಾನ್ ಅವರ ತಾಯಿ ಮಂಜು ಸಿಂಗ್ ಅವರು ಹೇಳಿದರು.

NOK ನಿಯಮಗಳು

ಭಾರತೀಯ ಸೇನೆಯ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಸೇವೆಯಲ್ಲಿ ಮರಣಹೊಂದಿದಾಗ, ಮುಂದಿನ ಸಂಬಂಧಿಕರಿಗೆ (ಎನ್ಒಕೆ) ಎಕ್ಸ್-ಗ್ರೇಷಿಯಾ ಮೊತ್ತವನ್ನು ನೀಡಲಾಗುತ್ತದೆ.

ಒಬ್ಬ ವ್ಯಕ್ತಿಯು ಮಿಲಿಟರಿಗೆ ಸೇರಿದಾಗ, ಅವನ ಅಥವಾ ಅವಳ ಪೋಷಕರು ಅಥವಾ ಪೋಷಕರ ಹೆಸರನ್ನು NOK ಎಂದು ದಾಖಲಿಸಲಾಗುತ್ತದೆ. ವ್ಯಕ್ತಿಯು ಮದುವೆಯಾದಾಗ, ಸಂಗಾತಿಯು NOK ಆಗುತ್ತಾರೆ.

ಕ್ಯಾಪ್ಟನ್ ಅಂಶುಮಾನ್ ಮತ್ತು ಸ್ಮೃತಿ

ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ಸಿಯಾಚಿನ್‌ ಗ್ಲೇಸಿಯರ್‌ ಪ್ರದೇಶದಲ್ಲಿ ವೈದ್ಯಕೀಯ ಅಧಿಕಾರಿಯಾಗಿ 26 ಪಂಜಾಬ್‌ನೊಂದಿಗೆ ನಿಯೋಜಿಸಲ್ಪಟ್ಟರು. ಜುಲೈ 19, 2023 ರಂದು, ಬೆಳಿಗ್ಗೆ 3 ಗಂಟೆಯ ಸುಮಾರಿಗೆ ಭಾರತೀಯ ಸೇನೆಯ ಮದ್ದುಗುಂಡುಗಳ ಡಂಪ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಅವಘಡ ಉಂಟಾಗಿತ್ತು. ಈ ವೇಳೆ ತಮ ಸಹೋದ್ಯೋಗಿಗಳ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದ್ದರು. ಹುತಾತ ಯೋಧ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌ ಅವರ ಪೋಷಕರ ಈ ಆರೋಪಗಳಿಗೆ ಪತ್ನಿ ಸತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂಶುಮಾನ್ ಮತ್ತು ಸ್ಮೃತಿ ಅವರು ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೊದಲ ದಿನವೇ ಇಬ್ಬರಿಗೂ "ಮೊದಲ ನೋಟದಲ್ಲೇ ಪ್ರೀತಿ" ಹುಟ್ಟಿತು. ಆದರೆ ಒಂದು ತಿಂಗಳ ನಂತರ, ಅಂಶುಮಾನ್ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ (AFMC) ಆಯ್ಕೆಯಾದರು. ಆಗ ಅವರು ಬೇರ್ಪಟ್ಟರು. 8 ವರ್ಷಗಳ ಕಾಲ ದೂರದ ಸಂಬಂಧವನ್ನು ಉಳಿಸಿಕೊಂಡು ಮುಂದೆ ಮದುವೆಯಾದರು ಎನ್ನುವ ವಿಚಾರವನ್ನು ಸ್ಮೃತಿ ಅವರು ಹೇಳಿದ್ದಾರೆ.

ಅವರ ಮದುವೆಯಾದ ಕೇವಲ ಎರಡು ತಿಂಗಳ ನಂತರ, ಅಂಶುಮಾನ್ ಅವರನ್ನು ಸಿಯಾಚಿನ್‌ಗೆ ನಿಯೋಜಿಸಲಾಯಿತು.

ಸ್ಮೃತಿ ಅವರು ಜುಲೈ 18 ರಂದು ತಮ್ಮ ಪತಿಯೊಂದಿಗೆ ಸುದೀರ್ಘವಾದ ಚಾಟ್ ಮಾಡಿರುವುದಾಗಿ ಹೇಳಿದರು. ಅವರು ತಮ್ಮ ಜೀವನ ಹೇಗಿರುತ್ತದೆ, ಅವರು ಮನೆ ಕಟ್ಟುವುದು ಹೇಗೆ, ಮಕ್ಕಳನ್ನು ಬೆಳೆಸುವುದು ಇತ್ಯಾದಿಗಳನ್ನು ಚರ್ಚಿಸಿದರು. ಮರುದಿನ, ಆಕೆಯ ಪತಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಇನ್ನಿಲ್ಲ ಎಂದು ತಿಳಿಸುವ ಕರೆ ಬಂದಿತು.

ಅವರ ಸಾವಿನ ಒಂದು ವರ್ಷದ ನಂತರವೂ ಅವರ ನಷ್ಟವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಸ್ಮೃತಿ ಅಳಲು ತೊಡಿಕೊಳ್ಳುತ್ತಾರೆ.

ಅಶ್ಲೀಲ ಕಾಮೆಂಟ್‌ ವಿವಾದ

ದೆಹಲಿಯ ನಿವಾಸಿಯೊಬ್ಬರು ಎಕ್ಸ್ ನಲ್ಲಿ ಮಾಡಿದ ಅಶ್ಲೀಲ ಕಾಮೆಂಟ್ ಬಗ್ಗೆ ವಿವಾದ ಭುಗಿಲೆದ್ದಿದೆ.

ರಾಷ್ಟ್ರಪತಿ ಭವನವು X ನಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದೆ.

ಈ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ದೆಹಲಿಯ ಅಹ್ಮದ್ ಕೆ ಎಂಬ ವ್ಯಕ್ತಿ ಅಶ್ಲೀಲ ಹೇಳಿಕೆ ನೀಡಿದ್ದಾರೆ. ಹಲವಾರು ಇತರ ಬಳಕೆದಾರರು ಈ ಪೋಸ್ಟ್‌ಗೆ ಕೋಪದಿಂದ ಪ್ರತಿಕ್ರಿಯಿಸಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯೂ) ದೆಹಲಿ ಪೊಲೀಸರಿಗೆ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಆದಷ್ಟು ಬೇಗ ಬಂಧಿಸುವಂತೆ ಕೇಳಿದೆ.

Tags:    

Similar News