ಕೇಜ್ರಿವಾಲ್‌ ಕೆಳಗಿಳಿಯಲಿ; ಬಿಜೆಪಿ ಪ್ರತಿಭಟನೆ

Update: 2024-08-06 10:08 GMT

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ ಅವರ ಬಂಧನವನ್ನು ಹೈಕೋರ್ಟ್‌ ಎತ್ತಿ ಹಿಡಿದ ನಂತರ, ದೆಹಲಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮಂಗಳವಾರ ತಿಹಾರ್ ಜೈಲಿನ ಹೊರಗೆ ಪ್ರತಿಭಟನೆ ನಡೆಸಿತು.

ತಿಹಾರ್ ಜೈಲಿನ ಹೊರಗೆ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪ್ರತಿಭಟನಾಕಾರರು ಘೋಷಣೆ ಕೂಗಿದರು. 

ʻದಿಲ್ಲಿಯಲ್ಲಿ ಆಡಳಿತವು ಪಾರ್ಶ್ವವಾಯುವಿಗೆ ಒಳಗಾಗಿದೆ. ಹೈಕೋರ್ಟ್‌ ಆದೇಶದ ನಂತರ ಸರ್ಕಾರವನ್ನು ಜೈಲಿನಿಂದ ನಡೆಸುವ ಬದಲು ಕೇಜ್ರಿವಾಲ್ ತಕ್ಷಣವೇ ಕೆಳಗಿಳಿಯಬೇಕು,ʼ ಎಂದು ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಆಗ್ರಹಿಸಿದರು. ʻಎಎಪಿ ಸರ್ಕಾರದ ಯಾವುದೇ ಸಚಿವರು ಸಮಸ್ಯೆಗಳ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿಲ್ಲ. ಬದಲಿಗೆ, ಅವರು ಅಧಿಕಾರಿಗಳ ಮೇಲೆ ಆರೋ ಪ ಹೊರಿಸುವಲ್ಲಿ ನಿರತರಾಗಿದ್ದಾರೆ. ಭ್ರಷ್ಟಾಚಾರ ಹೊಸ ಎತ್ತರಕ್ಕೆ ಏರಿದೆ. ಈ ಗೊಂದಲಕರ ಪರಿಸ್ಥಿತಿಯಿಂದ ದೆಹಲಿಯ ಜನರು ಕುಸಿದಿದ್ದಾರೆ,ʼ ಎಂದು ಆರೋಪಿಸಿದರು. 

ಕೇಜ್ರಿವಾಲ್ ಅವರನ್ನು ಜೂನ್ 26 ರಂದು ತಿಹಾರ್ ಜೈಲಿನಿಂದ ಸಿಬಿಐ ಬಂಧಿಸಿತು. ಅಲ್ಲಿ ಅವರು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗಬಂಧನದಲ್ಲಿದ್ದರು. ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಜೂನ್ 20 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ಆದರೆ, ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತು. ಜುಲೈ 12 ರಂದು ಸುಪ್ರೀಂ ಕೋರ್ಟ್ ಕೂಡ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಿದೆ.

Tags:    

Similar News