12 ಕೈಗಾರಿಕಾ ಸ್ಮಾರ್ಟ್ ಸಿಟಿಗಳಿಗೆ ಕ್ಯಾಬಿನೆಟ್ ಅನುಮೋದನೆ

ಈ ಯೋಜನೆಯು 10 ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ 30 ಲಕ್ಷ ಜನರಿಗೆ ಉದ್ಯೋಗ ನೀಡಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

Update: 2024-08-28 12:49 GMT

10 ರಾಜ್ಯಗಳಲ್ಲಿ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. 28,602 ಕೋಟಿ ರೂ. ಅಂದಾ ಜು ಹೂಡಿಕೆಯೊಂದಿಗೆ ಸುಮಾರು 10 ಲಕ್ಷ ಜನರಿಗೆ ಉದ್ಯೋಗ ಒದಗಿಸಬಲ್ಲ ಯೋಜನೆಗಳಿಗೆ ಸಂಪುಟ ಸಭೆ ಸಮ್ಮತಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ (ಆಗಸ್ಟ್ 28) ಪ್ರಕಟಿಸಿದರು. 

'ಗ್ರ್ಯಾಂಡ್ ನೆಕ್ಲೆಸ್': ಪ್ರಧಾನಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (ಎನ್‌ಐಸಿಡಿಪಿ) ದಡಿಯಲ್ಲಿ 12 ಹೊಸ ಯೋಜನಾ ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಇದರಿಂದ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಲಿದ್ದು, ದೇಶದ ಕೈಗಾರಿಕಾ ಭೂದೃಶ್ಯ ಬದಲಾಗಲಿದೆ,ʼ ಎಂದು ಹೇಳಿದರು. 

ʻ10 ರಾಜ್ಯಗಳಲ್ಲಿ 6 ಪ್ರಮುಖ ಕಾರಿಡಾರ್‌ಗಳಲ್ಲಿ ಯೋಜಿಸಲಾಗಿದೆ. ಈ ಯೋಜನೆಗಳು ಉತ್ಪಾದನಾ ಸಾಮರ್ಥ್ಯ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲಿವೆʼ ಎಂದು ಹೇಳಿದರು. 

ಉದ್ಯೋಗ ಸೃಷ್ಟಿ: ಸ್ಮಾರ್ಟ್ ಸಿಟಿ ಯೋಜನೆಗಳು ನೇರವಾಗಿ 10 ಲಕ್ಷ ಜನರಿಗೆ ಮತ್ತು ಪರೋಕ್ಷವಾಗಿ 30 ಲಕ್ಷ ಜನರಿಗೆ ಉದ್ಯೋಗ ನೀಡಲಿವೆ ಎಂದು ಸಚಿವರು ಹೇಳಿದರು. ಗ್ರೀನ್‌ಫೀಲ್ಡ್ ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ʻಪ್ಲಗ್ ಎನ್ ಪ್ಲೇʼ ಮತ್ತು ʻವಾಕ್ ಟು ವರ್ಕ್ʼ ಪರಿಕಲ್ಪನೆಗಳೊಂದಿಗೆ ನಿರ್ಮಿಸಲಾಗುವುದು. ಬೃಹತ್ ಕೈಗಾರಿಕೆಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(ಎಂಎಸ್‌ಎಂಇ) ಗಳಿಂದ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇವು 2030 ರ ವೇಳೆಗೆ 2 ಟ್ರಿಲಿಯನ್ ಡಾಲರ್‌ ರಫ್ತು ಸಾಧಿಸಲು ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸರ್ಕಾರ ಹೇಳಿದೆ. 

ಕೈಗಾರಿಕಾ ಸ್ಮಾರ್ಟ್ ಸಿಟಿಗಳು ಎಲ್ಲೆಲ್ಲಿ?: ಉತ್ತರಾಖಂಡದಲ್ಲಿ ಖುರ್ಪಿಯಾ, ಪಂಜಾಬ್‌ನ ರಾಜಪುರ-ಪಟಿಯಾಲ, ಮಹಾರಾಷ್ಟ್ರದ ದಿಘಿ, ಕೇರಳದ ಪಾಲಕ್ಕಾಡ್, ಉತ್ತರ ಪ್ರದೇಶದ ಆಗ್ರಾ, ಉತ್ತರ ಪ್ರದೇಶದ ಪ್ರಯಾಗರಾಜ್, ಬಿಹಾರದ ಗಯಾ, ತೆಲಂಗಾಣದ ಜಹೀರಾಬಾದ್, ಆಂಧ್ರಪ್ರದೇಶದ ಓರ್ವಕಲ್, ಆಂಧ್ರಪ್ರದೇಶದ ಕೊಪ್ಪರ್ತಿ, ರಾಜಸ್ಥಾನದ ಜೋಧ್‌ಪುರ-ಪಾಲಿ.

Tags:    

Similar News